ಅಲ್‍ಅಮೀನ ವೈದ್ಯಕೀಯ ಕಾಲೇಜ್‍ನಲ್ಲಿ 66ನೇ ಕನ್ನಡ ರಾಜ್ಯೋತ್ಸವ

ವಿಜಯಪುರ, ನ.4-ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ನವೆಂಬರ್ 1ರಂದು ಅಲ್‍ಅಮೀನ ವೈದ್ಯಕೀಯ ಕಾಲೇಜ್‍ನಲ್ಲಿ 66ನೇ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಅಂದು ಬೆಳಿಗ್ಗೆ 9ಗಂಟೆಗೆ ನಾಡಧ್ವಜರೋಹಣವನ್ನು ಸಂಸ್ಥೆಯ ನಿರ್ದೇಶಕರಾದ ಡಾ ಬಿ ಎಸ್ ಪಾಟೀಲರು ನೆರವೇರಿಸಿದರು ನಂತರ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಕರ್ನಾಟಕ ವಿದ್ಯಾರ್ಥಿಗಳಿಂದ ಹಣ್ಣು ಹಂಪಲು ವಿತರಿಸಲಾಯಿತು.
ಸಾಯಂಕಾಲ 7:30 ಗಂಟೆಗೆ 66ನೇ ರಾಜ್ಯೋತ್ಸವದ ಉದ್ಘಾಟನಾ ಸಮಾರಂಭ ಅಲ್ ಅಮೀನ್ ಆವರಣದಲ್ಲಿರುವ ಬಯಲು ರಂಗಮಂದಿರದಲ್ಲಿ ನೆರವೇರಿತು, ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶರಣ ಸಾಹಿತಿ ಚಿಂತಕರಾದ ಡಾ ಜೆ ಎಸ್ ಪಾಟೀಲರು ಕನ್ನಡದ ಜ್ಯೋತಿ ಬೆಳಗಿಸುವದರೊಂದಿಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ,
ಮನುಷ್ಯನ ಉಗಮ ಜೀವ ವಿಕಸನ ಪ್ರಕಿuಟಿಜeಜಿiಟಿeಜಯೆ ಹಾಗು ಭಾಷೆಯ ಬೆಳವಣಿಗೆಯ ಕುರಿತು ಮಾತನಾಡುತ್ತ ಕನ್ನಡ ಭಾಷೆಯ ಐತಿಹಾಸಿಕ ಬೆಳವಣಿಗೆಯ ಮೇಲೆ ಬೆಳಕು ಚೆಲ್ಲಿದರು. ಭಾಷಾವಾರು ಪ್ರಾಂತ್ಯಗಳ ರಚನೆ? ಕರ್ನಾಟಕ ಏಕಿಕರಣ? ಕನ್ನಡ ಭಾಷೆಯ ವಿಶಿಷ್ಟತೆಗಳು ಹಾಗು ಕನ್ನಡದ ಬೆಳವಣಿಗೆಗೆ ಹಲವರ ಕೊಡುಗೆಯ ಕುರಿತು ಸುಧೀರ್ಘವಾಗಿ ಮಾತನಾಡದರು. ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ ಎಂ ಕಲಬುರಗಿಯವರು ಕನ್ನಡ ನಾಡಿನ ಇತಿಹಾಸದ ಕುರಿತು ಮಾತನಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಪ್ರಾದ್ಯಾಪಕರಾದ ಡಾ. ರವಿಕುಮಾರ್ ಬಿರಾದಾರ ಅವರು ರೋಗಿಗಳ ಚಿಕಿತ್ಸೆಗೆ ಪ್ರಾಂತೀಯ ಭಾಷೆಯ ಕಲಿಗೆ ಅತ್ಯಗತ್ಯ ಅದಕ್ಕಾಗಿ ವೈದ್ಯಕೀಯ ವಿದ್ಯಾರ್ಥಿಗಳು ಕನ್ನಡ ಭಾಷೆ ಕಲಿಯಬೇಕು ಎಂದರು ಹಾಗೂ ವರ್ಷದಿಂದ ವರ್ಷಕ್ಕೆ ರಾಜ್ಯೋತ್ಸವ ಆಚರಣೆಯನ್ನು ಅತ್ಯಂತ ವರ್ಣರಂಜಿತ ಮಾಡುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ಕಾರ್ಯಕ್ರಮದ ಅದ್ಯಕ್ಷತೆ ವಹಿಸಿಕೊಂಡಿದ್ದ ಸಂಸ್ಥೆಯ ನಿರ್ದೇಶಕರಾದ ಡಾ. ಬಿ ಎಸ್ ಪಾಟೀರಲು ಕನ್ನಡ ರಾಜ್ಯೋತ್ಸವದ ಅಗತ್ಯತೆಯನ್ನು ವಿವರಿಸಿದರು.ಕಾಲೇಜಿನ ಪ್ರಾಚಾರ್ಯರಾದ ಡಾ ಮೆಹಬೂಂ ಕಲಬುರ್ಗಿಅವರು ಮಾತನಾಡುತ್ತ ಅಗತ್ಯ ಸಹಕಾರ ನೀಡುವುದಾಗಿ ಹೇಳಿದರು. ವೇದಿಕೆಯ ಮೇಲೆ ಉಪ ಪ್ರಾಚಾರ್ಯ ಡಾ ಎಂ ಜೆ ಜಮಾದಾರ, ವೈದ್ಯಕೀಯ ಅದೀಕ್ಷಕ ಡಾ ಜಿಲಾನಿ ಅವಟಿ ಡಾ ಫಸಲ್ ಖಾದ್ರಿ,ಡಾ ಬಿಲಾಲ್ ಡಾ ಮೊಹಮದ್ ಸಿದ್ದಿಕ್ ಇದ್ದರು , ಕು ಅರ್ಪಿತಾ, ಕು. ಸಜ್ಜಲಶ್ರೀ, ಅಕ್ಷಯ, ರಿಹಾನ್ ನಿರೂಪಿಸಿದರೆ? ಡಾ ದರ್ಶನಗೌಡ .ವಂದನಾರ್ಪಣೆ ಮಾಡಿದರು.ರಾಜ್ಯೋತ್ಸವದ ಪ್ರಯುಕ್ತ ಆಯೋಜಿಸಿದ್ದ ವಿವಿಧ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು ನಂತರ ತಡರಾತ್ರಿವರೆಗೆ ನಾಡಿನ ಸಂಸ್ಕøತಿ ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು, ವಿದ್ಯಾರ್ಥಿಗಳಾದ ಆಶ್ರಫ್, ಅರ್ಸಾಲನ್, ಧನುಷ್ ಅಮೋಘ, ಬಿಂದು, ಆಯೇಷಾ, ವಿನಾಯಕ, ಸಾಗರ್, ವಿವೇಕ,ಡಾ ಯುನುಸ್ಸು ಖಾದ್ರಿ, ಡಾ ಅಶೋಕ ಯಂಕಂಚಿ,ಡಾ ಸ್ವಾತಿ ಟಿಕಾರೆ, ಡಾ ನಂದಿನಿ, ಡಾ ಅಥಣಿ, ಡಾ ಐಹೊಳೆ, ಶಿವರಾಜ್, ಮುಂಜಾಮಿಲ್, ಮುಬಾರಕ್, ಶಕೀಲ್, ಕೀರ್ತನ್ ಸೇರಿದಂತೆ ಸುಮಾರು 500ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗ ಭಾಗವಹಿಸಿದ್ದರು.