ಅವಕಾಶ ಸಿಗದೆ ಖಾಲಿಕೂತ ನಭಾನಟೇಶ್

ಬೆಂಗಳೂರು, ಆ ೩೦-ಉತ್ತಮ ನಟನೆಯಿಂದ ಟಾಲಿವುಡ್ ನಲ್ಲಿ ಫಾರ್ಮ್ ಕಂಡುಕೊಂಡಿದ್ದ ಚಂದನವನದ ನಟಿ ನಭಾ ನಟೇಶ್ ಕೋಟಿ ಸಂಭಾವನೆ ಕೇಳಿ ಇದೀಗ ಎಡವಟ್ಟು ಮಾಡಿಕೊಂಡಿದ್ದಾರೆ.

ಹೌದು, ತೆಲುಗಿನಲ್ಲಿ ನಭಾ ನಟೇಶ್ ಗೆ ಈಗ ಅವಕಾಶಗಳು ಬರುತ್ತಿವೆ. ಆರಂಭದಲ್ಲಿ ಸತತ ಅವಕಾಶಗಳನ್ನು ಗಿಟ್ಟಿಸಿಕೊಂಡಿದ್ದ ಈ ಕನ್ನಡದ ಚೆಲುವೆಗೆ ಈಗ ತೆಲುಗಿನಲ್ಲಿ ಒಂದೂ ಅವಕಾಶ ಸಿಕ್ಕಿಲ್ಲ. ಪೂರಿ ಜಗನ್ನಾಥ್ ನಿರ್ದೇಶನದ ಇಸ್ಮಾರ್ಟ್ ಶಂಕರ್ ಚಿತ್ರದ ಮೂಲಕ ಫುಲ್ ಫಾರ್ಮ್‌ಗೆ ಬಂದ ನಭಾ, ಇದೀಗ ಸಿನಿಮಾಗಳಿಲ್ಲದೆ ಖಾಲಿಕೂತಿದ್ದಾರೆ.

ಇಸ್ಮಾರ್ಟ್ ಶಂಕರ್ ಬಳಿಕ ಸಾಕಷ್ಟು ಸಿನಿಮಾಗಳಲ್ಲಿ ನಭಾ ನಟೇಶ್ ನಟಿಸಿದ್ದರು. ಕನ್ನಡದ ವಜ್ರಕಾಯ ಸಿನಿಮಾದಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದರು. ಹೆಚ್ಚಾಗಿ ತೆಲುಗು ಸಿನಿಮಾಗಳಲ್ಲೇ ನಟಿಸಿದ್ದರು. ಅದಾದ ನಂತರ ಅವಕಾಶಗಳು ಬಂದರೂ ಹೆಚ್ಚಿನ ಸಂಭಾವನೆ ಕೇಳಿದ್ದರಿಂದ ನಿರ್ಮಾಪಕರು ನಭಾ ನಟೇಶ್ ಗೆ ಬೈಬೈ ಹೇಳಿದ್ದಾರೆ. ನಭಾ, ಇಸ್ಮಾರ್ಟ್ ಶಂಕರ್ ನಂತರ ಒಂದೊಂದು ಚಿತ್ರಕ್ಕೂ ಒಂದು ಕೋಟಿ ಬೇಡಿಕೆ ಇಡುತ್ತಿದ್ದರಂತೆ.

ನಂತರ ಕನ್ನಡದಲ್ಲಿ ಕೆಲಸಿನಿಮಾದಲ್ಲಿ ನಟಿಸಿದ ಸುಂದರಿ ೨೦೧೮ರಲ್ಲಿ ಟಾಲಿವುಡ್ ಗೆ ಎಂಟ್ರಿಕೊಟ್ಟಿದ್ದಾರೆ. ಟಾಲಿವುಡ್ ಹಾಗೂ ಕನ್ನಡದಲ್ಲಿ ನಟನೆಯ ಮೂಲಕ ಮೆಚ್ಚುಗೆಗೆ ಪಾತ್ರವಾಗಿದ್ದ ನಟಿಯ ಹಾಟ್ ಫೋಟೋಗಳು ಫುಲ್ ವೈರಲ್ ಆಗುತ್ತಿದೆ. ಮಹೇಶ್ ಬಾಬು, ಅಲ್ಲು ಅರ್ಜುನ್, ರಾಮ್ ಚರಣ್, ಪವನ್ ಕಲ್ಯಾಣ್, ಎನ್‌ಟಿಆರ್ ಮತ್ತು ಪ್ರಭಾಸ್ ಸಿನಿಮಾಗಳಿಗೆ ಸಹ ಇವರಿಗೆ ಒಮ್ಮೆ ಆಫರ್ ಬಂದಿತ್ತು ಎನ್ನಲಾಗುತ್ತಿದೆ.