ಅಳಿವಿನ ಅಂಚಿನಲ್ಲಿ ವೃತ್ತಿ ರಂಗಭೂಮಿ: ಮಡ್ಡೆ ಕಳವಳ

ಕಲಬುರಗಿ,ಏ.2-ವೃತ್ತಿರಂಗ ಭೂಮಿ ಇಂದು ಅಳವಿನ ಅಂಚಿಗೆ ಬಂದಿದೆ. ಪ್ರೇಕ್ಷಕರ ಕೊರತೆಯಿಂದ ಸೋರಗಿ ಹೋಗಿವೆ. ಪ್ರೇಕ್ಷಕರು ರಂಗಭೂಮಿಯಿಂದ ವಿಮುಖರಾಗಿದ್ದಾರೆ ಎಂದು ಹಿರಿಯ ವೃತ್ತಿ ರಂಗಭೂಮಿ ಕಲಾವಿದ ಮಲ್ಲಿಕಾರ್ಜುನ ಮಡ್ಡೆ ಬೇಸರ ವ್ಯಕ್ತಪಟ್ಟರು.
ರಂಗ ಸಂಗಮ ಕಲಾ ವೇದಿಕೆ ಮತ್ತು ಮೈಂದರ್ಗಿಯ ಜಗದ್ಗುರು ರೇಣುಕಾಚಾರ್ಯ ನಾಟ್ಯ ಸಂಘದ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ವಿಶ್ವ ರಂಗ ಭೂಮಿ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನನ್ನ ಕಂಪನಿಗೆ ಪ್ರತಿ ತಿಂಗಳು ಕನಿಷ್ಠ 5 ರಿಂದ 6 ಲಕ್ಷ ವೆಚ್ಚವನ್ನು ಭರಿಸುತ್ತೆನೆ. ರಾಜ್ಯ ಸರಕಾರ ವೃತ್ತಿ ರಂಗಭೂಮಿಗಳ ನೆರವಿಗೆ ಮುಂದಾಗಬೇಕೆಂದು ಅಭಿಪ್ರಾಯಪಟ್ಟರು.
ಮುಖ್ಯ ಅಥಿತಿಯಾಗಿ ಮಾತನಾಡಿದ ಡಾ.ಸಮಗಮೇಶ ಎಸ್ ಹಿರೇಮಠರವರು, ರಂಗಭೂಮಿಯು ಆಯಾ ಕಾಲಘಟ್ಟದ ಸಮಾಜದ ಪ್ರತಿಬಿಂಬವಾಗಿದೆ. ಕೌಟುಂಬಿಕ, ಸಾಮಾಜಿಕ, ಪೌರಾಣಿಕ, ವಿಡಂಬನೆ, ಹಾಸ್ಯ ಜೊತೆಗೆ ಸಮಾಜದ ಒರೆಕೋರೆಗಳನ್ನು ತಿದ್ದುವ ಮಾದ್ಯಮವಾಗಿದೆ. ಇನ್ನು ರಂಗಭೂಮಿಯ ಮಹಿಳಾ ಕಲಾವಿದರು ಸಮಾಜದ ಕೊಂಕುನುಡಿಗಳನ್ನು ಹಾಗೂ ಕೆಟ್ಟ ದೃಷ್ಠಿಯಿಂದ ತನ್ನನ್ನು ತಾನು ರಕ್ಷಿಸಿಕೊಂಡು ಪಾತ್ರಗಳಿಗೆ ಜೀವ ತುಂಬಿ ರಂಗದ ಮೇಲೆ ವಿಜ್ರಂಭಿಸಿ ಪ್ರೇಕ್ಷಕರ ಮನವನ್ನು ರಂಜಿಸಿದರೂ ಅಂಕದ ಪರದೆ ಜಾರಿದ ಮೇಲೆ ಅವರ ಬದುಕು ದಾರುಣವಾದುದು ಎಂದರು.
ಪೆÇ್ರ. ಬಿ.ಎಚ್. ನಿರಗುಡಿಯವರು ಮಾತನಾಡಿ, ವೃತ್ತಿರಂಗಭೂಮಿಗೆ ಸಮಾಜ ಮತ್ತು ಸರಕಾರ ಪೆÇ್ರೀತ್ಸಾಹಿಸಬೇಕು, ಕಲಾವಿದರನ್ನು ಗುರುತಿಸಿ ಗೌರವ ಸಲ್ಲಿಸಬೇಕು, ಅವರ ಬಾಳಿಗೆ ಬೆಳಕಾಗಬೇಕು ಎಂದು ತಮ್ಮ ಅನಸಿಕೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಡಾ. ಸುಜಾತಾ ಜಂಗಮಶೆಟ್ಟಿಯವರು ರಂಗದ ಆಶಯ ನುಡಿಗಳನ್ನು ನುಡಿದರು ಮತ್ತು ರಂಗಭೂಮಿ ಕಲಾವಿದ ವಿಶ್ವರಾಜ ಪಾಟೀಲರವರು ವಂದಿಸಿದರು, ನಂತರ ಮಗ ಹೋದರು ಮಾಂಗಲ್ಯ ಬೇಕುನಾಟಕ ಪ್ರದರ್ಶನವಾಯಿತು.