ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಅ.26 :- ಅವಧಿ ಮುಗಿದಿರುವ ಕೂಲ್ ಡ್ರಿಂಕ್ಸ್ ಮಾರಾಟ ಮಾಡಿರುವ ಪರಿಣಾಮವಾಗಿ ಅದನ್ನು ಸೇವಿಸಿದ ಓರ್ವ 4ವರ್ಷದ ಬಾಲಕನ ಆರೋಗ್ಯದ ಅಸ್ವಸ್ಥೆಗೆ ಕಾರಣವಾದ ಪಟ್ಟಣದ ರಾಯಲ್ ಬೇಕರಿ ಮಾಲೀಕ ಹಾಗೂ ಮಾರಾಟ ಮಾಡಿದವರ ವಿರುದ್ದ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಅಸ್ವಸ್ಥ ಮಗುವಿನ ತಂದೆ ದೂರು ನೀಡಿದಂತೆ ಪ್ರಕರಣ ದಾಖಲಾಗಿರುವ ಘಟನೆ ಜರುಗಿದೆ.
ಪಟ್ಟಣದ 4ವರ್ಷದ ಧನುಷ್ ಗೌಡ ಅವಧಿ ಮುಗಿದ ಕೂಲ್ ಡ್ರಿಂಕ್ಸ್ ಸೇವನೆಯಿಂದ ಅಸ್ವಸ್ಥಗೊಂಡ ಬಾಲಕನಗಿದ್ದಾನೆ. ಈತನ ತಂದೆ ಅಕ್ಟೊಬರ್ 20ರಂದು ಸಂಜೆ ಪಟ್ಟಣದ ರಾಯಲ್ ಬೇಕರಿಯಲ್ಲಿ ಜೆಮ್ ಶಿಪ್ ಹಾಗೂ ಆಪಲ್ ಡ್ರಿಂಕ್ಸ್ ನ 2 ಕೂಲ್ ಡ್ರಿಂಕ್ಸ್ ಬಾಟಲಿಗಳು ಹಾಗೂ ಬೇಕರಿ ತಿಂಡಿಗಳನ್ನು ತೆಗೆದುಕೊಂಡು ಹೋಗಿದ್ದಾನೆ ಅದನ್ನು ಅಂದು ರಾತ್ರಿ ಸೇವನೆ ಮಾಡಿದ್ದು ಅಂದೆ ಬಾಲಕ ಸ್ವಲ್ಪ ಅಸ್ವಸ್ಥನಾಗಿದ್ದಾನೆ ಆದರೆ ಕೂಲ್ ಡ್ರಿಂಕ್ಸ್ ನಿಂದ ಎಂದು ಗಮನಹರಿಸದೆ ಮಗನನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು ನಂತರ ಮತ್ತೆ ಮರುದಿನ ಸಹ ಅದೇ ಎರಡು ಕೂಲ್ ಡ್ರಿಂಕ್ಸ್ ಬಾಟಲಿ ತೆಗೆದುಕೊಂಡು ಹೋದಾಗ ಮಗನು ಅದನ್ನು ಸೇವಿಸಿದ್ದರಿಂದ ಆರೋಗ್ಯದಲ್ಲಿ ಏರುಪೇರು ಆಗಿದ್ದರಿಂದ ಆಗ ಕೂಲ್ ಡ್ರಿಂಕ್ಸ್ ಬಾಟಲಿ ಪರಿಶೀಲನೆ ಮಾಡಿ ನೋಡಲಾಗಿ ಅವಧಿ ಮುಗಿದ ಕೂಲ್ ಡ್ರಿಂಕ್ಸ್ ಮಾರಾಟ ಮಾಡಿರುವುದು ಗಮನಕ್ಕೆ ಬಂದಿದೆ ಅಸ್ವಸ್ಥ ಮಗನನ್ನು ತಕ್ಷಣ ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ವೈದ್ಯರಿಗೆ ಮಗನ ಅನಾರೋಗ್ಯದ ವಿಚಾರ ಮಾಡಲಾಗಿ ಮಗನ ಅಸ್ವಸ್ಥೆಗೆ ಅವಧಿ ಮುಗಿದ ಕೂಲ್ ಡ್ರಿಂಕ್ಸ್ ಸೇವನೆ ಕಾರಣವಾಗಿದೆ ಎಂದು ತಿಳಿದುಬಂದಿದೆ.
ಅಂಗಡಿ ಮಾಲೀಕರು ಲಾಭ ಪಡೆಯಲು ಅವಧಿ ಮುಗಿದ ಕೂಲ್ ಡ್ರಿಂಕ್ಸ್ ಮಾರಾಟ ಮಾಡುತ್ತಿರುವುದಲ್ಲದೆ ಜನರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿದ್ದೂ ಅವಧಿ ಮುಗಿದ ಹಾನಿಕಾರಕ ಕೂಲ್ ಡ್ರಿಂಕ್ಸ್ ಇಟ್ಟುಕೊಂಡು ಜನರಿಗೆ ಮಾರಾಟ ಮಾಡಿ ಮೋಸ ಮಾಡುತ್ತಿದ್ದು ಮಗನ ಅಸ್ವಸ್ಥೆಗೆ ಕಾರಣವಾದ ಕೂಡ್ಲಿಗಿ ಪಟ್ಟಣದ ರಾಯಲ್ ಬೇಕರಿ ಮಾಲೀಕ ಹಾಗೂ ಕೂಲ್ ಡ್ರಿಂಕ್ಸ್ ಮಾರಾಟ ಮಾಡಿದವರ ವಿರುದ್ದ ಅಮಲಾಪುರದ ಶರಣಪ್ಪ ಎಂಬುವವರು ನೀಡಿದ ದೂರಿನಂತೆ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