ಅಲ್ಲಂ ಉಮಾದೇವಿ ನಿಧನ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮೇ.30: ಅಲ್ಲಂ‌ ಕರಿಬಸಪ್ಪ ಅವರ ಸೊಸೆ, ವೀರಶೈವ ವಿದ್ಯಾವರ್ಧಕ ಸಂಘದ ಮಾಜಿ ಅಧ್ಯಕ್ಷ ಅಲ್ಲಂ‌ ಬಸವರಾಜ್ ಅವರ ಪತ್ನಿ ಅಲ್ಲಂ ಉಮಾದೇವಿ ಅವರು ಇಂದು ಬೆಳಿಗ್ಗೆ ನಗರದ ತಮ್ಮ‌ ನಿವಾಸದಲ್ಲಿ ವಯೋ ಸಹಜವಾಗಿ ನಿಧನ ಹೊಂದಿದ್ದಾರೆ.
ಪತಿ, ಇಬ್ಬರು ಮಕ್ಕಳು, ಅಪಾರ ಬಂದುಗಳನ್ನು ಅವರು ಅಗಲಿದ್ದಾರೆ. 68 ವರ್ಷ ವಯಸ್ಸಾಗಿತ್ತು. ನಾಳೆ ಅಂತ್ಯಕ್ರಿಯೆ ನಡೆಯಲಿದೆಂದು ಕುಟುಂಬದ ಮೂಲಗಳು ತಿಳಿಸಿವೆ.
ಸಂತಾಪ:
ಮೃತರ ನಿಧನಕ್ಕೆ ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ, ಎನ್.ತಿಪ್ಪಣ್ಣ, ಅಲ್ಲಂ ಚೆನ್ನಪ್ಪ, ವೀ.ವಿ.ಸಂಘದ ಅಧ್ಯಕ  ರಾಮನಗೌಡ, ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ ಸೇರಿದಂತೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.