ಅಳಲು ಹುಣ್ಣಿಮೆ ಹಬ್ಬ” ಆಚರಣೆ.

ಹರಪನಹಳ್ಳಿ.ಸೆ.೧೩ : ತಾಲೂಕಿನ ಅರಸೀಕೆರೆಯಲ್ಲಿ ಅಳಲು ಹುಣ್ಣಿಮೆ ಹಬ್ಬವನ್ನು ಸಂತೋಷ, ಸಡಗರದಿಂದ ಮಾಡಿದರು.ಎಲ್ಲಾ ರೈತರು ತಮ್ಮ ಹೊಲಗಳಲ್ಲಿ ಸೊಗಸಾಗಿ ಬೆಳೆದ ವಿವಿಧ ರೀತಿಯ ಪೈರುಗಳ ನಡುವೆ 5 ಕಲ್ಲುಗಳನ್ನು ಇಟ್ಟು, ಎದುರಿಗೆ ಇನ್ನೊಂದು ಕಲ್ಲನ್ನು ಇಟ್ಟು (ಈ 5 ಕಲ್ಲುಗಳನ್ನು ಪಾಂಡವರೆAದು, ಈ ಪಾಂಡವರ ಎದುರಿಗೆ ಇಟ್ಟಿರುವ ಕಲ್ಲನ್ನು ಕಳ್ಳನೆಂದು) ಪೂಜೆ ನೆರವೇರಿಸಿ ನಂತರ ಹೊಲದಲ್ಲಿ ಮನೆಯಲ್ಲಿ ಅಡುಗೆ ಮಾಡಿ ತಂದ ಅಡುಗೆ ಮತ್ತು ಜೋಕಪ್ಪ ದೇವರು ಹೊತ್ತು ತಂದ ಮಹಿಳೆಯರು ಕೊಟ್ಟ ಸೊಪ್ಪನ್ನು ನೈವೇದ್ಯ ಅಂದರೆ ಚರಗ ಎನ್ನುವ ರೂಪದಲ್ಲಿ ಹೊಲಕ್ಕೆ ಎಸೆಯುತ್ತಾರೆ.ನಾಗರ ಪಂಚಮಿ ಹಬ್ಬದಂದು ಕಟ್ಟಿಕೊಂಡಿದ್ದ ನಾಗರ ದಾರವನ್ನು ತಾವು ಬೆಳೆದ ಪೈರಿಗೆ ಕಟ್ಟುತ್ತಾರೆ.ಈ ಸಮಯದಲ್ಲಿ ಹೊಲದ ಮಾಲೀಕರು ತಮ್ಮ ಹೊಲದಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರಿಗೆ, ಸ್ನೇಹಿತರಿಗೆ ಹಾಗೂ ತಮ್ಮ ಬಂಧು ಬಳಗದವರೆಲ್ಲರಿಗೂ ವಿವಿಧ ರೀತಿಯ ಭಕ್ಷ ಭೋಜನಗಳನ್ನು ಅಲ್ಲೇ ಹೊಲದಲ್ಲಿ ನೀಡುತ್ತಾರೆ.ಹೊಲದಲ್ಲಿ ಎಲ್ಲರೂ ಊಟ ಮಾಡಿ ಸಂಭ್ರಮಿಸುತ್ತಾರೆ.ಈ ಹಬ್ಬವನ್ನು ಅನಂತ ಹುಣ್ಣಿಮೆಯ ದಿನದಂದು ಪ್ರತೀವರ್ಷ ತಮ್ಮ ತಮ್ಮ ಹೊಲಗಳಲ್ಲಿ ಸಂತೋಷದಿಂದ ಆಚರಿಸುತ್ತಾರೆ.ಈ ಸಂದರ್ಭದಲ್ಲಿ ಹೊಲದ ಮಾಲೀಕರಾದ ಚಂದ್ರಮ್ಮ ಇದ್ದರು ಜೊತೆಗೆ ಬಸವರಾಜ್ ರಮತ್ನಾಳ್,ಕೆ.ಮಹೇಶ್,ಕೆ.ಬಸವರಾಜ್, ಮಂಜುನಾಥ್, ಅರುಣ್,ಮನು ಪಲ್ಲವಿ, ಅಂಬಿಕಾ,ಸುನAದ,ತನು,ಅನು ಗಗನ್,ಸುಮಂತ್ ಹಾಜರಿದ್ದರು.