ಅಲ್ಲಂ ಪ್ರಶಾಂತ್ ರಿಂದ 10 ನೇ ವಾರ್ಡಿನಲ್ಲಿ ಕಾಂಗ್ರೆಸ್ ಗ್ಯಾರೆಂಟಿ ಕಾರ್ಡುಗಳ ವಿತರಣೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.15:  ಕಾಂಗ್ರೆಸ್ ಪಕ್ಷದಿಂದ ಇಂದು 10ನೇ ವಾರ್ಡಿನಲ್ಲಿ  ಹಮ್ಮಿಕೊಂಡಿದ್ದ  ಕಾಂಗ್ರೆಸ್‌ ಗ್ಯಾರಂಟಿ ಕಾರ್ಡ್ ವಿತರಣೆಯಲ್ಲಿ ಜಿಲ್ಲಾ ಪಂಚಾಯತ್‌  ಮಾಜಿ ಸದಸ್ಯ ಹಾಗೂ ಕೆಪಿಸಿಸಿ ಪ್ರಚಾರ ಸಮಿತಿಯ ಸಂಯೋಜಕ ಅಲ್ಲಂ   ಪ್ರಶಾಂತ್ ಪಾಲ್ಗೊಂಡಿದ್ದರು.
ಮನೆ ಮನೆಗೆ ತೆರಳಿ ವಾರ್ಡಿನ ಪ್ರಜೆಗಳಿಗೆ 2023 ರಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್‌ ಗ್ಯಾರಂಟಿ ಕಾರ್ಡ್ ನ ಅನ್ನಭಾಗ್ಯದ ಯೋಜನೆಯಡಿಯಲ್ಲಿ ಪ್ರತಿ ಕುಟುಂಬದ ಸದಸ್ಯರಿಗೆ 10 ಕೆ.ಜಿ.ಉಚಿತ ಅಕ್ಕಿ ಹಾಗೂ ಗೃಹ ಜ್ಯೋತಿ ಯೋಜನೆಯಡಿಯಲ್ಲಿ ಪ್ರತಿ ಕುಟುಂಬಕ್ಕೆ 200 ಯೂನಿಟ್‌ ವಿದ್ಯುತ್, ಉಚಿತ, ವಿಶೇಷವಾಗಿ ಪ್ರತಿ ಕುಟುಂಬದ ಮಹಿಳಾ ಮುಖ್ಯಸ್ಥೆಗೆ ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಪ್ರತಿ ತಿಂಗಳಿಗೆ ರೂ.2000 ಉಚಿತ ಯೋಜನೆಯ ಲಾಭವನ್ನು ಪ್ರತಿ ಕುಟುಂಬದ ಸದಸ್ಯರು ಸದುಪಯೋಗ ಪಡೆದು ಕೊಳ್ಳಬೇಕೆಂದು  ಮನವರಿಕೆ ಮಾಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ  ನಗರ ಪಾಲಿಕೆಯ ಮಾಜಿ ಸದಸ್ಯ  ತಿಮ್ಮಪ್ಪ ಯಾದವ್,  ವೈ.ಸಿ. ವೆಂಕಟೇಶ್‌, ಮಠದ ಬಸವರಾಜ್,  ಪೃಥ್ವಿರಾಜ್, ಜಿ. ವೆಂಕಟೇಶ್, ಮರಿಸ್ವಾಮಿ ಮತ್ತು ಜಿ. ಬಸವರಾಜ್  ಹಾಗೂ ಮುಖಂಡರುಗಳು ಹಾಗೂ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಇದ್ದರು.

One attachment • Scanned by Gmail