ಅಲ್ಪ ಸಂಖ್ಯಾತರ ಸಭೆ ನಡೆಸಿದ ಯು.ಟಿ.ಖಾದರ್

ಬಳ್ಳಾರಿ, ಏ.08: ಮಹಾನಗರ ಪಾಲಿಕೆಯ ಚುನಾವಣೆಯ ಅಭ್ಯರ್ಥಿಗಳ ಆಯ್ಕೆ ಸಮಿತಿಯ ಅಧ್ಯಕ್ಷರಾಗಿರುವ ಮಾಜಿ ಸಚಿವ ಯು.ಟಿ.ಖಾದರ್ ಅವರು ನಿನ್ನೆ ಸಂಜೆ ನಗರಕ್ಕೆ ಬಂದು ಅಲ್ಪ ಸಂಖ್ಯಾತ ಸಮುದಾಯದ ಮುಖಂಡರ ಸಭೆಯನ್ನು‌ ನಡೆಸಿದ್ದಾರೆ.
ಈ ಬಾರಿ ಒಂದೂ‌ ಮತವೂ ಇತರೇ ಪಕ್ಷದ, ಸ್ವತಂತ್ರ ಅಭ್ಯರ್ಥಿಗಳ ಪಾಲಾಗದಂತೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರಂತೆ.
ಅಲ್ಪ ಸಂಖ್ಯಾತ ಮತಗಳೇ ಗೆಲುವುಗೆ ನಿರ್ಣಾಯಕವಾಗಿದ್ದು ಜಾಗರುಕತೆಯಿಂದ ಮತದಾರರ ಮನವೊಲಿಸಬೇಕು ಎಂದರು.