ಅವಕಾಶ ಸಿಕ್ಕಲ್ಲಿ ಭ್ರಷ್ಟಾಚಾರ ಮುಕ್ತ ಅಭಿವೃದ್ಧಿ

ಎಎಪಿಯಿಂದ ಬಹಿರಂಗ ಸಭೆ
ಮಾನ್ವಿ,ಏ.೧೧- ಒಂದು ಬಾರಿ ಅವಕಾಶ ನೀಡಿದಲ್ಲಿ ತಾಲೂಕಿನ ಕೊನೆ ಭಾಗದ ರೈತರ ನೀರಾವರಿ ಸಮಸ್ಯೆಗಳಿಗೆ ಪರಿಹಾರವನ್ನು ಕಲ್ಪಿಸುವುದಲ್ಲದೆ ಭ್ರಷ್ಟಚಾರ ರಹಿತವಾಗಿ ಉತ್ತಮ ಆಡಳಿತವನ್ನು ನೀಡಲಾಗುವುದು ಮಾನ್ವಿ ಪಟ್ಟಣ ಜನಸಂಖ್ಯೆಗೆ ಅನುಗುಣವಾಗಿ ಪುರಸಭೆಯನ್ನು ನಗರಸಭೆಯನ್ನಾಗಿಸಲು ಪ್ರಯತ್ನಿಸಲಾಗುವುದು ಎಂದು ಎಎಪಿ ಅಭ್ಯರ್ಥಿ ರಾಜಾ ಶ್ಯಾಮಸುಂದರ ನಾಯಕ ಹೇಳಿದರು.
ಪಟ್ಟಣದ ಬಸವ ವೃತ್ತದ ಮೂಲಕ ಟಿ.ಎ.ಪಿ.ಎಂ.ಸಿ. ಆವರಣದವರೆಗೆ ಅದ್ದೂರಿ ಮೆರವಣಿಗೆ ಮೂಲಕ ಆಗಮಿಸಿದ ಎಎಪಿಯಿಂದ ನಡೆದ ಬಹಿರಂಗ ಸಭೆಯನ್ನು ಉದ್ಘಾಟಿಸಿ ರಾಜ್ಯ ಸಂಚಾಲಕ ಪೃತ್ವಿರೆಡ್ಡಿ ಮಾತನಾಡಿ ದೆಹಲಿ ಮತ್ತು ಪಂಜಾಬಿನಲ್ಲಿ ನಡೆಸಿರುವ ಜನಪ್ರಿಯ ಕೆಲಸಗಳನ್ನು ರಾಜ್ಯ ಮತ್ತು ಕ್ಷೇತ್ರದಲ್ಲಿ ಮಾಡಲು ಮತ ನೀಡುವ ಮೂಲಕ ಅವಕಾಶ ನೀಡಿ.
ನೀವು ಕಟ್ಟುವ ತೆರಿಗೆ ಹಣದ ಲೆಕ್ಕವನ್ನು ಎಂದಾದರು ಕೇಳಿದ್ದೀರ ತೆರಿಗೆ ಹಣ ಲೂಟಿಯಾಗುತ್ತಿದೆ. ಎಎಪಿಪಕ್ಷವು ತಾನು ಅಧಿಕಾರಕ್ಕೆ ಬಂದರೆ ಕೆಲಸಗಳ ಬಗ್ಗೆ ಗ್ಯಾರಂಟಿ ನೀಡಲಾಗುತ್ತಿದ್ದು ಜನರು ನಮ್ಮ ಆಡಳಿತ ಅವಧಿಯಲ್ಲಿ ಅಭಿವೃದ್ದಿ ಕಾರ್ಯಗಳು ನಡೆಯದೆ ಇದ್ದಲ್ಲಿ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಬಹುದಾಗಿದೆ.
