ಅಳ್ಳೋಳ್ಳಿ ಗ್ರಾಮ ಪಂಚಾಯತ ಕಾಂಗ್ರೆಸ್ ತೆಕ್ಕೆಗೆ

ಚಿತ್ತಾಪುರ:ಜು.31: ತಾಲೂಕಿನ ಅಳ್ಳೋಳ್ಳಿ ಗ್ರಾಮ ಪಂಚಾಯತ ಅಧ್ಯಕ್ಷರಾಗಿ ಆಂಜನೇಯ ಅನಂತಯ್ಯಾ ಗುತ್ತೇದಾರ ಅವಿರೋಧವಾಗಿ ಆಯ್ಕೆಯಾದರೆ,ಉಪಾಧ್ಯಕ್ಷೆಯಾಗಿ ಮರೇಮ್ಮ ಸಾಬಯ್ಯ ಸಂಕನೂರ 12 ಮತಗಳು ಪಡೆಯುವ ಮೂಲಕ ಗೆಲುವು ಸಾಧಿಸಿದ್ದಾರೆ ಎಂದು ಚುನಾವಣಾಧಿಕಾರಿ ಅಣ್ಣಪ್ಪ ಕುದರಿ ತಿಳಿಸಿದ್ದಾರೆ.

ಅಳ್ಳೋಳ್ಳಿ ಗ್ರಾಮ ಪಂಚಾಯತ ಸಭಾಂಗಣದಲ್ಲಿ ಗುರುವಾರ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ, ಅಧ್ಯಕ್ಷ ಸ್ಥಾನಕ್ಕೆ ಆಂಜನೇಯ ಗುತ್ತೇದಾರ ವಿರುದ್ದ ಯಾವುದೇ ನಾಮಪತ್ರ ಸಲ್ಲಿಸದೆ ಇರುವುದರಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಮರೇಮ್ಮ ಸಾಬಯ್ಯ ಸಂಕನೂರ 20 ಸದಸ್ಯ ಮತದಾರರ ಪೈಕಿ 12 ಮತಗಳು ಪಡೆಯುವ ಮೂಲಕ ಗೆಲುವು ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಹೀರಾಬಾಯಿ ರಾಠೋಡ 8 ಮತಗಳು ಪಡೆದು ಪರಾಭವಗೊಂಡಿದ್ದಾರೆ.

ಕಾಂಗ್ರೆಸ್ ಬೆಂಬಲಿತ ನೂತನ ಅಧ್ಯಕ್ಷ-ಉಪಾಧ್ಯಕ್ಷರು ಆಯ್ಕೆಯಾಗುತ್ತಿದ್ದಂತೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಬೆಂಬಲಿಗರು ಸೇರಿ ಪಟಾಕಿ ಸಿಡಿಸಿ, ಗುಲಾಲ್ ಎರಚಿ, ಸಿಹಿ ಹಂಚಿಕೊಳ್ಳುವ ಮೂಲಕ ವಿಜಯೋತ್ಸವ ಆಚರಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ, ತಾಪಂ ಮಾಜಿ ಅಧ್ಯಕ್ಷರಾದ ಶಾಂತಣ್ಣ ಚಾಳೀಕಾರ, ಸಿದ್ದಮ್ಮ ಕಾಶನೂರ, ಪ್ರಮುಖರಾದ ಹಣಮಂತ ಸಂಕನೂರ, ದೇವಿಂದ್ರಪ್ಪ ಹಾದಿಮನಿ, ವೀರಾರೆಡ್ಡಿ ಮುಶೇನಿ, ಶಿವಣ್ಣ ಹೂಗಾರ, ವಿನೋದ ಗುತ್ತೇದಾರ, ನಾಗಯ್ಯ ಗುತ್ತೇದಾರ, ಗೋಪಾಲ ಗುತ್ತೇದಾರ, ಶ್ರೀಶೈಲ್ ಗುತ್ತೇದಾರ, ವಿಶ್ವನಾಥ ಗುತ್ತೇದಾರ, ಗಂಗಪ್ಪ ಆಡಕಾಯಿ, ಮರೇಣ್ಣ ದಂಡಗುಂಡ, ಹಣಮರೆಡ್ಡಿ, ಹಣಮಂತ ಬುಜಾನೋರ, ಸಿದ್ದಲಿಂಗ ಚಾಳೀಕಾರ, ಶರಣು ಡೋಣಗಾಂವ, ಖ್ಯಾದಿಗಪ್ಪ ಗುತ್ತೇದಾರ, ಸಾಬಣ್ಣ ಸಂಕನೂರ, ಸದಸ್ಯರಾದ ದೇವಿಂದ್ರಪ್ಪ ಮೋನಪ್ಪ, ಮೌನೇಶ ಬಸಣ್ಣಾ, ಭೀಮರಾವ ಕಟ್ಟಿಮನಿ, ಹಣಮಂತ ಕಂಚಗಾರಹಳ್ಳಿ, ಖಾಸಿಂಸಾಬ್ ನಾಯಕೋಡಿ, ಮೌಲನಾಸಾಬ್ ಬೊರಪಲ್ಲಿ, ಗೀತಾ ರಾಜಶೇಖರ, ಸರೋಜಾ ಹಣಮಂತ, ಅಂಬಮ್ಮ ಮಲ್ಲಯ್ಯಾ, ಬಸಮ್ಮ ಹಣಮಂತ, ಪಿಡಿಒ ದೇವಿಂದ್ರಪ್ಪ ಭಾಲ್ಕಿ, ಕಾರ್ಯದರ್ಶಿ ಜಕ್ಕಪ್ಪ ಪೂಜಾರಿ ಇತರರು ಇದ್ದರು.