ಅವಧಿ ಮುಗಿದ ನಗರಸಭೆ ಮಳಿಗೆ ಹರಾಜಿಲ್ಲ

ಸಿಂಧನೂರು,ಜು.೨೯-
ನಗರ ಸಭೆಯ ಮಳಿಗೆಗಳ ಟೆಂಡರ್ ಹರಾಜು ಅವಧಿ ಮುಕ್ತಾಯವಾಗಿದ್ದು ನಗರಸಭೆಯು ಮರು ಟೆಂಡರ್ ಕರೆಯದೆ ಹರಾಜ ಮಾಡದೆ ಇರುವದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ನಗರದ ಸುಕಾಲಪೇಟೆ ರಸ್ತೆಯಲ್ಲಿರುವ ೪ ನಗರ ಸಭೆಯ ಮಳಿಗೆಗಳು ಟೆಂಡರ್ ಅವಧಿ ಮುಗಿದಿದ್ದು ಮರು ಹರಾಜ ಕರೆದು ಮಳಿಗೆಗಳನ್ನು ವ್ಯಾಪಾರಿಗಳಿಗೆ ನೀಡಬೇಕು. ಆದರೆ ನಗರಸಭೆಯ ಅಧಿಕಾರಿಗಳು ಮರು ಟೆಂಡರ್ ಯಾಕೆ ಕರೆಯುತ್ತಿಲ್ಲ ಎಂಬುದು ಟೆಂಡರ್ ಹರಾಜಿಗಾಗಿ ಕಾಯುತ್ತಿದ್ದ ವ್ಯಾಪಾರಿಗಳ ಅನಿಸಿಕೆಯಾಗಿದೆ.
ಸುಕಾಲಪೇಟೆ ರಸ್ತೆಯಲ್ಲಿರುವ ೪ ಮಳಿಗೆಗಳಲ್ಲಿ ಶ್ರೀನಿವಾಸ, ಪಾರುಖಾ ಸಾಬ, ಎಂ.ಪಾಷಾ ಮೈಹಿಬೂಬ, ಇವರಿಗೆ ೨೦೧೧ ಮಾರ್ಚ್ ೩೧ಕ್ಕೆ ಟೆಂಡರ್ ಹರಾಜಾಗಿದ್ದು ಅಂದಿನಿಂದ ಅವರು ಬಟ್ಟೆ ಅಂಗಡಿ, ಹಾರ್ಡ್ ವೇರ್, ಟೇಷನರಿ, ತರಕಾರಿ ವ್ಯಾಪಾರ ಮಾಡುತ್ತಿದ್ದಾರೆ. ಇವರ ಟೆಂಡರ್ ಹರಾಜು ಮಾರ್ಚ ೩೧, ೨೦೨೩ ಕ್ಕೆ ಹರಾಜ ಅವಧಿ ಮುಗಿದಿದೆ.
ಒಟ್ಟು ೧೨ ವರ್ಷಗಳ ಬಾಡಿಗೆ ಅವಧಿ ಇದ್ದು ಈ ಅಂಗಡಿಗಳ ಹರಾಜು ಅವಧಿ ಮಾರ್ಚ್ ೩೧ಕ್ಕೆ ಕರಾರು ಮುಗಿದು ೪ ತಿಂಗಳಾದರು ಸಹ ಯಾಕೆ ನಗರ ಸಭೆಯ ಪೌರಾಯುಕ್ತರು ಟೆಂಡರ್ ಹರಾಜು ಕರೆದಿಲ್ಲ ಅವಧಿ ಮುಗಿದರು ಸಹ ಹಳೆಯ ಅಂಗಡಿ ಕಾರರು ಕಾನೂನುಬಾಹಿರವಾಗಿ ಅಂಗಡಿಗಳನ್ನು ನಡೆಸಿಕೊಂಡು ಹೋಗುವುದರಿಂದ ನಗರ ಸಭೆ ಆದಾಯಕ್ಕೆ ಒಡೆತ ಬೀಳಲಿದೆ ಹರಾಜು ಕರೆಯದೆ ಅಧಿಕಾರಿಗಳ ನಡೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಇನ್ನೂ ಮುಂದೆಯಾದರು ಸಹ ನಗರ ಸಭೆಯ ಪೌರಾಯುಕ್ತರಾದ ಮಂಜುನಾಥ ಗುಂಡುರ ಮರು ಟೆಂಡರ್ ಕರೆದು ಹರಾಜ ಹಾಕಿ ಹರಾಜು ಯಾದವರಿಗೆ ಮಳಿಗೆಗಳನ್ನು ವಿತರಿಸುವ ಕೆಲಸ ಯಾವಾಗ ಮಾಡುತ್ತಾರೊ ಕಾಯ್ದು ನೋಡಬೇಕಾಗಿದೆ. ಗಂಗಾವತಿ ರಸ್ತೆಯ ಪ್ರವಾಸಿ ಮಂದಿರದ ಹತ್ತಿರ ಇರುವ ಹೊಸ ವಾಣಿಜ್ಯ ಸಂಕೀರ್ಣ ಮಳಿಗೆಗಳು ನಿರ್ಮಾಣವಾಗಿದ್ದು ಅವಗಳನ್ನು ಸಹ ಟೆಂಡರ್ ಕರೆದು ಬಹಿರಂಗ ಹರಾಜು ಹಾಕಿದರೆ ಬಾಡಿಗೆ ಬಂದು ನಗರ ಸಭೆಗೆ ಆದಾಯ ಬರುತ್ತದೆ.