ಅಲ್ಪಾವಧಿಯಲ್ಲಿಪಾರದರ್ಶಕ‌ ಆಡಳಿತ ನನ್ನ ಗುರಿ; ನೂತನ‌ ಅಧ್ಯಕ್ಷ ಎ.ವೈ ಪ್ರಕಾಶ್


ದಾವಣಗೆರೆ. ನ.೨೪: ದೂಡಾದಿಂದ ಪ್ರಸ್ತುತ ನಡೆಯುತ್ತಿರುವ ಅಭಿವೃದ್ಧಿ ಕಾರ್ಯ ಮುಂದುವರೆಸುವುದು ಹಾಗೂ ಪಾರದರ್ಶಕ ಆಡಳಿತ ನೀಡುವ ಉದ್ದೇಶ ಹೊಂದಿದ್ದೇನೆ ಎಂದು‌ ನೂತನ‌ ದೂಡಾ ಅಧ್ಯಕ್ಷ ಎ.ವೈ ಪ್ರಕಾಶ್ ಹೇಳಿದರು.ನಗರದ ದಾವಣಗೆರೆ -ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅಧಿಕಾರ ವಹಿಸಿಕೊಂಡು ಪತ್ರಕರ್ತರೊಂದಿಗೆ ಮಾತನಾಡಿದ ಅವರು ನಗರದಲ್ಲಿ ಹಲವೆಡೆ ಅಕ್ರಮ ಸೈಟ್ ಹಾಗೂ‌ ಕಟ್ಟಡಗಳ ಆಕ್ರಮಿಸಿಕೊಂಡಿರುವ ಬಗ್ಗೆ ದೂರಿದೆ ಈ ಬಗ್ಗೆ ಆಯುಕ್ತರೊಂದಿಗೆ ಚರ್ಚೆ ನಡೆಸಿ‌ ಸೂಕ್ತ ಕ್ರಮ ಕೈಗೊಳ್ಳಲಾಗುವುದು.ಪ್ರಾಧಿಕಾರದಿಂದ ರೈತರ ಜಮೀನು‌ ಖರೀದಿ ಪ್ರಕ್ರಿಯೆ ನಡೆಯುತ್ತಿದೆ ಈ ಬಗ್ಗೆ ಪೂರ್ಣ‌ ಪರಿಶೀಲನೆ‌ ಮಾಡಿ ಕ್ರಮವಹಿಸಲಾಗುವುದು ಎಂದರು.ಕುಂದುವಾಡ ಗ್ರಾಮಸ್ಥರ ಭೂಮಿ‌ಖರೀದಿ ವಿಚಾರ ನಡೆಯುತ್ತಿದೆ ಈ‌ ಹಿಂದೆ ದೂಡಾದಿಂದ ಖರೀದಿ ಪ್ರಕ್ರಿಯೆಯೂ ನಡೆದಿತ್ತು ನಂತರ ರೈತರು ಭೂಮಿ ನೀಡಲು‌ ನಿರಾಕರಣೆ ಮಾಡಿದ್ದಾರೆ.ಆದ್ದರಿಂದ ರೈತರೊಂದಿಗೆ‌ ಸಭೆ‌ ನಡೆಸಿ‌ ಚರ್ಚೆ ಮಾಡಿ‌ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದರು. ಕಳೆದ೩೨ ವರ್ಷದಿಂದ‌ ಬಿಜೆಪಿ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿದಿದ್ದೇನೆ.ಪಕ್ಷ ಈಗ ಜವಾಬ್ದಾರಿ ನೀಡಿದೆ 
ಸಿಕ್ಕ‌ರುವ ಅಲ್ಪಾವಧಿಯಲ್ಲೇ ಉತ್ತಮ‌ ಕಾರ್ಯ ಮಾಡುವ ಗುರಿ‌ಯಿದೆ ಎಂದರು.ಹೊಸ ಫ್ಲೈಓವರ್ ಆದ ಮೇಲೆ‌ ದೂಡಾ‌ಕಚೇರಿ ನಗರವ್ಯಾಪ್ತಿಗೆ ದೂರವಾಗುತ್ತಿದೆ ಎಂದು ಸಾರ್ವಜನಿಕರು‌ ಹೇಳುತ್ತಿದ್ದಾರೆ. ಆದ್ದರಿಂದ ನಗರವ್ಯಾಪ್ತಿಯಲ್ಲಿ ದೂಡಾಕ್ಕೆ ಸಂಬಂಧಪಟ್ಟ ಜಮೀನು‌ ಇದ್ದರೆ ಹೊಸ ಕಚೇರಿ ನಿರ್ಮಾಣ ಮಾಡುವ ತೀರ್ಮಾನ ಇದೆ ಎಂದರು.ದೂಡಾ ಅಧ್ಯಕ್ಷರು‌ ಅಧಿಕಾರ ವಹಿಸಿಕೊಳ್ಳುವ ಸಂದರ್ಭದಲ್ಲಿ ಜನಪ್ರತಿನಿಧಿಗಳು ಭಾಗವಹಿಸುವುದು ವಾಡಿಕೆ ಆದರೆ ನೂತನ‌ ಅಧ್ಯಕ್ಷರು ಅಧಿಕಾರ ಸ್ವೀಕರಿಸುವ ವೇಳೆ ಜನಪ್ರತಿನಿಧಿಗಳು ಕಂಡುಬರಲಿಲ್ಲ ಆದರೆ ಪಕ್ಷದ ಕಾರ್ಯಕರ್ತರು ಮಾತ್ರ ಹಾಜರಿದ್ದರು.ಈ ಬಗ್ಗೆ‌ ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ನೂತನ‌ ಅಧ್ಯಕ್ಷ ಎ.ವೈ ಪ್ರಕಾಶ್ ಅವರುಸಂಸದರು ಬೆಂಗಳೂರಿನಲ್ಲಿ ಇದ್ದಾರೆ.ಶಾಸಕರು ಅಣಜಿಗೆ ತೆರಳಿದ್ದಾರೆ ಅವರು ಬರುವ ನಿರೀಕ್ಷೆ ಇದೆ ಎಂದರು.ಈ ವೇಳೆ ದೂಡಾ ಆಯುಕ್ತ ಬಿ.ಟಿ ಕುಮಾರಸ್ವಾಮಿ,ಮಾಜಿ ಮೇಯರ್ ಹಾಗೂ‌ ಪಾಲಿಕೆ ಸದಸ್ಯೆ ಉಮಾಪ್ರಕಾಶ್‌ ಹಾಗೂ‌ ಅಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.