ಅವಧಿ ಮೀರಿದ ಮಾವನ ಸೇವನೆಗೆ ಯೋಗ್ಯವಲ್ಲದ 948 ಲೀಟರ್ ಮದ್ಯ ನಾಶ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಫೆ.02-ಅವಧಿ ಮೀರಿದ ಹಾಗೂ ಮಾನವ ಸೇವನೆಗೆ ಯೋಗ್ಯವಲ್ಲದ ಸುಮಾರು 2.81 ಲಕ್ಷ ರೂ. ಮೌಲ್ಯದ 948 ಲೀಟರ್ ಮದ್ಯ ಮತ್ತು ಬಿಯರ್ ಅನ್ನು ನಾಶಪಡಿಸಲಾಯಿತು.
ನಗರದ ಹೊರವಲಯದ ಕೆಲ್ಲಂಬಳ್ಳಿ- ಬದನಗುಪ್ಪೆ ಕೈಗಾರಿಕಾ ಪ್ರದೇಶದಲ್ಲಿರುವ ಕರ್ನಾಟಕ ಪಾನೀಯ ನಿಗಮದಲ್ಲಿ ಬಿಯರ್ ಮತ್ತು ವೋಡ್ಕ್ ಮದ್ಯವನ್ನು ಅಬಕಾರಿ ಉಪ ಅಧೀಕ್ಷಕÀ ಎಂ.ಡಿ. ಮೋಹನ್ ಕುಮಾರ್ ನೇತೃತ್ವದಲ್ಲಿ, ಕಸಬಾ ಹೋಬಳಿ ರಾಜಸ್ವ ನಿರೀಕ್ಷ ರಾಜಶೇಖರಮೂರ್ತಿ, ಗ್ರಾಮ ಆಡಳಿತಾಧಿಕಾರಿ ರಾಜೇಂದ್ರ ಪ್ರಸಾದ್ ಸಮ್ಮುಖದಲ್ಲಿ 876 ಲೀಟರ್ ಬಿಯರ್ ಹಾಗೂ 72 ಲೀಟರ್ ವೋಡ್ಕ್ ಮದ್ಯವನ್ನು ನಾಶಪಡಿಸಲಾಯಿತು.
ಈ ಸಂದರ್ಭದಲ್ಲಿ ಅಬಕಾರಿ ನಿರೀಕ್ಷಕ ಮಹದೇವ್, ಅಬಕಾರಿ ನಿರೀಕ್ಷಕಿ ನಂದಿನಿ ಬಿ.ಪಿ, ಕೆಎಸ್‍ಬಿಸಿಎಲ್ ನಿರೀಕ್ಷಕ ಗುರುನಾಥಶೆಟ್ಟಿ, ಡಿಪೋ ವ್ಯವಸ್ಥಾಪಕ ಆರ್.ಬಿ. ಬಸವರಾಜು, ಸಿಬ್ಬಂದಿಗಳಾದ ಸಿದ್ದರಾಜು, ಎಂ.ಪಿ. ಕುಮಾರ್ ಇತರರು ಇದ್ದಾರೆ.