ಅಳವಿನ ಅಂಚಿನಲ್ಲಿ ಇರುವ ಭಜನೆಗೆ ಸರಕಾರ ನೀಡುವುದು ಅವಶ್ಯಕ : ಸುಭಾಷ ಅಷ್ಟಿಕರ್

ಹುಮನಾಬಾದ :ನ.17: ಅಳವಿನ ಅಂಚಿನಲ್ಲಿ ಇರುವ ಈ ಭಾಗದಲ್ಲಿ ಭಜನೆಗೆ ಸರಕಾರ ಹೆಚ್ಚಿನ ಪೆÇ್ರೀತ್ಸಾಹ ನೀಡುವುದು ಅವಶ್ಯಕವಿದೆ ಎಂದು ಕರ್ನಾಟಕ ಆರ್ಯ ಪ್ರತಿನಿಧಿ ಸಭಾ ರಾಜ್ಯಾಧ್ಯಕ್ಷ ಸುಭಾಷ ಅಷ್ಟಿಕರ್ ಹೇಳಿದರು.
ಪಟ್ಟಣದ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನ ಆವರಣದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸೇವಾ ಸಮಿತಿ ಸಹಯೋಗದಲ್ಲಿ ಶನಿವಾರ ಸಾಯಂಕಾಲ ಹರಿನಾಮ ಸಪ್ತಾಹ ಸಾಮಾನ್ಯ ಪ್ರಾಯೋಜಿತ ಅಡಿಯಲ್ಲಿ ಸಂಸ್ಕೃತಿಕ (ಭಜನೆ) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು.
ಭಜನೆ, ಕೀರ್ತನೆ, ವಚನ, ದಾಸವಾಣಿ, ಭಕ್ತಿ ಗೀತೆಗಳು ಉಳಿಸಿ ಬೆಳೆಸಿಕೊಂಡು ಬಂದಿರುವ ಭಜನಾ ತಂಡಗಳು ನಶಿಸಿ ಹೊಗುತ್ತಿವೆ. ಇಂದಿನ ಕಾಲಮಾನಗಳಲ್ಲಿ ಅವುಗಳನ್ನು ಮಹಾರಾಷ್ಟ ಮಾದರಿಯಲ್ಲಿ ಭಜನಾ ಕಲಿಸಿ ಕೊಡುವ ಪಾಠ ಶಾಲೆಗಳು ಪ್ರಾರಂಭಿಸುವ ಮೂಲಕ ಭಜನಾ ಅಕಾಡೆಮಿ ಸ್ಥಾಪನೆಯಾಗಬೇಕಿದೆ ಎಂದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ ಲಕ್ಷ್ಮಿ ವೆಂಕಟೇಶ್ವರ ಶಾಲೆಯ ಕಾರ್ಯದರ್ಶೀ ಶಿವಶಂಕರ ತರನಳ್ಳಿ ಮಾತನಾಡಿ. ಭಜನಾ ಪದಗಳು ಕೇವಲ ಮನರಂಜನೆಗೆ ಅಷ್ಟೇ ಅಲ್ಲದೇ ವಿವಿಧ ಮಹಾನ ದಾರ್ಶನಿಕರ ಜೀವನದ ಚರಿತ್ರೆ, ಪುರಾಣಗಳು, ರಾಮಾಯಣ, ಮಹಾಭಾರತಗಳಂತಹ ಕಥೆಗಳನ್ನು ಅರಿತುಕೊಂಡು ಭಜನೆಗಳ ಮೂಲಕ ಜನಸಾಮಾನ್ಯರಿಗೆ ತಿಳಿಸುವಂತಹ ಪ್ರಯತ್ನವನ್ನು ಭಜನಾ ಪದಗಳು ಮಾಡುತ್ತಿವೆ. ನಾಡಿನ ಶರೀಫರು, ಗವಾಯಿಗಳು, ಸಂತರ ತತ್ವಪದಗಳು ಉಳಿದು ಬೆಳೆಯಲು ಭಜನಾ ಪದಗಳು ಪ್ರಮುಖ ಕಾರಣವಾಗಿವೆ. ಪ್ರಸ್ತುತ ದಿನಗಳಲ್ಲಿ ಯುವಕರು ದುಶ್ಚಟಗಳಿಂದ ದೂರವಿದ್ದು ಭಜನಾ ಪದಗಳನ್ನು ಹವ್ಯಾಸವಾಗಿ ಬೆಳೆಸಿಕೊಂಡು ಕರಗತ ಮಾಡಿಕೊಳ್ಳಬೇಕು. ಭಜನಾ ಅಂತಹ ಕಲೆಗೆ ಪೆÇ್ರೀತ್ಸಾಹ ನೀಡಬೇಕು ಎಂದು ಹೇಳಿದರು.
ಗಣೇಶಸಿಂಗ ತಿವಾರಿ, ಗೋವಿಂದಸಿಗ ತಿವಾರಿ, ಜ್ಞಾನದೇವ ಧೂಮಾಳೆ, ಬಸವರಾಜ ಭಾವಿ, ಶಂಭು, ಗೋರಖನಾಥ, ಕಾಶಿನಾಥ ಬಿರಾದಾರ, ಚಂದ್ರಕಾತ ಶಟಗಾರ, ವಿಜಯಕುಮಾರ ಸಾಯಗಾಂವಕರ, ದೀಪಕ ಭಾವಿ, ನವಿನಕುಮಾರ, ಭಜನಾ ಪದಗಳನ್ನು ಪ್ರಸ್ತುತ ಪಡಿಸಿದರು. ಲಕ್ಷ್ಮಿ ವೆಂಕಟೇಶ್ವರ ಶಾಲೆಯ ನಿರ್ದೇಶಕ ಚಂದ್ರಕಾತ ಜಾಧವ, ಬೀದರನ ಕನ್ನಡ ಮತ್ತು ಸಂಸ್ಕೃತಿಕ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ, ಕರ್ನಾಟಕ ಆರ್ಯ ಪ್ರತಿನಿಧಿ ಸಭಾ ರಾಜ್ಯ ಉಪಾಧ್ಯಕ್ಷ ನಾರಾಯಣ ಚಿದ್ರಿ, ಮಾಣಿಕಪ್ರಭು ಸಮಸ್ಥಾನ ದರ್ಬಾರಿ ಅಜಯ ಸುಗಾಂವಕರ್ ಮಲ್ಲಿಕಾರ್ಜುನ ಮಾಳಶಟ್ಟಿ, ಬಾಬುರಾವ ಪೆÇಚಂಪಳ್ಳಿ, ಮಹೇಶ ಅಗಡಿ, ರಾಜಕುಮಾರ ತುಮಕುಂಟಾ ರಾಜುಸಿಂಗ ತಿವಾರಿ, ಸೇರಿದಂತೆ ಅನೇಕರಿದ್ದರು.