ಅಲ್ಪಸಂಖ್ಯಾತರ ಸಾಮಾಜಿಕ ನ್ಯಾಯಕ್ಕೆ ಎನ್.ಎಸ್. ಬೋಸರಾಜು, ಬಿ.ವಿ.ನಾಯಕ ಬದ್ಧ

ಬಷೀರುದ್ದೀನ್ ನಮ್ಮ ಹಿರಿಯ ಅಣ್ಣ, ಸಮಾಜದ ಕಾಳಜಿಯಿಂದ ಅವರ ಅಸಮಾಧಾನ
ರಾಯಚೂರು.ನ.10- ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಈ ಸಲ ಅಲ್ಪಸಂಖ್ಯಾತ ಸಮುದಾಯದ ಸಾಜೀದ್ ಸಮೀರ್ ಅವರಿಗೆ ಅಧ್ಯಕ್ಷ ಸ್ಥಾನ ಅವಕಾಶ ಮಾಡಿಕೊಡುವ ಎಲ್ಲಾ ಪ್ರಾಮಾಣಿಕ ಪ್ರಯತ್ನ ಕಾಂಗ್ರೆಸ್ಸಿನಿಂದ ಕೈಗೊಳ್ಳಲಾಯಿತು. ಆದರೆ, ನಗರಸಭೆ ಅಧಿಕಾರ ಚುಕ್ಕಾಣಿ ಹಿಡಿಯುವ ಮತ್ತು ಬಿಜೆಪಿಗೆ ಅಧಿಕಾರ ದಕ್ಕದಂತೆ ಮಾಡುವ ತಂತ್ರದ ಭಾಗವಾಗಿ ಪಕ್ಷದ ಹೈಕಮಾಂಡ್ ಈ ನಿರ್ಧಾರ ಕೈಗೊಂಡಿದೆ. ಎಲ್ಲಿಯೂ ಸಹ ಅಲ್ಪಸಂಖ್ಯಾತರಿಗೆ ಅನ್ಯಾಯವಾಗದಂತೆ ಪಕ್ಷ ಸಾಮಾಜಿಕ ನ್ಯಾಯ ಬದ್ಧವಾಗಿದೆಂದು ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಅಸ್ಲಾಂ ಪಾಷಾ ಅವರು ಹೇಳಿದರು.
ನಗರಸಭೆ ಚುನಾವಣೆ ನಂತರ ನಡೆದ ಬೆಳವಣಿಗೆ ಮತ್ತು ಅಲ್ಪಸಂಖ್ಯಾತರ ಸಾಮಾಜಿಕ ನ್ಯಾಯಕ್ಕೆ ಸಂಬಂಧಿಸಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ಅವರು, ಕಾಂಗ್ರೆಸ್ ಪಕ್ಷ ಅಧ್ಯಕ್ಷ ಸ್ಥಾನ ಅಲ್ಪಸಂಖ್ಯಾತ ಸಮುದಾಯದ ಸಾಜೀದ್ ಸಮೀರ್ ಅವರಿಗೆ ನೀಡಲು ಎಐಸಿಸಿ ಕಾರ್ಯದರ್ಶಿ ಎನ್.ಎಸ್. ಬೋಸರಾಜು, ಜಿಲ್ಲಾ ಅಧ್ಯಕ್ಷ ಬಿ.ವಿ.ನಾಯಕ ಹಾಗೂ ರವಿ ಬೋಸರಾಜು ಅವರು ಪ್ರಾಮಾಣಿಕತೆಯಿಂದ ಪ್ರಯತ್ನಿಸಿದ್ದರು.
ಆದರೆ, ಕೊನೆ ಕ್ಷಣದಲ್ಲಿ ನಗರಸಭೆ ಉಪಾಧ್ಯಕ್ಷ ಸ್ಥಾನದ ಕೈವಶ ತಾಂತ್ರಿಕ ಸಮಸ್ಯೆ ಪಕ್ಷ ತನ್ನ ನಿಲುವು ಬದಲಿಸುವಂತಹ ಅನಿವಾರ್ಯತೆ ನಿರ್ಮಾಣವಾಯಿತು. ಕಾಂಗ್ರೆಸ್ ಪಕ್ಷ ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಎರಡು ಸ್ಥಾನ ಗೆಲ್ಲುವ ಮಹತ್ವದ ಉದ್ದೇಶದಿಂದ ಕೊನೆ ಕ್ಷಣದ ತಾಂತ್ರಿಕ ಬದಲಾವಣೆಯ ಸಮಸ್ಯೆ ಯಶಸ್ವಿಯಾಗಿ ಗೆಲ್ಲಲು ಹೈಕಮಾಂಡ್ ತಕ್ಷಣವೇ ತನ್ನ ಕಾರ್ಯತಂತ್ರ ಬದಲಿಸಿ, ನಗರಸಭೆಯ ಅಧಿಕಾರ ಚುಕ್ಕಾಣಿ ಕೈವಶ ಮತ್ತು ಬಿಜೆಪಿ ಪಕ್ಷಕ್ಕೆ ಭಾರೀ ಮುಜುಗರ ಉಂಟಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ.
