ಅಳಿವಿನ ಅಂಚಿನಲ್ಲಿರುವ ಜಾನಪದ ಕಲೆಗಗಳನ್ನು ಉಳಿಸಿ: ವಿಜುಗೌಡ ಪಾಟೀಲ್

ಬಬಲೇಶ್ವರ, ಮಾ.23-ದೂರದರ್ಶನ, ಮೊಬೈಲ್ ಜಗತ್ತಿನಲ್ಲಿ ಗ್ರಾಮೀಣ ಜಾನಪದ ಕಲೆಗಳು ಅಳಿದು ಹೋಗುತ್ತಿದ್ದು ಅವುಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಜಾನಪದ ಪರಿಷತ್ತು ಶ್ರಮಿಸುತ್ತಿರುವದು ಹೆಮ್ಮೆಯ ಸಂಗತಿ ಎಂದು ಕರ್ನಾಟಕ ಬೀಜ ಮತ್ತು ಸಾವಯವ ನಿಗಮದ ಅಧ್ಯಕ್ಷರಾದ ವಿಜುಗೌಡ ಎಸ್ ಪಾಟೀಲ್ ಹೇಳಿದರು.
ಬಬಲೇಶ್ವರ ತಾಲೂಕಿನ ಮಮದಾಪುರದ ಸಿದ್ರಾಮೇಶ್ವರ ದೇವಸ್ಥಾನ ಸಭಾಂಗಣದಲ್ಲಿ ಜರುಗಿದ ಮಮದಾಪುರ ಜಾನಪದ ಪರಿಷತ್ತು ವಲಯ ಘಟಕದ ಉದ್ಘಾಟನೆ, ಪದಗ್ರಹಣ ಮತ್ತು ಕಲಾಪ್ರದರ್ಶನ ಡೊಳ್ಳುಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.
ಜಾನಪದ ಪರಿಷತ್ತು ಜಿಲ್ಲಾಧ್ಯಕ್ಷರಾದ ಬಾಳನಗೌಡ ಎಸ್ ಪಾಟೀಲ್ (ಪಡಗಾನೂರ) ಮಾತನಾಡಿ ಜಾನಪದ ಮಾನವನ ಹುಟ್ಟಿನಿಂದ ಬಂದ ಸಂಸ್ಕøತಿ ಆದರೂ ಪಾಶ್ಚಾತ್ಯ ಸಂಸ್ಕೃತಿಯಿಂದ ಜಾನಪದ ಕಲೆಗಳು ಮರೆಮಾಚುತ್ತಿವೆ ಅವುಗಳನ್ನು ಜಿಲ್ಲೆಯ ಪ್ರತಿಹಳ್ಳಿಗಳಲ್ಲಿ ಉಳಿಸಿ ಬೆಳೆಸೋಣ, ಮುಂದಿನ ಪೀಳಿಗೆಗೆ ನಮ್ಮ ಜಾನಪದ ಸಂಸ್ಕೃತಿಯ ಶ್ರೀಮಂತಿಕೆ ತಿಳಿಸಲು ಸದಾ ಜಾನಪದ ಪರಿಷತ್ತು ಸಿದ್ಧವಾಗಿದೆ. ಮೌಲ್ಯಗಳು ಜಾನಪದ ಕಲೆ ಗಳಲ್ಲಿ ಹಾಗೂ ತಾಯಿಯ ಹಾಡಿನಲ್ಲಿ ನಮ್ಮ ಸಂಸ್ಕೃತಿಗಳು ಉಳಿದಿವೆ, ಆಚಾರ, ವಿಚಾರ, ಸಂಪ್ರದಾಯಗಳು ಕೇವಲ ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ ಜೀವಂತ ಉಳಿದಿವೆ ಎಂದರು.
ಹಿರಿಯ ಕಲಾವಿದರಾದ ಸಿದ್ದಲಿಂಗಯ್ಯ ಹಂಚಿನಾಳಮಠ ಡಾ.ಎಮ್.ಎಸ್.ಹಿರೇಮಠ ಶಿವಾನಂದ ಬಡಿಗೇರ. ಎಚ್.ಗುರುರಾಜ. ವಿದ್ಯಾನಂದಯ್ಯಾ ಹಂಚಿನಾಳಮಠ. ನಾಗಯ್ಯ ಹಿರೇಮಠ. ಮಲ್ಲಪ್ಪ ಗಲಗಲಿ. ಭೀಮಪ್ಪ ಬಡಿಗೇರ. ನಾಗಪ್ಪ ಭಜಂತ್ರಿ. ಶಂಕರ್ ಹೂಗಾರ. ಭಗವಂತ ಬೆಳ್ಳನ್ನವರ. ಸನ್ಮಾನಿಸಲಾಯಿತು.
ಮಮದಾಪುರ ಜಿಲ್ಲಾ ಪಂಚಾಯಿತಿ ಸದಸ್ಯರಾದ ಕಲ್ಲಪ್ಪ ಕೊಡಬಾಗಿ ಮಾತನಾಡಿ ಜಾನಪದ ಎನ್ನುವುದು ನಿಜವಾದ ಜಾನರ ಜಾತ್ರೆ ಒಳ್ಳೆಯ ಸಂಸ್ಕಾರ ಕಲಿಸಿಕೊಡುತ್ತಿರುವುದು ಶ್ಲಾಘನೀಯ ಎಂದರು.
