ಹೆಣ್ಣು ಕೊಟ್ಟ ಅಕ್ಕನ ಕೊಂದ ತಮ್ಮ

ಬೆಂಗಳೂರು,ಫೆ.೨೫-ಮೊಮ್ಮಗಳನ್ನು ಊರಿಗೆ ಕರೆದುಕೊಂಡು ಹೋಗಲು ಮನೆಗೆ ಬಂದಿದ್ದ ಹೆಣ್ಣು ಕೊಟ್ಟ ಅಕ್ಕ ಪಾಪಿ ತಮ್ಮನಿಂದಲೇ ಬರ್ಬರವಾಗಿ ಕೊಲೆಯಾದ ದಾರುಣ ಘಟನೆ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಕೆಜಿಎಫ್ ನ ಕೋರಮಂಡಲ ಬಡಾವಣೆಯ ಹೆಣ್ಣು ಕೊಟ್ಟ ಅಕ್ಕ ಏಳಲ್ ಅರಸಿ (೪೮)ಯನ್ನು ಚಾಕುವಿನಿಂದ ಚುಚ್ಚಿ ಕೊಲೆಗೈದು ಪರಾರಿಯಾಗಿರುವ ತಮ್ಮ ಹಾಗೂ ಬಳಿಯ ಕೆ.ಜಿ.ಎಫ್ ನ ಬೆಮೆಲ್ ನಗರದ ದಿವಾಕರ್ (೨೯) ಬಂಧನಕ್ಕೆ ತೀವ್ರ ಶೋಧ ನಡೆಸಲಾಗಿದೆ.ಮೃತ ಏಳಲ್ ಅರಸಿಗೆ ಐವರು ಮಕ್ಕಳಿದ್ದು, ಹಿರಿಯ ಪುತ್ರಿ ಸಿಂಧೂ ಅರಸಿಯನ್ನು ಸ್ವಂತ ತಮ್ಮ ದಿವಾಕರ್‌ಗೆ ಕೆಲ ವರ್ಷಗಳ ಹಿಂದೆ ಮದುವೆ ಮಾಡಿಕೊಟ್ಟಿದ್ದು, ದಂಪತಿಗೆ ಹೆಣ್ಣು ಮಗುವಿದೆ.ಕೌಟುಂಬಿಕ ಕಾರಣಗಳಿಂದ ದಿವಾಕರ್ ಮತ್ತು ಪತ್ನಿ ಮದ್ಯೆ ಜಗಳ ನಡೆಯುತ್ತಿದ್ದು ಇದರಿಂದ ಬೇಸತ್ತು ಸಿಂಧೂ ಅರಸಿ ದಿವಾಕರ್‌ನಿಂದ ದೂರವಾಗಿ ಪತ್ನಿ, ತಾಯಿ ಜೊತೆಗೆ ಕೋಲಾರದ ಕೆ.ಜಿ.ಎಫ್.ನಲ್ಲಿ ವಾಸವಾಗಿದ್ದರು.ಆರೋಪಿ ದಿವಾಕರ ಪತ್ನಿ ಹಾಗೂ ಅಕ್ಕನ ಗಮನಕ್ಕೆ ತಾರದೇ ಕೆಂಗೇರಿ ನಾಗದೇವನ ಹಳ್ಳಿಯ ಬೃಂದಾವನ ಲೇಔಟ್‌ನ ತಂಗಿಯ ಮನೆಗೆ ಕರೆದುಕೊಂಡು ಹೋಗಿರುತ್ತಾನೆ. ಈ ವಿಷಯವನ್ನು ತಿಳಿದ ಪತ್ನಿ ಸಿಂಧೂ ತಾಯಿ ಏಳಲ್ ಅರಸಿ, ತಂಗಿ ಸುಷ್ಮಾ ಆಕೆಯ ಪತಿ ಕಾರ್ತಿಕ್ ದಿವಾಕರ್ ರವರ ತಂಗಿಯ ಮನೆಗೆ ಹೋಗಿ ಮಗು ವೃತಿಕಾಳನ್ನು ಪರೀಕ್ಷೆಯಿದ್ದು ಕಳುಹಿಸಿಕೊಡುವಂತೆ ಕೇಳಿದ್ದಾರೆ.ಆರೋಪಿ ದಿವಾಕರು ಮಗುವನ್ನು ಕಳುಹಿಸಿ ಕೊಡುವುದಿಲ್ಲವೆಂದು ಗಲಾಟೆ ಮಾಡಿದಾಗ ಏಳಲ್ ಅರಸಿರವರು ಏಕೆ ಮಗುವನ್ನು ನಮ್ಮ ಜೊತೆ ಕಳುಹಿಸಿ ಕೊಡುವುದಿಲ್ಲ ಗಲಾಟೆ ತೆಗೆದಿದ್ದಾರೆ.ಇದರಿಂದ ಆಕ್ರೋಶಗೊಂಡ ದಿವಾಕರ ಏಳಲ್ ಅರಸಿ ಅವರ ಕುತ್ತಿಗೆ ಭಾಗಕ್ಕೆ ಚಾಕುವಿನಿಂದ ಚುಚ್ಚಿರುತ್ತಾನೆ. ತಾಯಿಯನ್ನು ರಕ್ಷಿಸುವ ಸಲುವಾಗಿ ಅಡ್ಡ ಹೋದಾಗ ಪತ್ನಿ ಸಿಂಧೂ ಬಲಗೈನ ಬೆರಳಿಗೆ ಚುಚ್ಚಿ ಪರಾರಿಯಾಗಿದ್ದಾನೆ.ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಏಳಲ್ ಅರಸಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿನ ವೈದ್ಯರು ಈಗಾಗಲೇ ಮೃತರಾಗಿರುತ್ತಾರೆ ತಿಳಿಸಿದ್ದಾರೆ.ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಕೆಂಗೇರಿ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಆರೋಪಿ ಪತ್ತೆಗೆ ಮುಂದಾಗಿದ್ದಾರೆ.