ಅವಕಾಶ ನೀಡುವುದಕ್ಕೆ ಕಾನೂನು ಹೋರಾಟ: ಅಂಜಿನಪ್ಪ

ಹರಪನಹಳ್ಳಿ ನ 09 : ಪುರಸಭೆ ಚುನಾವಣೆ ವೇಳೆ ಸಮಯ ಮುಗಿದ ನೆಪದಲ್ಲಿ ನಮಗೆ ಹಕ್ಕು ಚಲಾಯಿಸಲು ಅವಕಾಶ ನೀಡದಿರುವುದನ್ನು ಖಂಡಿಸಿ ಕಾನೂನು ಹೋರಾಟ ಮಾಡಲಾಗುವುದು ಎಂದು ಪುರಸಭೆ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಎಂ.ವಿ.ಅಂಜಿನಪ್ಪ ತಿಳಿಸಿದ್ದಾರೆ.
ಪಟ್ಟಣದ ಪುರಸಭೆ ಸಂಭಾಗಣದಲ್ಲಿ ಶನಿವಾರ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ 6 ಜನ ಕಾಂಗ್ರೆಸ್ ಸದಸ್ಯರು, ಇಬ್ಬರು ಪಕ್ಷೇತರರು ಹಾಗೂ ಓರ್ವ ಜೆಡಿಎಸ್ ಸದಸ್ಯರು ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಬೆಳಿಗ್ಗೆ 11 ಗಂಟೆಗೆ ಪುರಸಭೆಗೆ ಆಗಮಿಸಿ ಪುರಸಭೆಗೆ ಕೊಠಡಿಯಲ್ಲಿ ಕುಳಿತಿದ್ದೇವು. ಸಮಯಕ್ಕೆ ಸರಿಯಾಗಿ 1 ಗಂಟೆಗೆ ಸಭಾಂಗಣದೊಳಗೆ ಆಗಮಿಸಲು ನಾವುಗಳು ತೆರಳಿದಾಗ ಸಮಯ ಮುಗಿದೆ ಎಂದು ನಮ್ಮನ್ನು ಸಭಾಂಗಣಕ್ಕೆ ತೆರಳದಂತೆ ಪೊಲೀಸರು ತಡೆದರು. ಈ ಕುರಿತು ಸಂಬಂದಿಸಿದವರಿಗೆ ದೂರು ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಪಕ್ಷೇತರ ಸದಸ್ಯರಾದ ಡಿ.ಅಬ್ದುಲ್‍ರಹಿಮಾನಸಾಬ್, ಕಾಂಗ್ರೆಸ್ ಸದಸ್ಯರಾದ ಎಂ.ವಿ.ಅಂಜಿನಪ್ಪ, ಗೊಂಗಡಿ ನಾಗರಾಜ್, ಟಿ.ವೆಂಕಟೇಶ್, ಗಣೇಶ್, ಸತ್ತೂರು ಯಲ್ಲಮ್ಮ, ಹರಿಜನ ಕೊಟ್ರೇಶ್ ಹಾಗೂ ಪಕ್ಷೇತರ ಸದಸ್ಯೆ ಹನುಮಕ್ಕ, ಜೆಡಿಎಸ್ ಸದಸ್ಯೆ ಶಹನಾಬಿ ಸೇರಿ ಒಟ್ಟು 9 ಜನ ಸದಸ್ಯರು ಚುನಾವಣೆ ಪ್ರಕ್ರಿಯೆಯಿಂದ ಹೊರಗೆ ಉಳಿಯುವಂತೆ ಉದ್ದೇಶ ಪೂರ್ವಕವಾಗಿ ಮಾಡಲಾಗಿದೆ. ಈ ಕ್ರಮವನ್ನು ಖಂಡಿಸಿ ಜಿಲ್ಲಾದಿಕಾರಿ ಮತ್ತು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗುವುದು. ಸಂಬಂದಿಸಿದ ಅದಿಕಾರಿಗಳ ಮೇಲೆ ಕೂಡಲೇ ಕ್ರಮ ಜರುಗಿಸಬೇಕು ಹಾಗೂ ನಮಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.