ಕಲಾವಿದರ ನೋವು ನಲಿವು ಗಳಿಗೆ ಜಿಲ್ಲಾ ಜಾನಪದ ಪರಿಷತ್ತು ಅಧ್ಯಕ್ಷರಾದ ಬಾಳನಗೌಡ ಪಾಟೀಲರ ಧ್ವನಿಯಾಗಿದ್ದು ಅವರ ನೇತೃತ್ವದಲ್ಲಿ ಜಾನಪದ ಕಲಾವಿದರಿಗೆ ಸರ್ಕಾರಿ ಸೌಲಭ್ಯ ಒದಗಿಸುತ್ತಿರುವುದು ಸಂತೋಷದ ಸಂಗತಿ ಎಂದು ಹೇಳಿದರು.
ಯುವ ಧುರೀಣರು ಹಾಗೂ ಕಲಾಪ್ರೂತ್ಸಾಹಕರಾದ ಗುರನಗೌಡ ಅಂಗಡಿ ಮಾತನಾಡಿ ಕಲಾಪ್ರದರ್ಶನಗಳು ಜರುಗುತ್ತಿರುವುದರಿಂದ ಕಲಾವಿದರಿಗೆ ಬೆಲೆ ಸಿಗುತ್ತಿದೆ ಎಂದರು.ಸದಾಶಿವಯ್ಯ ಕಾಖಂಡಕಿಮಠ ಮಾತನಾಡಿದರು.
ಬಬಲೇಶ್ವರ ತಾಲೂಕು ಅಧ್ಯಕ್ಷ ಗೊಳಪ್ಪ ಯರನಾಳ ಮಾತನಾಡಿ ತಾಲೂಕಿನಲ್ಲಿ ವಲಯ ಘಟಕ ಉದ್ಘಾಟನೆ ಸಂತಸ ತಂದಿದೆ ತಾಲ್ಲೂಕಿನಾದ್ಯಂತ ಎಲ್ಲಾ ಗ್ರಾಮಗಳ ಕಲಾವಿದರು ಮತ್ತು ಕಲೆ ಗುರ್ತಿಸಿ ಗೌರವಿಸಿ, ಪ್ರೂತ್ಸಾಹಿಸಿ ಜಾನಪದ ಕಲೆ ಉಳಿಸೋಣ ಎಂದರು. ಕಾರ್ಯಕ್ರಮದ ದಿವ್ಯ ಸಾನಿಧ್ಯ ಬಬಲೇಶ್ವರ ಬ್ರಹ್ಮನ್ಮಠದ ಡಾ. ಮಹಾದೇವ ಶಿವಾಚಾರ್ಯ ಮಹಾಸ್ವಾಮೀಜಿಗಳು. ಸಾನಿಧ್ಯ ಮಮದಾಪುರ ವಿರಕ್ತಮಠದ ಅಭಿನವ ಮುರಘೇಂದ್ರ ಮಹಾಸ್ವಾಮೀಜಿಗಳು ವಹಿಸಿದ್ದರು. ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷ ಜಗದೀಶ ಸಾಲಳ್ಳಿ,
ತಾಲೂಕು ಪಂಚಾಯತ ಸದಸ್ಯರಾದ ಮಾಬೂಬ್ಬಿ ಕೀಜಿ. ಜಾನಪದ ವಲಯ ಘಟಕ ಅಧ್ಯಕ್ಷ ಈರಪ್ಪ ಶೀಂತ್ರಿ. ಜಿಲ್ಲಾ ಜಂಟಿ ಕಾರ್ಯದರ್ಶಿ ಈರಣ್ಣ ಹೊಸಟ್ಟಿ. ಜಿಲ್ಲಾ ಸಂಚಾಲಕ ಜಿ. ಎಂ. ಹಳ್ಳೂರ. ಜಿಲ್ಲಾ ಕಜಾಪ ಸದಸ್ಯ ಮೌಲಾಸಾಬ ಜಾಗೀರದಾರ. ಗ್ರಾಮ ಪಂಚಾಯ್ತಿ ಅಧ್ಯಕ್ಷ. ಗಂಗವ್ವ ಶಿಂಧೆ, ಮಲ್ಲಿಕಾರ್ಜುನ ಗಂಗೂರ ಉಪಸ್ಥಿತರಿದ್ದರು ಡೊಳ್ಳು ಕುಣಿತ, ವೀರಗಾಸೆ ಗೊಂದಳಿಪದ, ಹಂತಿಪದ ಗೊಂಬೆ ಕುಣಿತ, ಚೌಡಕಿಪದ ಭಜನಾ, ಶಹನಾಯಿ ಹೋಳಿಪದ ಸೇರಿದಂತೆ 15 ಕ್ಕೂ ಹೆಚ್ಚು ಜಾನಪದ ಕಲಾ ತಂಡಗಳು ಕಲೆ ಪ್ರದರ್ಶನಗೈದವು.
ಸುರೇಶ ಕರಿಕಲ್ಲ ಸ್ವಾಗತಿಸಿದರು. ಚಂದ್ರಶೇಖರ ಅವಟಿ ನಿರೂಪಿಸಿದರು. ಆನಂದ ನಾಯಕ ವಂದಿಸಿದರು.