(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ ಜೂ 21 :ನಗರದ ಬಹುತೇಖ ಭಾಗಕ್ಕೆ ನೀರನ್ನು ಒದಗಿಸುವ ಅಲ್ಲಿಪುರ ಕೆರೆಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ನಿನ್ನೆ ಸಂಜೆ ಭೇಟಿ ನೀಡಿ. ನಗರದ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮ ತೆಗೆದುಕೊಳ್ಳಲಿದೆಂದು ಹೇಳಿದ್ದಾರೆ.
ಮುಂಗಾರು ಮಳೆ ವಿಳಂಬವಾಗಿರುವ ಕಾರಣ ನಗರಕ್ಕೆ ಕುಡಿಯುವ ನೀರಿನ ಲಭ್ಯತೆ ಕುರಿತಂತೆ ಅರಿಯಲು ಪಾಲಿಕೆ ಅಯುಕ್ತ ಎಂ.ಎನ್.ರುದ್ರೇಶ್. ಮೇಯರ್ ತ್ರಿವೇಣಿ ಹಾಗೂ ಇತರೆ ಅಧಿಕಾರಿಗಳ ಜೊತೆ ಕೆರೆಗೆ ಭೇಟಿ ನೀಡಿ ನೀರಿನ ಲಭ್ಯತೆ ಕುರಿತು ಮಾಹಿತಿಪಡೆದರು.
ಕೆರೆ ವೀಕ್ಷಣೆ ನಂತರ 7.5 ಮೀಟರ್ ವರೆಗೆ ನೀರು ಸಂಗ್ರಹಿಸಿತ್ತು. ಈಗ 3,6 ಮೀಟರ್ ನಷ್ಟು ಮಾತ್ರ ನೀರಿನ ಸಮಗ್ರವಿದ್ದು. ಇದು ಬರುವ ನಲವತ್ತೈದು ದಿನಗಳ ವರೆಗೆ ನಗರಕ್ಕೆ ನೀರು ಸರಬರಾಜು ಮಾಡಬಹುದಾಗಿದೆ. ಅಷ್ಟರಲ್ಲಿ ಮುಂಗಾರು ಮಳೆಯಿಂದ ತುಂಗಭದ್ರ ಜಲಾಶಯಕ್ಕೆ ನೀರು ಬರಲಿದ್ದು ನಂತರ ಕಾಲುವೆಗಳ ಮೂಲಕ ನೀರಿನ ಸಂಗ್ರಹ ಮಾಡಬಹುದು.
ತುಂಗಭದ್ರ ಡ್ಯಾಂ ನಿಂದ ನೀರು ಬಿಡಲು ಅದಾಗಲೇ ಬೇಡಿಕೆ ಸಲ್ಲಿಸಲಾಗಿದ್ದು. ಬೇಸಿಗೆಯನ್ನು ಸಮರ್ಥವಾಗಿ ಎದುರಿಸಲು ಎಲ್ಲಾ ಸಿದ್ದತೆ ಮಾಡಿಕೊಂಡಿದ್ದು ಯಾವುದೇ ರೀತಿಯ ನೀರಿನ ಅಭಾವ ತಲೆ ತೋರದಂತೆ ಕ್ರಮ ವಹಿಸಲಾಗುವುದೆಂದು ಹೇಳಿದ್ದಾರೆ.