ಅಲ್‍ಶರಯ್ ಕಾಲೇಜಿಗೆ ಉತ್ತಮ ಫಲಿತಾಂಶ

ಕಲಬುರಗಿ,ಏ 23: ನಗರದ ಅಲ್ ಶರಯ್ ಸಮೂಹ ಶಿಕ್ಷಣ ಸಂಸ್ಥೆಯ ಪಿಯು ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಈ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.
ಆಯಿಷಾ ನಿಜಾಮುದ್ದೀನ್ ಸಿದ್ಧಕಿ ಶೇ 97.17 ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.ಶೇ 96.17 ಅಂಕ ಪಡೆದ ಸದಿಯಾ ಮಹೇಕ್ ಮತ್ತು ಅರ್ಫಾ ಫಾತಿಮಾ ದ್ವಿತೀಯ ಸ್ಥಾನ ,ಶೇ 96 ಅಂಕ ಪಡೆದ ಮೊಹಮ್ಮದ್ ಸಾದತ್ ಉಲ್ಲಾ ಮತ್ತು ದುರ್ರೆ ಸಮೀಮ್ ತೃತೀಯ ಸ್ಥಾನ ಪಡೆದಿದ್ದಾರೆ.
100 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್,23 ವಿದ್ಯಾರ್ಥಿಗಳು 500 ರಿಂದ 509 ಅಂಕ ಪಡೆದಿದ್ದಾರೆ.205 ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದಿದ್ದಾರೆ.14 ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ 100 ಕ್ಕೆ 100 ಅಂಕ ಪಡೆದಿದ್ದಾರೆ.ಸಂಸ್ಥೆ ಅಧ್ಯಕ್ಷ ಡಾ. ಗುಲಾಮ್ ರಬ್ಬಾನಿ ಅವರು ಸೇರಿದಂತೆ ಅಧ್ಯಾಪಕರು ವಿದ್ಯಾರ್ಥಿಗಳ ಸಾಧನೆಗೆ ಹರ್ಷ ವ್ಯಕ್ತ ಪಡಿಸಿದ್ದಾರೆ.