ಎಎಪಿ ಸರಕಾರ ಎಂದಿಗೂ ಯಾವುದನ್ನು ಉಚಿತವಾಗಿ ನೀಡುವುದಿಲ್ಲ ನೀವು ಕಟ್ಟಿದ ಹಣವನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿ ಪುನಃ ನಿಮಗೆ ಸೌಲಭ್ಯಗಳ ರೂಪದಲ್ಲಿ ನೀಡಲಾಗುತ್ತಿದೆ. ಶಾಸಕರಾಗುವುದು ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟೆ ವ್ಯವಹಾರ ಮಾಡುವುದಕ್ಕಲ ಕ್ಷೇತ್ರದಲ್ಲಿನ ಸಮಸ್ಯೆಗಳನ್ನು ತಿಳಿದುಕೊಂಡು ಅವುಗಳನ್ನು ನಿವಾರಿಸುವುದಕ್ಕೆ ದೇಶದಲ್ಲಿನ ಶ್ರೀಮಂತರ ೧೨ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡುವ ಕೇಂದ್ರ ಸರಕಾರಕ್ಕೆ ದೇಶದ ಜನರಿಗೆ ಅಗತ್ಯವಾದ ಸೌಲಭ್ಯಗಳನ್ನು ಮಾತ್ರ ನೀಡಲು ಸಾಧ್ಯವಾಗುತ್ತಿಲ್ಲ ದೆಹಲಿಯಲ್ಲಿ ಪ್ರಾರಂಭವಾದ ಎ.ಎ.ಪಿ.ಸರಕಾರ ಕೇವಲ ೧೦ವರ್ಷಗಳಲ್ಲಿ ದೆಹಲಿ ಮತ್ತು ಪಂಜಾಂಬ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ರಾಷ್ಟ್ರೀಯ ಪಕ್ಷವಾಗಿದ್ದು ರಾಜ್ಯದಲ್ಲಿ ಕೂಡ ನಮ್ಮ ಬಡ ಪ್ರತಿಭಾವಂತ ಮಕ್ಕಳು ವೈದ್ಯರಾಗುವ ,ಇಂಜಿನಿಯರ್ ಗಳಾಗುವ ಕನಸನು ನನಸು ಮಾಡಲು,ಮಹಿಳೆಯರಿಗೆ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಲು,ಉಚಿತವಾಗಿ ವಿದ್ಯುತ್ ಪಡೆಯಲು,ಎ.ಎ.ಪಿ.ಅಗತ್ಯವಾಗಿದೆ ಎಂದು ತಿಳಿಸಿದರು.
ಆಮ್ ಆದ್ಮಿಪಾರ್ಟಿಯ ಪೃಥ್ವಿ ರಡ್ಡಿ ರಾಜ್ಯ ಸಂಚಾಲಕ, ರಾಜ್ಯ ಉಪಾಧ್ಯಕ್ಷರಾದ ರುದ್ರಯ್ಯ ಹಿರೆಮಠ,ವಿಜಯಶರ್ಮ, ರಾಯಚೂರು ನಗರ ಕ್ಷೇತ್ರದ ಅಭ್ಯರ್ಥಿ ಡಿ.ವಿರೇಶ, ಸಿಂಧನೂರು ಕ್ಷೇತ್ರದ ಅಭ್ಯರ್ಥಿ ಸಂಗ್ರಮ್ ಕಿಲ್ಲಾದ್, ಜಿಲ್ಲಾ ಸಂಚಾಲಕ ಬಸವರಾಜ ಗುತ್ತೆದಾರ, ತಾ.ಅಧ್ಯಕ್ಷರಾದ ಶರಣೆಗೌಡ ಕೆಳಗೇರಿ, ನಗರ ಘಟಕದ ಅಧ್ಯಕ್ಷರಾದ ಯುಸೂಫ್ ಖುರೆಷಿ, ಸಜ್ಜದ್ ಮತವಾಲ್, ಮುಖಂಡರಾದ ನಾಗರಾಜ್, ಸೈಯದ್ ತಾಹೇರ್ ಹುಸೇನಿ ಮತವಾಲೆ, ಮಕ್ಬೂಲ್ ಪಾಷಾ, ವೆಂಕಟೇಶ ನಾಯಕ, ಬಸವರಾಜ್, ದೇವರಾಜ್‌ನಾಯಕ, ಬಸವರಾಜ ನಾಯಕ ಸೇರಿದಂತೆ ಇನ್ನಿತರರು ಇದ್ದರು.