ಅಲ್ ಅಮೀನ್ ಪದವಿ ಕಾಲೇಜದಲ್ಲಿ ವಿಶ್ವ ಸ್ಕಿಜೋಫ್ರೀನಿಯಾ ದಿನಾಚರಣೆ

oplus_2

ಬೀದರ:ಮೇ.30:ಜಿಲ್ಲಾ ಪಂಚಾಯತ್, ಬೀದರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬೀದರ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಬೀದರ ಹಾಗೂ ಅಲ್ ಅಮೀನ್ ಪದವಿ ಕಾಲೇಜು ಬೀದರ ರವರ ಸಹಯೋಗದಲ್ಲಿ ವಿಶ್ವ ಸ್ಕಿಜೋಫ್ರೀನಿಯಾ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದ ಉದ್ಘಾಟಕರಾದ ಜಿಲ್ಲಾ ಮಾನಸಿಕ ಆರೋಗ್ಯ ಅಧಿಕಾರಿಗಳಾದ ಡಾ. ಕಿರಣ ಎಂ. ಪಾಟೀಲ ಮಾತನಾಡಿ ಸಮಾಜದಲ್ಲಿ ಮಾನಸಿಕ ಸಮತೋಲನೆಯನ್ನು ಕಾಪಾಡಿಕೊಂಡು ಇರಬೇಕು, ಮಾನಸಿಕ ಸಮತೋಲನೆಯನ್ನು ಕಳೆದುಕೊಳ್ಳುವ ಪರಿಸ್ಥಿತಿಗೆ ಒಳಗಾಗಬಾರದು ಎಂದು ಹೇಳಿದರು ಹಾಗೂ ಸ್ಕಿಜೋಫ್ರಿನಿಯಾ ಕಾಯಿಲೆ ಪ್ರಥಮ ಹಂತದಲ್ಲಿಯೇ ಕಾಯಿಲೆಗೆ ಚಿಕಿತ್ಸೆಯನ್ನು ಪಡೆದುಕೊಳ್ಳುವುದು ಉತ್ತಮ ಎಂದು ಹೇಳಿದರು.
ಹೆಚ್ಚು ಫೆÇೀನ್ ಬಳಕೆ ಮಾಡಬಾರದೆಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು ಹಾಗೂ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಧ್ಯಾನ, ಯೋಗ, ನಿಯಮಗಳನ್ನು ಬಳಸಿಕೊಳ್ಳಬೇಕು ಹಾಗೂ ಟೆಲಿಮಾನಸ್ 14416 ಟೊಲ್‍ಫ್ರಿ ಸಹಾಯವನ್ನು ಪಡೆದುಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಸಲಹೆ ನೀಡಿದರು.
ಇನ್ನೋರ್ವ ಅತಿಥಿ ಉಪನ್ಯಾಸಕರಾದ ಜಿಲ್ಲಾ ಮಾನಸಿಕ ಆರೋಗ್ಯ ಮನೋವೈದ್ಯರಾದ ಅಮಲ್ ಶರೀಫ್ ಅವರು ಮಾತನಾಡಿ ಕಾಯಿಲೆಗೆ ಒಳಗಾದ ತಕ್ಷಣ ಮನೋವೈದ್ಯರ ಸಲಹೆಯನ್ನು ಹಾಗೂ ಆಪ್ತ ಸಮಾಲೋಚಕರ ಹತ್ತಿರ ಸಹಾಯವನ್ನು ಪಡೆದುಕೊಳ್ಳುಬೇಕೆಂದು ಹೇಳಿದರು. ಮಾನಸಿಕ ಕಾಯಿಲೆ ದಿನದಿಂದ ದಿನಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತಿದೆ. ಅದಗೋಸ್ಕರ ಆಪ್ತ ಸಮಾಲೋಚಕರ ಸಲಹೆಗಳನ್ನು ಪಡೆದು ಕಡಿಮೆ ಸಮಸ್ಯೆ ಇರುವಾಗಲೇ ಪರಿಹಾರ ಕಂಡುಕೊಳ್ಳುವ ಬಗ್ಗೆ ತಿಳಿಹೇಳಿದರು.
ಇದೇ ಸಂದರ್ಭದಲ್ಲಿ ಅಲ್ ಅಮೀನ್ ಕಾಲೇಜಿನ ಪ್ರಾಂಶುಪಾಲರಾದ ಮಹ್ಮದ ಖಾಜಾ, ಹಿರಿಯ ಲೆಪ್ರಸಿ ಅಧಿಕಾರಿಗಳಾದ ವೀರಶೆಟ್ಟಿ ಚನ್ನಶೆಟ್ಟಿ , ಮನೋಶಾಸ್ತ್ರಜ್ಞರಾದ ಮಲ್ಲಿಕಾರ್ಜುನ ಗುಡ್ಡೆ, ಆಪ್ತ ಸಮಾಲೋಚಕರಾದ ಸೀಮಪ್ಪ ಸರ್ಕುರೆ, ರೇಣುಕಾ, ಅಲ್ ಅಮೀನ್ ಕಾಲೇಜಿನ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಸ್ವಾಗತವನ್ನು ಮಲ್ಲಿಕಾರ್ಜುನ ಗುಡ್ಡೆ ಹಾಗೂ ಕಾರ್ಯಕ್ರಮದ ನಿರೂಪಣೆ ರೇಣುಕಾ ಮಾಡಿದರು ಹಾಗೂ ಉಪನ್ಯಾಸಕಿಯಾದ ಅಫರೋಜ್ ಇವರು ವಂದನಾರ್ಪಣೆ ಮಾಡಿದರು.