
ಚಂಡಿಗಡ, ಏ.೧- ೧೯೮೮ ರ ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಮಾಜಿ ಕಾಂಗ್ರೆಸ್ ಮುಖ್ಯಸ್ಥ ಹಾಗು ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಅವಧಿಗೆ ಮುನ್ನವೇ ಪಟಿಯಾಲ ಜೈಲಿನಿಂದ ಇಂದು ಹೊರಬರಲಿದ್ದಾರೆ.
೫೯ ವರ್ಷದ ರಾಜಕಾರಣಿ ತನ್ನ ಉತ್ತಮ ನಡವಳಿಕೆಗಾಗಿ ಅವಧಿಗೆ ಮುನ್ನವೇ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. ಒಂದು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ನವಜೋತ್ ಸಿಂಗ್ ಸಿಧು ನಿಗದಿಯಂತೆ . ಮೇ ೧೬ರಂದು ಜೈಲಿನಿಂದ ಬಿಡುಗಡೆ ಮಾಡಬೇಕಿತ್ತು.
ಜೈಲಿನಿಂದ ಬಿಡುಗಡೆಯಾಗುತ್ತಿರುವ ವಿಷಯವನ್ನು ಸಿಧು ಟ್ವಿಟ್ಟರ್ ನಲ್ಲಿ ಖಚಿತ ಪಡಿಸಿದ್ದಾರೆ.
ಈ ನಡುವೆ ಪ್ರತಿಕ್ರಿಯಿಸಿರುವ ಪಂಜಾಬ್ ಸಚಿವ ಬ್ರಹ್ಮ ಶಂಕರ್ ಜಿಂಪಾ, ಸಿಧು ಬಿಡುಗಡೆಗೆ ರಾಜ್ಯ ಸರ್ಕಾರ ಯಾವುದೇ ಅಭ್ಯಂತರವಿಲ್ಲ. “ಶಿಕ್ಷೆ ಮುಗಿದಿರುವ ಕೈದಿಗಳ ಬಿಡುಗಡೆಯ ವಿಷಯವನ್ನು ಸಚಿವ ಸಂಪುಟ ಅನುಮೋದಿಸಿದೆ. ಶಿಕ್ಷೆ ಪೂರ್ಣಗೊಳಿಸಿದವರನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಏನಿದು ಪ್ರಕರಣ
೧೯೮೮ ರಲ್ಲಿ, ನವಜೋತ್ ಸಿಂಗ್ ಸಿಧು ರಸ್ತೆ ಅಪರಾಧ ಘಟನೆಯಲ್ಲಿ ಆರೋಪಿಯಾಗಿದ್ದರು. ಮೊಕದ್ದಮೆ ೧೯೮೮ ಡಿಸೆಂಬರ್ ನಲ್ಲಿ ಪಟಿಯಾಲಾದ ಶೆರನ್‌ವಾಲಾ ಗೇಟ್ ಕ್ರಾಸಿಂಗ್ ಬಳಿ ಸಿಂಧು ಮತ್ತು ಸಂಧು ಗುರ್ನಾಮ್ ಸಿಂಗ್ ಅವರ ತಲೆಗೆ ಹೊಡೆದರು. ಕೃತ್ಯ ಎಸಗಿದ ಬಳಿಕ ಸಿಧು ಸ್ಥಳದಿಂದ ಪರಾರಿಯಾಗಿದ್ದರು. ಎಂದು ಪೊಲೀಸರು ತಿಳಿಸಿದ್ದಾರೆ.
ಗುರ್ನಾಮ್ ಸಿಂಗ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು. ಆದರೆ, ಗುರ್ನಾಮ್ ಸಿಂಗ್ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆಯೇ ಹೊರತು ತಲೆಗೆ ಗುದ್ದಿದ್ದರಿಂದ ಅಲ್ಲ ಎಂದು ಸಿಧು ಹೇಳಿದ್ದಾರೆ.
೨೦೨೨ರ ಮೇ ೧೯ ರಂದು, ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸಿಧುಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿತು.ಸಿಧು ಅವರ ವಿರುದ್ಧದ ಶಿಕ್ಷೆಯ ವಿಷಯದ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದ್ದರಿಂದ ಜೈಲು ಶಿಕ್ಷ ಅನುಭವಿಸುವಂತಾಗಿತ್ತು
ಕೆಲವು ದಿನಗಳ ಮೊದಲು ಸಿಧು ಅವರ ಪತ್ನಿ ನವಜೋತ್ ಕೌರ್ ಸಿಧು ಅವರು ತನಗೆ ೨ ನೇ ಹಂತದ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ ಮತ್ತು ಶಸ್ತ್ರಚಿಕಿತ್ಸೆಗೆ ಒಳಗಾಗಿದೆ ಎಂದು ಬಹಿರಂಗಪಡಿಸಿ ನವಜೋತ್ ಕೌರ್ ಸಿಧು ಅವರು ಟ್ವಿಟ್ಟರ್‌ನಲ್ಲಿ ಸುದ್ದಿಯನ್ನು ಹಂಚಿಕೊಂಡಿದ್ದರು