ಅವಕಾಶ ಇದ್ದಾಗಲೇ ಖರ್ಗೆ ಅವರನ್ನು ಸಿಎಂ ಮಾಡಲಿಲ್ಲ, ಇನ್ನು ಪಿಎಂ: ಕೇಂದ್ರ ಸಚಿವ ನಾರಾಯಣಸ್ವಾಮಿ ವ್ಯಂಗ್ಯ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಡಿ.22:- ಕರ್ನಾಟಕದಲ್ಲಿ ಅವಕಾಶ ಇದ್ದಾಗಲೇ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಿಎಂ ಮಾಡಲಿಲ್ಲ ಇನ್ನು ಪ್ರಧಾನಿ ಮಾಡುತ್ತಾರೆಯೇ ಎಂದು ಕೇಂದ್ರ ಸಚಿವ ನಾರಾಯಣಸ್ವಾಮಿ ವ್ಯಂಗ್ಯ ಮಾಡಿದರು.
ಚಾಮರಾಜನಗರದಲ್ಲಿ ಮಾಧ್ಯಮವರೊಟ್ಟಿಗೆ ಅವರು ಮಾತನಾಡಿ, ರಾಜ್ಯದಲ್ಲಿ ಅವಕಾಶ ಇದ್ದಾಗಲೇಖರ್ಗೆಅವರನ್ನು ಸಿಎಂ ಮಾಡಲಿಲ್ಲ, ಲೋಕಸಭಾಚುನಾವಣೆಯಲ್ಲಿ ಕಾಂಗ್ರೆಸ್ ಎಷ್ಟು ಸ್ಥಾನ ಗೆಲ್ಲಲ್ಲಿದೆ ಎಂದು ಗ್ಯಾರಂಟಿ ಇಲ್ಲಾ, ಯಾವ ಸಂದರ್ಭದಲ್ಲಿ ಅವರನ್ನು ಪಿಎಂ ಕ್ಯಾಂಡಿಡೇಟ್ ಮಾಡಲಾಗುತ್ತಿದೆಎಂದು ಕಾಂಗ್ರೆಸಿಗರೇ ಹೇಳಲಿ ಎಂದು ಕಿಡಿಕಾರಿದರು.
ವಿಪಕ್ಷದ ಮಿಮಿಕ್ರಿ ವಿವಾದಕುರಿತು ಮಾತನಾಡಿ, ನಾಗರಿಕರನ್ನು ಯಾರೂ ಮೂರ್ಕರನ್ನಾಗಿ ಮಾಡಲು ಸಾಧ್ಯವಿಲ್ಲ, ಯಾವರೀತಿ ಉಪ ರಾಷ್ಟ್ರಪತಿಯನ್ನು ಮಿಮಿಕ್ರಿ ಮಾಡಿದರು ಎಂದು ಜನರು ನೋಡಿದ್ದಾರೆ, ಅದನ್ನು ಯಾವ ರೀತಿ ರಾಹುಲ್ ಗಾಂಧಿ ರೆಕಾರ್ಡ್ ಮಾಡಿದ್ದಾರೆಂತಲೂಜನರು ನೋಡಿದ್ದಾರೆ, ರಾಷ್ಟ್ರಪತಿ, ಉಪರಾಷ್ಟ್ರಪತಿ ಅವರನ್ನು ಯಾವ ರೀತಿ ಸಂಭೋದಿಸಬೇಕು ಎಂಬ ಪರಿಜ್ಞಾನ ಕಾಂಗ್ರೆಸ್ ಗೆ ಇರಬೇಕಿತ್ತು ಎಂದು ಕಿಡಿಕಾರಿದರು.
ಇದೇ ವೇಳೆ, ಒಳ ಮೀಸಲಾತಿಕುರಿತು ಮಾತನಾಡಿ, ಜ.17 ರಂದು ಸುಪ್ರೀಂಕೋರ್ಟ್ ನಲ್ಲಿ ಒಳ ಮೀಸಲಾತಿ ಸಂಬಂಧ ವಿಚಾರಣೆ ನಡೆಯಲಿದೆ, ಫೆ.ಯಲ್ಲಿ ಮಾದಿಗರ ಪರವಾಗಿಆದೇಶ ಹೊರಬೀಳುವ ವಿಶ್ವಾಸವಿದೆ, ದಕ್ಷಿಣ ಭಾರತದ ಮಾದಿಗರ ಒಳ ಮೀಸಲಾತಿ ಪರವಾಗಿಕೇಂದ್ರ ಸರ್ಕಾರ ಇದೆ ಎಂದು ಹೇಳಿದರು.
2024 ರ ಲೋಕಸಭಾಚುನಾವಣೆ ಸಂಬಂಧ ಮಾತನಾಡಿ, 2024 ರಲ್ಲಿ ನಾವು ಗೆದ್ದೆಗೆಲ್ಲುತ್ತೇವೆ, ಭಾರತವನ್ನು ವಿಶ್ವದಲ್ಲೇ ನಂ 1 ಮಾಡುತ್ತೇವೆಎಂದು ವಿಶ್ವಾದ ವ್ಯಕ್ತಪಡಿಸಿದರು.
ರಾಮಂದಿರ ಉದ್ಘಾಟನೆಗೆ ಹಿರಿಯ ನಾಯಕರ ಕಡೆಗಣನೆ ಆರೋಪ ಸಂಬಂಧ ಮಾತನಾಡಿ, ಅಡ್ವಾಣಿ ಹಾಗೂ ಮುರುಳಿಮನೋಹರ ಜೊಷಿ ಅವರನ್ನು ಮಂದಿರ ಉದ್ಘಾಟನೆಗೆ ಆಹ್ವಾನಿಸಲು ನಮ್ಮವರೇ ಹೋಗಿದ್ದರು, ವಯಸ್ಸಿನ ಕಾರಣದಿಂದ ಬರಲಾಗುವುದಿಲ್ಲ ಎಂಬುದನ್ನು ಅವರೇ ಹೇಳಿಕೊಂಡಿದ್ದಾರೆ, ಅವರನ್ನು ಮಂದಿರ ಉದ್ಘಾಟನೆಗೆ ಕರೆತರುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿಸಿದರು.