ಅಲ್ಲಮ, ಅಕ್ಕಮಹಾದೇವಿ ಆಧ್ಯಾತ್ಮ ಲೋಕದ ಧ್ರುವ ತಾರೆಯರು: ಡಾ. ಸವಿತಾ ಝಳಕಿ

ವಿಜಯಪುರ,ಏ.29:ಪ್ರಾಚೀನ ಭಾರತದ ಋಷಿ ಮುನಿಗಳಿಂದ ಮೊದಲು ಮಾಡಿ ಅಸಂಖ್ಯಾತ ಅಧ್ಯಾತ್ಮ ಜೀವಿಗಳು ಬಗೆ ಬಗೆಯ ಪ್ರಯೋಗಗಳನ್ನು ಮಾಡುತ್ತಲೇ ಬಂದಿದ್ದಾರೆ. ಆದ್ದರಿಂದ ಭಾರತವನ್ನು ಧರ್ಮದ ಬೀಡು, ಆಧ್ಯಾತ್ಮದ ನಾಡು ಎಂದೇ ಗುರುತಿಸಲಾಗಿದೆ. 12ನೇ ಶತಮಾನದಲ್ಲಿ ಶಿವಯೋಗದ ಮೂಲಕ ಭಕ್ತಿ ಪರಾಕಾಷ್ಠೆಯನ್ನು ತಲುಪಿದ ಅಲ್ಲಮಪ್ರಭು ಮತ್ತು ಅಕ್ಕಮಹಾದೇವಿ ಇಬ್ಬರೂ ಸೃಷ್ಠಿ, ಜೀವ, ಅಜೀವ ಹಾಗೂ ದೇವರುಗಳ ಸತ್ಯ ಶೋಧನೆಯಲ್ಲಿ ಅನುಭಾವ ಲೋಕದ ಧ್ರುವ ತಾರೆಯರಾಗಿದ್ದಾರೆ ಎಂದು ಡಾ. ಸವಿತಾ ಝಳಕಿ ಅವರು ಹೇಳಿದರು.
ಚಾಲುಕ್ಯ ನಗರದ ವರಸಿದ್ಧಿವಿನಾಯಕ ದೇವಾಲಯದಲ್ಲಿ ನಡೆದ ಲಿಂ. ಗುರುಬಸಪ್ಪ ಇಂಗಳೇಶ್ವರ ಮತ್ತು ಲಿಂ. ಮಹಾರುದ್ರಪ್ಪ ವಾರದ ಅವರ ಸ್ಮರಣಾರ್ಥ ನಡೆದ ದತ್ತಿ ಕಾರ್ಯಕ್ರಮದಲ್ಲಿ ಅಲ್ಲಮ ಮತ್ತು ಅಕ್ಕಮಹಾದೇವಿ ಜಯಂತಿ ನಿಮಿತ್ತ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಶ್ವದ ಆದಿ, ಆಂತ್ಯ, ಸೃಷ್ಠಿ ಜೀವ, ಅಜೀವ ಹಾಗೂ ದೇವರುಗಳ ಸತ್ಯ ಶೋಧನೆಯಲ್ಲಿ ಇಬ್ಬರದೂ ಸಮಾನಾಂತರ ಮಾರ್ಗವಾಗಿದೆ. ಅವರು ಅನುಭಾವ ಸಾಹಿತ್ಯಕ್ಕೆ ನೀಡಿದ ವಚನಗಳು ಜಾಗತಿಕ ಮಟ್ಟದಲ್ಲಿ ಪ್ರಶಂಸೆಗೆ ಒಳಗಾಗಿವೆ. ಅವುಗಳನ್ನು ಓದಿ ನಮ್ಮ ಬದುಕಿನಲ್ಲಿ ಅರಗಿಸಿಕೊಳ್ಳುವುದೇ ಶ್ರೇಯಸ್ಸು ಎಂದು ಅವರು ನುಡಿದರು.
ಪರಿಷತ್ತಿನ ಅಧ್ಯಕ್ಷÀ ಜಂಬುನಾಥ ಕಂಚ್ಯಾಣಿ ಅಧ್ಯಕ್ಷತೆ ವಹಿಸಿದ್ದರು. ಡಾ. ವಿ.ವಿ. ಮಗಳಿ, ಪದ್ಮಜಾ ಪಾಟೀಲ, ಸಂಗಮ್ಮ ಮೋಟಗಿ, ಅಪ್ಪು ವಾರದ ಅತಿಥಿಗಳಾಗಿದ್ದರು.
ಡಾ. ಉಷಾದೇವಿ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.
ಯುವ ವೇದಿಕೆ ಅಧ್ಯಕ್ಷ ಅಮರೇಶ ಸಾಲಕ್ಕಿ ಸ್ವಾಗತಿಸಿದರು. ದಾಕ್ಷಯಣಿ ಬಿರಾದಾರ ನಿರೂಪಿಸಿದರು. ಕಾರ್ಯದರ್ಶಿ ಈರಣ್ಣ ತೊಂಡಿಕಟ್ಟಿ ವಂದಿಸಿದರು.
ಹಿರಿಯರಾದ ಡಾ. ಶಶಿಧರ ಶಿರಹಟ್ಟಿ, ಸಿದ್ರಾಮಪ್ಪ ಮೋಟಗಿ, ಎಸ್.ವಾಯ್. ಗದಗ, ಪರಶುರಾಮ ಪೋಳ, ಜಿ.ಆರ್. ಕುಲಕರ್ಣಿ, ಪ್ರೊ. ಡಿಗ್ಗಾವಿ, ಬಸವರಾಜ ಇಂಚಗೇರಿ, ಪ್ರೊ. ಎಂ.ಎಸ್. ಝಳಕಿ, ಶಕುಂತಲಾ ಮೋಸಲಗಿ, ಕಮಲಾ ಮುರಾಳ ಹಾಗೂ ಕಾಲನಿಯ ಮಹಿಳಾ ಭಜನಾ ಮಂಡಳಿಯ ಸದಸ್ಯರು ಭಾಗವಹಿಸಿದ್ದರು.