ಸಂಜೆವಾಣಿ ವಾರ್ತೆ
ಹೊಸಪೇಟೆ ಜು30: ಮಲೆನಾಡು ಸೇರಿದಂತೆ ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆಯ ಅಬ್ಬರ ಕಡಿಮೆಯಾದ ಹಿನ್ನೆಲೆಯಲ್ಲಿ ತುಂಗಭದ್ರೆಗೆ ಹರಿದುಬರುತ್ತಿರುವ ನೀಡಿನ ಪ್ರಮಾಣ ಸ್ಪಲ್ಪಮಟ್ಟಿನ ಕಡಿಮೆಯಾಗಿದೆ.
ಕಳೆದ ನಾಲ್ಕು ದಿನಗಳಿಗೆ ಹೋಲಿಕೆ ಮಾಡಿದರೆ ಪ್ರಮಾಣ ಕಡಿಮೆಯಾದರೂ ಜಲಾಯಶಯದಲ್ಲಿ ನೀರು ಸಂಗ್ರಹ ಮುಂದುವರೆದಿದೆ. ಇಂದು ಜಲಾಶಯಕ್ಕೆ ಭಾನುವಾರ ಬೆಳಿಗ್ಗೆ 54ಸಾವಿರ ಅಧಿಕ ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ.
ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಬೀಳುತ್ತಿರುವ ಮಳೆಯ ಪರಿಣಾಮ ಜಲಾಶಯ ಹರಿದು ಬರುವ ಒಳಹರಿವಿನ ಪ್ರಮಾಣ ಸ್ಪಲ್ಪಮಟ್ಟಿನ ಕಡಿಮೆ ಎನ್ನಿಸಿದರೂ ಕರ್ನಾಟಕ, ಆಂಧ್ರ ಹಾಗೂ ತೆಲಂಗಾಣ ರಾಜ್ಯದ ಕೆಲ ಜಿಲ್ಲೆಗಳಿಗೆ ಕುಡಿಯುವ ನೀರಿಗಾಗಿ ಶುಕ್ರವಾರ ಎಚ್‍ಎಲ್‍ಸಿ ಹಾಗೂ ಎಲ್‍ಎಲ್‍ಸಿ ಕಾಲುವೆಗಳಿಗೆ ಹರಿಸುತ್ತಿದ್ದ ನೀರಿನ ಪ್ರಮಾಣ ಮತ್ತಷ್ಟು ಏರಿಕೆ ಮಾಡಲಾಗಿದ್ದು. ತಲಾ 1000 ಕ್ಯೂಸೆಕ್ಸ್ ನೀರನ್ನು ಹರಿಸಲಾಗುತ್ತಿದೆ.
ಡ್ಯಾಂನತ್ತ ಪ್ರವಾಸಿಗರು:
ಜಲಾಶಯಕ್ಕೆ ಒಳ ಹರಿವು ಹರಿದು ಬರುತ್ತಿಂದತೇ, ಇತ್ತ ಡ್ಯಾಂ ಕಡೆ ಪ್ರವಾಸಿಗರು ಮುಖ ಮಾಡಿದ್ದಾರೆ. ಕಳೆದ 10 ದಿನಗಳ ಹಿಂದೆಷ್ಟೆ ಡೆಡ್ ಸ್ಟೋರೇಜ್ ತಲುಪಿದ್ದ ಜಲಾಶಯಕ್ಕೆ ಹರಿದು ಬರುವ ಒಳ ಹರಿವು ಆರಂಭವಾಗುತ್ತಿಂದತೇ ಜಲಾಶಯ ಪ್ರದೇಶಕ್ಕೆ ಪ್ರವಾಸಿಗರು ಲಗ್ಗೆ ಇಟ್ಟಿದ್ದಾರೆ. ಜಲಾಶಯ ವೀಕ್ಷಣೆಗಾಗಿ ತಂಡೋಪ ತಂಡವಾಗಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಅಣೆಕಟ್ಟು ಕೆಳಭಾಗದ ಉದ್ಯಾನ ವನದಲ್ಲಿ ಸಂಗೀತ ಕಾರಂಜಿ ಕಣ್ತುಂಬಿಕೊಳ್ಳುತ್ತಿದ್ದರು. ಹಿನ್ನೀರಿನ ಪ್ರದೇಶದ ಹತ್ತಿರ ಪ್ರವಾಸಿಗರ ದಂಡು ಕಂಡು ಬರುತ್ತಿದೆ.
ಜಲಾಶಯದ ನೀರಿನ ಮಟ್ಟ:
ಜಲಾಶಯದ ಗರಿಷ್ಟ ಮಟ್ಟ 1633 ಅಡಿಗಳು, 1623.71 ಅಡಿಗಳು, ನೀರು ಸಂಗ್ರಹ: 72.357 ಟಿಎಂಸಿ, ಒಳಹರಿವು 54364 ಕ್ಯೂಸೆಕ್ಸ್, ಹೊರ ಹರಿವು 1603 ಕ್ಯೂಸೆಕ್ಸ್ ಇದೆ.