ಅಲ್-ಬದರ್ ದಂತ ಮಹಾವಿದ್ಯಾಲಯದ ವೈದ್ಯರಿಂದ ಯಶಸ್ವಿ ಶಸ್ತ್ರ ಚಿಕಿತ್ಸೆ ಬಾಯಿ ತೆರೆಯಲೂ ಆಗದೆ ಇದ್ದ ಸ್ಥಿತಿಯಲ್ಲಿದ್ದ ಮೂವರಿಗೆ ಮರುಜೀವ

ಕಲಬುರಗಿ,ಸೆ.9-ಬಾಯಿ ತೆರೆಯಲೂ ಆಗದೆ ಇದ್ದ ಸ್ಥಿತಿಯಲ್ಲಿದ್ದ 11, 26 ಮತ್ತು 70 ವರ್ಷದ ರೋಗಿಗಳಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿ ಅವರು ಮೊದಲಿನಂತೆ ಸಹಜ ಜೀವನ ನಡೆಸುವಂತೆ ಮಾಡುವುದರ ಮೂಲಕ ಇಲ್ಲಿನ ಅಲ್ ಬದರ್ ಅಲ್-ಬದರ್ ದಂತ ಮಹಾವಿದ್ಯಾಲಯದ ಹಲ್ಲು, ಬಾಯಿ, ಮುಖ, ದವಡೆ ಶಾಸ್ತ್ರ ವಿಭಾಗದ ವೈದ್ಯರು ಅಮೋಘವಾದ ಸಾಧನೆ ಮಾಡಿದ್ದಾರೆ.
ಕಲಬುರಗಿ ನಗರದ ನಿಖಿಲ್ ಎಂಬ 11 ವರ್ಷದ ಬಾಲಕ ಬಾಯಿ ತೆರೆಯಲು ಆಗದಂತ ಸಮಸ್ಯೆಯಿಂದ ಬಳಲುತ್ತಿದ್ದ ಈ ಯುವಕನಿಗೆ ಯಶಸ್ವಿಯಾಗಿ ಬಾಯಿಯ ಶಸ್ತ್ರ ಚಿಕಿತ್ಸೆ ಮಾಡುವುದರ ಮೂಲಕ ಮೊದಲಿನಂತೆ ಸಹಜ ಜೀವನ ಕಳೆಯುವಂತೆ ಮಾಡಲಾಗಿದೆ.
ವೃತ್ತಿಯಲ್ಲಿ ಸಂಗೀತ ಶಿಕ್ಷಕರಾಗಿರುವ ವಿಜಯಪುರದ 26 ವರ್ಷದ ವ್ಯಕ್ತಿ ಕಳೆದ 6 ತಿಂಗಳಿಂದ ಬಾಯಿ ತೆರೆಯುವಿಕೆ ಕಡಿಮೆಯಾಗಿ ನೋವಿನಿಂದ ಬಳಲುತ್ತಿದ್ದರು. ಅವರಿಗೆ ಯಶಸ್ವಿಯಾಗಿ ಬಾಯಿಯ ಶಸ್ತ್ರ ಚಿಕಿತ್ಸೆ ನಡೆಸಿ ಅವರ ಬಾಯಿಯ ನೋವು ಕಡಿಮೆ ಮಾಡುವುದರ ಜೊತೆಗೆ ಬಾಯಿ ತೆರೆಯುವಿಕೆಯನ್ನು ಮೊದಲಿನಂತೆ ಮಾಡಲಾಗಿದೆ.
ವೃತ್ತಿಯಲ್ಲಿ ರೈತರಾಗಿರುವ 70 ವರ್ಷದ ಪರಮೇಶ್ವರ ಎಂಬುವವರ 8 ತಿಂಗಳಿಂದ ಬಾಯಿ ತೆರೆಯುವಿಕೆಯ ಸಮಸ್ಯೆಯಿಂದ ಬಳಲುತ್ತಿದ್ದರು. ಅವರ ಬಾಯಿಯ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿ ಅವರನ್ನು ಗುಣಪಡಿಸಲಾಗಿದೆ.
ಆಸ್ಪತ್ರೆಯ ಹಲ್ಲು, ಬಾಯಿ, ಮುಖ, ದವಡೆ ಶಸ್ತ್ರ ಚಿಕಿತ್ಸಾ ವಿಭಾಗದ ಮುಖ್ಯಸ್ಥರನ್ನೊಳಗೊಂಡ ಎಂ.ಜಿ.ಮುಜೀಬ್, ಪ್ರಾಚಾರ್ಯ ಡಿ.ಆರ್.ಸೈಯದ್, ಉಪ ಪ್ರಾಂಶುಪಾಲ ಡಿ.ಆರ್.ಅರ್ಷದ್ ಹುಸೇನ್, ಪ್ರಾಧ್ಯಾಪಕ ಡಾ.ನೀಲಕಮಲ್ ಹಳ್ಳೂರು, ಪ್ರಾಧ್ಯಾಪಕಿ ಡಾ.ಆಯಿಶಾ ಸಿದ್ದಿಖಾ, ಡಾ.ಸೈಯದ್ ಜಕಾವುಲ್ಲಾ, ಡಾ.ಚೈತನ್ಯ ಕೊಠಾರಿ, ಡಾ.ಶಿರೀನ್ ಫಾತಿಮಾ, ಡಾ.ಸೈಯದ್ ಮನಾಜಾರ್ ಹುಸೇನ್, ಡಾ.ಸಂತೋಷ ಕಾಸಬೆತ್, ಡಾ.ತೇಜಸ್ವಿನಿ, ಡಾ.ನಿಖಿತಾ ಅವರನ್ನೊಳಗೊಂಡ ಸಮರ್ಥ ವೈದ್ಯರ ತಂಡ ಈ ಮೂರು ಅಪರೂಪದ ಶಸ್ತ್ರ ಚಿಕಿತ್ಸೆಯನ್ನು ನಡೆಸುವುದರ ಮೂಲಕ ಉತ್ತಮವಾದ ಸಾಧನೆ ಮಾಡಿದೆ.