ಅಲ್ಲೀಪುರದಲ್ಲಿ ಪುರಾಣ ಪ್ರಾರಂಭ


ಸಂಜೆವಾಣಿ ವಾರ್ತೆ
ಬಳ್ಳಾರಿಯ ಸದ್ಗುರು ಶ್ರೀ ಅಲ್ಲೀಪುರ ಮಹಾದೇವತಾತನವರ 36ನೇ ಪುಣ್ಯಾರಾಧನೆಯ ಜಾತ್ರಾ ಮಹೋತ್ಸವವು ಜನವರಿ 21ರ ಭಾನುವಾರ ಸಂಜೆ 4 ಗಂಟೆಗೆ ಅಲ್ಲೀಪುರ ಮಠದಲ್ಲಿ ನೆರವೇರಲಿದೆ. ಇದರ ಅಂಗವಾಗಿ ಜನವರಿ 12ರ ಶುಕ್ರವಾರದಿಂದ ಆರಂಭಗೊಂಡ ರಾಘವಾಂಕ ಕವಿ ವಿರಚಿತ ಸುಕ್ಷೇತ್ರ ಸೊನ್ನಲಗಿ ಶ್ರೀ ಸಿದ್ಧರಾಮೇಶ್ವರ ಪುರಾಣ ಪ್ರವಚನಪ್ರಾರಂಭವಾಗಿದ್ದು . ಶ್ರೀ ಮಹಾದೇವಸ್ವಾಮಿಗಳು ಬೆಟ್ಟದೂರು ಪ್ರವಚನಕಾರರು, ಸಂಗೀತ ಶ್ರೀ ದೊಡ್ಡಬಸವ ಗವಾಯಿಗಳು ಡಿ.ಕಗ್ಗಲ್ಲು, ತಬಲ ಶ್ರೀ ಮೌನೇಶ್‌ ಕಮಾರ್‌ ರವರಿಂದ ಅಚ್ಚುಕಟ್ಟಾಗಿ ಜರುಗುವುದು ಕಂಡುಬರುತ್ತಿದೆ.
 ಈ ಪುರಾಣ ಕಾರ್ಯಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕೆ ಉಚಿತವಾಗಿ ಬಸ್ಸುಗಳ ವ್ಯವಸ್ಥೆ ಮಾಡಲಾಗಿದ್ದು  ಪ್ರತಿದಿನ ಪುರಾಣ ಮುಗಿದನಂತರ ಮಹಾ ಪ್ರಸಾದದ ವ್ಯವಸ್ಥೆಯನ್ನು ಶ್ರೀ ಮಠದ ಟ್ರಸ್ಟ್‌ ಕಮಿಟಿ ವ್ಯವಸ್ಥಿತ ವಾಗಿಮಾಡಿದ್ದಾರೆ. ಪ್ರತಿದಿನ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಿಮಿಸುತ್ತಿದ್ದಾರೆ. ಪ್ರತಿ ದಿನ ವಿಶೇಷ ಪೂಜಾಕಾರ್ಯಕ್ರಮಗಳು ಕ್ರಮಬದ್ಧವಾಗಿ ಜರುಗುತ್ತಿವೆ. ಸಿದ್ದರಾಮೇಶ್ವರರ ನಾಮಕರಣದ ಅಂಗವಾಗಿ ತೊಟ್ಟಿಲ ಕಾರ್ಯಕ್ರಮ ಹೆಣ್ಣುಮಕ್ಕಳಿಗೆ ಹುಡಿತುಂಬುವ ಕಾರ್ಯಕ್ರಮ ಮನಸಂತೋಷ ಗೊಳಿಸಿ ಭಕ್ತಿಪ್ರಧಾನ ವಾಗಿ ಕಂಡುಬರುತ್ತಿದೆ. ಶ್ರೀ ಮಠದ ಟ್ರಸ್ಟ್‌ ಕಮಿಟಿ ಸದಸ್ಯರು ಗಳಾದ  ಸಿ.ಹೆಚ್.ಯಂ.ಬಸವರಾಜ, ಸಂಗನಕಲ್ಲು ಹಿಮಂತರಾಜ, ಸಂಗನಕಲ್ಲು ಬಸವರಾಜ, ಎಸ್.ಜಗದೀಶ , ಮುಂತಾವರು ನೇತೃತ್ವ ವಹಿಸಿದ್ದರು.