ಅಲ್ಬೆಂಡಝೋಲ್ ಮಕ್ಕಳ ಸುರಕ್ಷಿತವಾದ ಔಷಧಿಯಾಗಿದೆ:ಯಶೋಧ

ಸೈದಾಪುರ:ಎ.21:ಜಂತುಹುಳು ಮುಕ್ತ ಮಕ್ಕಳನ್ನು ಕಂಡುಕೊಳ್ಳಲು ಅಲ್ಬೆಂಡಝೋಲ ಸುರಕ್ಷಿತವಾದ ಔಷಧಿಯಾಗಿದೆ. ಇದರ ಸದುಪಯೋಗ ಪಡೆದು ಆರೋಗ್ಯಕರ ಜೀವನಕ್ಕೆ ಪ್ರಯತ್ನ ಮಾಡಬೇಕೆಂದು ಸಮೂದಾಯ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಸಹಾಯಕಿ ಯಶೋಧ ಹೇಳಿದರು.

ಇಲ್ಲಿನ ವಿದ್ಯಾ ವರ್ಧಕ ಪ್ರೌಢ ಶಾಲೆಯ 10ನೇ ತರಗತಿ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಜಂತುಹುಳು ನಿವಾರಣ ದಿನ ಅಂಗವಾಗಿ ಉಚಿತ ಜಂತುಹುಳು ನಾಶಕ ಮಾತ್ರೆಗಳನ್ನು ವಿತರಣೆ ಮಾಡಿ ಮಾತನಾಡಿದರು. ಜಂತುಹುಳು ಸೊಂಕಿನಿಂದ ರಕ್ತಹೀನತೆ, ಪೌಷ್ಠಿಕಾಂಶ ಕೊರತೆ, ನಿಶಕ್ತಿ, ಆತಂಕ, ಹೊಟ್ಟೆ ನೋವು, ವಾಕರಿಕೆ, ವಾಂತಿ, ಅತಿಸಾರ ಕಂಡುಬರುತ್ತದೆ. ಮಾತ್ರೆಗಳ ಸೇವೆನೆಯಿಂದ ರಕ್ತಹೀನತೆ, ಪೋಷಕಾಂಶ ಹೀರಿಕೆಯನ್ನು ಸುಧಾರಿಸುತ್ತದೆ. ಇದರಿಂದ ಏಕಾಗ್ರತೆ, ಕಲಿಕಾ ಸಾಮಥ್ರ್ಯ ಸುಧಾರಿಸುತ್ತದೆ. ಕೆಲಸದ ಸಾಮಥ್ರ್ಯ ಹಾಗೂ ಜೀವನೋಪಾಯದ ಅಂಶಗಳನ್ನು ವೃದ್ಧಿಸಲು ನೆರವಾಗುತ್ತದೆ ಎಂದು ಹೇಳಿದರು. ಶಿಕ್ಷರರಾದ ಗೂಳಪ್ಪ.ಎಸ್.ಮಲ್ಹಾರ, ರಾಚಯ್ಯ ಸ್ವಾಮಿ ಬಾಡಿಯಾಲ, ವಿಶ್ವನಾಥರೆಡ್ಡಿ ಪಾಟೀಲ ಕಣೇಕಲ್, ಶಿವುಕುಮಾರ ಬಂಡಿ, ಸತೀಶ ಪುರ್ಮಾ, ಆನಂದ ಪಾಟೀಲ ಕೊಂಡಾಪುರ, ತೊಟೇಂದ್ರ, ಆರ್.ಕೆ.ಎಸ್.ಕೆ ಕೌನ್ಸಿಲರ್ ಶಿವಶಂಕರ ರೆಡ್ಡಿ, ಮಹಿಬೂಬ, ಕಿರಿಯ ಆರೋಗ್ಯ ಸಹಾಯಕಿ ಕವಿತ ವಿಭೂತಿ, ಸೈದಪ್ಪ, ಆಶಾ ಕಾರ್ಯಕರ್ತೆ ಸುಭದ್ರ ಸೇರಿದಂತೆ ಇತರರಿದ್ದರು.