ಅಳ್ನಾವರದಲ್ಲಿ ಹೋಳಿ ಸರಳ ಆಚರಣೆ

?????????????

ಅಳ್ನಾವರ, ಮಾ30: ಬಣ್ಣದ ಮೋಜಿನ ಹಬ್ಬ ಪಟ್ಟಣದಲ್ಲಿ ಸೋಮವಾರ ಸರಳವಾಗಿ ಆಚರಿಸಲಾಯಿತು. ಹಲವಡೆ ಕಾಮದಹನ ನಡೆಯಿತು.
ಇಲ್ಲಿನ ಪ್ರಮುಖ ಆಕರ್ಷಣೆಯಾದ ಗಡಿಗೆ ಒಡೆಯುವ ಸ್ಪರ್ದೆ ಈ ಭಾರಿ ರದ್ದು ಮಾಡಲಾಗಿತ್ತು. ಆದ್ದರಿಂದ ಯುವಕರು ತಮಗೆ ಬೇಕಾದ ಸ್ನೇಹಿತರ ಮನೆಗೆ ತೆರಳಿ ಬಣ್ಣ ಹಾಕಿದರು.
ಹಾಲು ಗಲ್ಲದ ಪುಟಾಣಿಗಳ ಗಲ್ಲದ ಮೇಲಿನ ಬಣ್ಣದ ಕಲರವವನ್ನು ಜನರು ತಮ್ಮ ಮೊಬೈಲನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲ ತಾಣಗಳಲ್ಲಿ ಹರಿ ಬಿಟ್ಟದ್ದರು.
ಹೆಚ್ಚಾಗಿ ಪೌಡರ ಮಿಶ್ರಿತ ಬಣ್ಣದ ಬಳಕೆ ಹೆಚ್ಚು ಕಂಡು ಬಂತು. ಯುವಕರು ಹ್ಯಾಪಿ ಹೋಳಿ ಎಂದು ಕೂಗುತ್ತಾ ಬಣ್ಣ ಹಚ್ಚಿದರು. ಅನುಕು ಶವ ಪ್ರದರ್ಶನ ಹಾಸ್ಯದ ಹೊನಲು ಹರಿಸಿತ್ತು. ಬಣ್ಣದ ಗೊಜಲು ಬೇಡ ಎನ್ನುವ ಹಲವರು ತಮ್ಮ ಹೊಲದಲ್ಲಿ ಸ್ನೇಹಿತರೊಂದಿಂಗೆ ಸೇರಿ ಹಬ್ಬದ ಊಟ ಸವಿದರು. ಹೋಳಿಗೆ ಊಟ ನೈವೈಧ್ಯಕ್ಕಾಗಿ ಮನೆಗಳಲ್ಲಿ ಮಾಡಲಾಗಿತ್ತು.
ಸಂಜೆ ತುಸು ಹೊತ್ತು ಆಲೆಕಲ್ಲು ಮಳೆ ಬಿದ್ದು, ವಾತಾವರಣ ತಂಪಿನಿಂದ ಕೂಡಿತ್ತು. ಇದು ಕಾಮಣ್ಣನ ಕಣ್ಣೀರು ಎಂದು ಹಲವರು ಅಭಿಪ್ರಾಯಪಟ್ಟರು. ಮನೆಯಿಂದ ಹೊರ ಬಂದ ಯುವಕರು. ಪುಟಾಣಿಗಳು ಆಲಿಕ್ಲಲು ಹಿಡಿದು ಅದನ್ನು ಸವಿದು ಖುಷಿ ಪಟ್ಟರು. ಹಲವರು ತಮ್ಮ ಕೈಯಲ್ಲಿ ಆಲಿಕಲ್ಲು ಹಿಡಿದು ಚಿತ್ರ ತೆಗೆದು ತಮಗೆ ಬೇಕಾದ ಜನರಿಗೆ ವಾಟ್ಸ್ ನಲ್ಲಿ ಬಿಟ್ಟಿದ್ದರು.
ಪಟ್ಟಣದ ಹೊರ ವಲಯದ ಎಂ.ಸಿ. ಪ್ಲಾಟ್ ಹಾಗೂ ಇಂದಿರಾ ನಗರ ಬಡಾವಣೆಯಲ್ಲಿ ಮಹಿಳೆಯರು ಕೂಡಾ ಪರಸ್ಪರ ಬಣ್ಣ ಹಚ್ಚಿ ಹಬ್ಬದ ಸಂತಸ ಪಡೆದರು. ಸಾಲಾಗಿ ನಿಂತು ಮೊಬೈಲನಲ್ಲಿ ಚಿತ್ರ ಸೆರೆ ಹಿಡಿದು ಹೋಳಿ ಹಬ್ಬದ ಸಂಭ್ರಮ ಅನುಭವಿಸಿದರು. ಇನ್ನೂ ಎರಡು ಕಡೆ ರೇನ ಡ್ಯಾನ್ಸ್ ವ್ಯವಸ್ಥೆ ಮಾಡಲಾಗಿತ್ತು. ಬಿಸಿಲಿನ ದಗೆಯಿಂದ ಬಚಾವಾಗಲು ರೇನ ಡ್ಯಾನ್ಸ್ ತುಸು ಸಂತಸ ಮೂಡಿಸಿತ್ತು.
ಡಿಜೆ ಅಬ್ಬರ ಕಂಡು ಬರಲಿಲ್ಲ. ಮೆರವಣಿಗೆ, ಯುವಕರ ಚಿರಾಟ ಸದ್ದು ಇರಲಿಲ್ಲ. ಗುಂಪು ನೃತ್ಯ ಇರಲಿಲ್ಲ.