ಅಲ್ಪಸಂಖ್ಯಾತರ ಸೊಸೈಟಿ ಅಧ್ಯಕ್ಷರಿಂದ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರ ಭೇಟಿ

ಸುಳ್ಯ, ಜ.೭- ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜಿಮ್ ಅವರನ್ನು ಸುಳ್ಯ ತಾಲೂಕು ಅಲ್ಪಸಂಖ್ಯಾತರ ದೊಡ್ಡ ಪ್ರಮಾಣದ ವಿವಿದ್ದೋದೇಶ ಸಹಕಾರಿ ಸಂಘದ ಅಧ್ಯಕ್ಷ ಮಹಮ್ಮದ್ ಇಕ್ಬಾಲ್ ಎಲಿಮಲೆ ನೇತೃತ್ವದ ನಿಯೋಗ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.
ಆಯೋಗದ ಅಧ್ಯಕ್ಷರು ಮಡಿಕೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಇಕ್ಬಾಲ್ ಎಲಿಮಲೆ, ಸಂಘದ ಉಪಾಧ್ಯಕ್ಷ ಫ್ಯಾನ್ಸಿ ಮೊಯ್ದೀನ್, ಮಾಜಿ ಅಧ್ಯಕ್ಷ ಹಾಗು ಹಾಲಿ ನಿರ್ದೇಶಕರಾದ ಆರ್.ಕೆ ಮಹಮ್ಮದ್, ಮಾಜಿ ಉಪಾಧ್ಯಕ್ಷ ಹಾಲಿ ನಿರ್ದೇಶಕ ಎ .ಕೆ .ಹಸೈನಾರ್ ಕಲ್ಲುಗುಂಡಿ ಭೇಟಿಯಾಗಿ ಸಹಕಾರಿ ಸಂಘದ ವತಿಯಿಂದ ಅಭಿನಂದಿಸಲಾಯಿತು. ಅಲ್ಲದೆ ಅಲ್ಪಸಂಖ್ಯಾತರ
ಸಹಕಾರಿ ಸಂಘದ ಉದ್ದೇಶವನ್ನು ಆಯೋಗದ
ಅಧ್ಯಕ್ಷರಿಗೆ ತಿಳಿಸಿ ಸಂಘಕ್ಕೆ ಸರಕಾರದಿಂದ ಒಂದು ಕೋಟಿ ರೂಪಾಯಿ ನಿಬಡ್ಡಿ ಸಾಲ ಅಥವಾ
ಸಹಾಯಧನ ಹಾಗೂ ಸರಕಾರದಿಂದ ಒಂದು ಕೋಟಿ ರೂಪಾಯಿ ಪಾಲು ಬಂಡವಾಳವನ್ನು ಮುಖ್ಯಮಂತ್ರಿಗಳು ಹಾಗೂ ಸಹಕಾರ ಸಚಿವರ ಮುಖಾಂತರ ಒದಗಿಸಿ ಕೊಡಬೇಕೆಂದು ಮನವಿ ಸಲ್ಲಿಸಲಾಯಿತು.