ಅವಧಾನಿ ಅವರಿಗೆ ಆತ್ಮೀಯ ಬೀಳ್ಕೊಡುಗೆ

ಹುಬ್ಬಳ್ಳಿ, ಜೂ 4: ನಗರದ ಹೆಗ್ಗೇರಿಯಲ್ಲಿರುವ ಜೆ.ಎಸ್.ಎಸ್. ಸಕ್ರಿ ಕಾನೂನು ಮಹಾವಿದ್ಯಾಲಯದಲ್ಲಿ ಬೆರಳಚ್ಚುಗಾರರಾದ ಆರ್.ಎಸ್. ಅವಧಾನಿ ಅವರು ದಿ. 31.05.2023 ರಂದು ನಿವೃತ್ತಿಯಾದ ಪ್ರಯುಕ್ತ ಅವರಿಗೆ ಮಹಾವಿದ್ಯಾಲಯದಲ್ಲಿ ಆತ್ಮೀಯ
ಬೀಳ್ಕೊಡುಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಪ್ರಾ0ಶುಪಾಲರಾದ ಡಾ. ರೂಪಾ ಇ0ಗಳಹಳ್ಳಿಯವರು ಮಾತನಾಡಿ ಅವಧಾನಿಯವರು ಸಲ್ಲಿಸಿದ ಸೇವೆಯನ್ನು ನೆನದು, ಅವರಿಗೆ ಉತ್ತಮ ಆರೋಗ್ಯ ಮತ್ತು ಆಯುಷ್ಯವನ್ನು ದೇವರು ಕರುಣಿಸಲಿ ಎ0ದು ಹರಿಸಿದರು. ಸುಮಾರು 35 ವರ್ಷಗಳ ಅವರ ಯಶಸ್ವಿ ಸೇವೆಯನ್ನು ಶ್ಲ್ಯಾಘಿಸಿದರು.
ಪೆÇ್ರ. ಬಾಬೂಲಾಲ ದರಗದ ಅವರು ನಾ ಕ0ಡ ಅವಧಾನಿ' ಕುರಿತು ಅನಿಸಿಕೆಯನ್ನು ಪದ್ಯ ರೂಪದಲ್ಲಿ ಓದಿದರು. ಸುರೇಶ ಲಿ0ಬಿಕಾಯಿ ಮಾತನಾಡಿದರು. ಸತೀಶ್ ಸಿ.ವಿ. ಅವರು, ಅವರ ಜೊತೆಗಿರುವ ನ0ಟಿನ ಕುರಿತುನಾ ಕ0ಡ ಸಹದ್ಯೋಗಿ’ ಎಂಬ ಗದ್ಯ ಬರೆದು ಓದಿದರು. ಪೆÇ್ರ. ದೀಪಾ ಪಾಟೀಲ, ಪೆÇ್ರ. ಶ್ರೀಶೈಲಾ ಮುಧೋಳ್ ಮಾತನಾಡಿದರು. ವಾಣಿಜ್ಯ ಮಹಾವಿದ್ಯಾಲಯದ ಪ್ರಾ0ಶುಪಾಲರಾದ ಪೆÇ್ರ. ಎಸ್.ಬಿ. ಲಕ್ಕನಗೌಡರ ಶುಭ ಕೋರಿದರು.
ಆರ0ಭದಲ್ಲಿ ಕು. ಗೌರಮ್ಮ ಹೊಸಮನಿ ಪ್ರಾರ್ಥಿಸಿದರು. ಪೆÇ್ರ. ಪೂರ್ಣಿಮಾ ಕುರ್ಡಿಕೇರಿ ನಿರೂಪಿಸಿದರು. ಪೆÇ್ರ. ದೀಪಾ ಪಾಟೀಲ, ಶ್ರೀಮತಿ ಶೈಲಜಾ ಹಗೇದಾಳ, ಬಿ. ಭರತ, ಸತೀಷ ಸಿ.ವಿ. ಐ.ಎಫ್. ಗೋಗೋಪಾಳಿ, ಎಮ್. ಜಿ. ಬಾರೂದವಾಲೆ, ಮು0ತಾದ ಸಿಬ್ಬ0ದಿಯವರು ಉಪಸ್ಥಿತರಿದ್ದರು.