
ಹೈದರಾಬಾದ್, ಏ. ೮- ಟಾಲಿವುಡ್ ನ ಸ್ಟೈಲಿಶ್ ತಾರೆ ಅಲ್ಲು ಅರ್ಜುನ್ ಗೆ ಇಂದು ಜನ್ಮದಿನದ ಸಂಭ್ರಮ.
ಸ್ಟೈಲಿಶ್ ತಾರೆ ಟಾಲಿವುಡ್ ನ ದುಬಾರಿ ಸಂಭಾವನೆ ಪಡೆಯುವ ನಟರಲ್ಲೊಬ್ಬರು.ಅಲ್ಲು ಅರ್ಜುನ್ ಇಂದು ೪೧ನೇ ವಸಂತಕ್ಕೆ ಕಾಲಿಟ್ಟಿದ್ದು, ಅಭಿಮಾನಿಗಳು, ಕುಟುಂಬಸ್ಥರು, ಸೆಲೆಬ್ರಿಟಿಗಳು ಸೇರಿದಂತೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.
ಪುಷ್ಪ ಸ್ಟಾರ್ ಅಲ್ಲು ಅರ್ಜುನ್ ಪುಷ್ಪ ೨ ಸಿನಿಮಾಗೆ ೧೦೦ ಕೋಟಿ ರೂ.ಗೂ ಅಧಿಕ ಸಂಭಾವನೆ ಪಡೆದಿದ್ದಾರೆ ಎಂಬ ಸುದ್ದಿಯಿದೆ. ಕೋಟಿ ಕೋಟಿ ಸಂಭಾವನೆ ಪಡೆಯುವ ಅಲ್ಲು ಅರ್ಜುನ್ ಒಟ್ಟಾರೆ ಆಸ್ತಿ ಮೌಲ್ಯವೆಷ್ಟು ಗೊತ್ತಾ?
ಮೂಲಗಳ ಪ್ರಕಾರ ಅಲ್ಲು ಅರ್ಜುನ್ ನೆಟ್ ವರ್ತ್ ೪೭ ದಶಲಕ್ಷ ಡಾಲರ್‌ಗೂ ಅಧಿಕ ಎನ್ನಲಾಗಿದೆ. ಸಿನಿಮಾಗಳಲ್ಲದೆ, ಜಾಹೀರಾತು ಮೂಲಕವೂ ಅಲ್ಲು ಅರ್ಜುನ್ ಸಂಪಾದನೆ ಜೇಬಿಗಿಳಿಸುತ್ತಿದ್ದಾರೆ. ಇದೀಗ ಟಾಲಿವುಡ್‌ನ ದುಬಾರಿ ಸಂಭಾವನೆ ಪಡೆಯುವ ನಟರ ಲಿಸ್ಟ್ ನಲ್ಲಿದ್ದಾರೆ.
ಅಲ್ಲು ಅರ್ಜುನ್ ನಟನೆಯ ‘ಪುಷ್ಪ ೨’ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ. ಈ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದ್ದು, ಇದಕ್ಕಾಗಿ ಅಲ್ಲು ಅರ್ಜುನ್ ತೂಕ ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಸಿನಿಮಾದ ಗ್ಲಿಂಪ್ಸ್ ಅಲ್ಲು ಅರ್ಜುನ್ ಬರ್ತಡೇಗೆ ಒಂದು ದಿನ ಮುನ್ನ ರಿಲೀಸ್ ಆಗಿದೆ. ಇದನ್ನು ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.
ಅಲ್ಲು ಅರ್ಜುನ್ ಜನ್ಮದಿನ ಪ್ರಯಕ್ತ ಅವರ ನಟನೆಯ ‘ದೇಶಮುದುರು’ ಚಿತ್ರ ರಿ-ರಿಲೀಸ್ ಮಾಡಲಾಗಿದೆ. ಈ ಚಿತ್ರ ೨೦೦೭ರಲ್ಲಿ ತೆರೆಗೆ ಬಂದಿತ್ತು. ರಿ ರಿಲೀಸ್ ಆದ ಚಿತ್ರವನ್ನು ಥಿಯೇಟರ್ನಲ್ಲಿ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ‘ದೇಶಮುದುರು’ ಚಿತ್ರವನ್ನು ಪುರಿ ಜಗನ್ನಾಥ್ ಅವರು ನಿರ್ದೇಶನ ಮಾಡಿದ್ದರು.
೨೦೨೦ ರಲ್ಲಿ ಸಂದರ್ಶನವೊಂದರಲ್ಲಿ, ನಟನಿಗೆ ನೀವು ಯಾವಾಗಲೂ ನಟನಾಗಲು ಬಯಸುತ್ತೀರಾ ಎಂದು ಕೇಳಿದ ಪ್ರಶ್ನೆಗೆ. ಅಲ್ಲು ಅರ್ಜುನ್ “ಆರಂಭದಲ್ಲಿ, ನಾನು ಆನಿಮೇಟರ್ ಆಗಬೇಕೆಂದು ಬಯಸಿದ್ದೆ. ಆದರೆ ಶೀಘ್ರದಲ್ಲೇ ನನ್ನ ಆಸಕ್ತಿಯು ಚಿಮ್ಮಿತು.. ನೀವು ಕಲಾವಿದರ ಕುಟುಂಬದಲ್ಲಿ ಜನಿಸಿದಾಗ, ನೀವು ಆ ಪರಿಸರದಿಂದ ಪ್ರಭಾವಿತರಾಗಿದ್ದೀರಿ. ನೀವು ಎಲ್ಲಿಗೆ ಹೋದರೂ, ನೀವು ಚಲನಚಿತ್ರಗಳಿಗೆ ಮರಳುತ್ತೀರಿ. ಈ ಸ್ಥಳವು ಕೆಲವು ರೀತಿಯ ಗುರುತ್ವಾಕರ್ಷಣೆಯನ್ನು ಹೊಂದಿದೆ ಎಂದಿದ್ದಾರೆ.