ಸಾಜೀದ್ ಸಮೀರ್ ಅವರಿಗೆ ಅಧ್ಯಕ್ಷ ಸ್ಥಾನ ನೀಡುವುದಕ್ಕೆ ಸಂಬಂಧಿಸಿ ಕಾಂಗ್ರೆಸ್ ಪಕ್ಷ ಬದ್ಧವಾಗಿದೆ. ಅಧಿಕಾರ ಹಂಚಿಕೆಯ ಪರ್ಯಾಯ ತಂತ್ರದೊಂದಿಗೆ ಈ ಮಹತ್ವದ ಗುರಿಯನ್ನು ಸಾಧಿಸಿದ ಹೈಕಮಾಂಡ್ ಮುಂಬರುವ ದಿನಗಳಲ್ಲಿ ಸಾಜೀದ್ ಸಮೀರ್ ಅವರಿಗೆ ಅಧಿಕಾರ ನೀಡುವ ಭರವಸೆಗೆ ಬದ್ಧವಾಗಿದೆ. ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರು ಸೇರಿದಂತೆ ಸಾಮಾಜಿಕ ಬದ್ಧತೆಗೆ ಆದ್ಯತೆ ನೀಡುವ ಸೈದ್ಧಾಂತಿಕ ನಿಲುವಿನ ಪಕ್ಷವಾಗಿದೆ.
ಕೆಲ ಯುವಕರು ಭಾವನಾತ್ಮಕ ವಿಷಯವನ್ನಾಧರಿಸಿ, ಅಪಪ್ರಚಾರಕ್ಕೆ ಬಲಿಯಾಗಿ, ಕಾಂಗ್ರೆಸ್ ಪಕ್ಷ ಬದ್ಧತೆ ಬಗ್ಗೆ ಸಂಶಯ ಹೊಂದುವುದು ಬೇಡ. ನಗರಸಭೆ ಅಧಿಕಾರ ಹಂಚಿಕೆ ಭರವಸೆಯನ್ವಯ ಸಾಜೀದ್ ಸಮೀರ್ ಅವರಿಗೆ ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ನ್ಯಾಯ ಮಾಡಲಿದೆ. ನಮ್ಮದೇ ಸಮುದಾಯದ ಕೆಲ ಸಾಮಾಜಿಕ ಹೋರಾಟಗಾರರು ಬಿಜೆಪಿ ಪರ ಕಾರ್ಯ ನಿರ್ವಹಿಸಿ, ನಗರಸಭೆ ಗೊಂದಲ ಸೃಷ್ಟಿಸುವ ಪ್ರಯತ್ನದ ಮೂಲಕ ಬಿಜೆಪಿಗೆ ನೆರವಾಗುವ ತಂತ್ರ ಮಾಡಿರುವುದು ನಮ್ಮ ಪಕ್ಷದ ಮುಖಂಡರ ಗಮನಕ್ಕಿದೆ.
ಈ ಎಲ್ಲಾ ತಂತ್ರ ವಿಫಲಗೊಳಿಸಿ, ನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಪ್ರಾಬಲ್ಯದೊಂದಿಗೆ ನಮ್ಮ ನಾಯಕರಾದ ಎಐಸಿಸಿ ಕಾರ್ಯದರ್ಶಿ ಎನ್.ಎಸ್. ಬೋಸರಾಜು, ಜಿಲ್ಲಾಧ್ಯಕ್ಷ ಬಿ.ವಿ.ನಾಯಕ ಹಾಗೂ ರವಿ ಬೋಸರಾಜು ಮತ್ತಿತರ ಮುಖಂಡರು ನಗರಸಭೆ ಅಧಿಕಾರ ಚುಕ್ಕಾಣಿ ಹಿಡಿಯುವ ಮೂಲಕ ಕಾಂಗ್ರೆಸ್ ಪಕ್ಷದ ವರ್ಚಸ್ಸು ಹೆಚ್ಚಿಸುವಂತೆ ಮಾಡಿದ್ದಾರೆ. ಇದಕ್ಕೆ ಸಾಜೀದ್ ಸಮೀರ್ ಅವರ ತ್ಯಾಗವೂ ಅಷ್ಟೆ ಗಮನಾರ್ಹವಾಗಿದೆ.
ಅಧಿಕಾರ ಹಂಚಿಕೆಯಲ್ಲಿ ಯಾರು ಮೊದಲು ಎನ್ನುವ ವಿಷಯಕ್ಕೆ ಬಂದಾಗ ಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ ಈ.ವಿನಯ್ ಅವರಿಗೆ ಮೊದಲ ಅವಧಿಗೆ ಅಧ್ಯಕ್ಷರಾಗಿದ್ದರೇ, ಎರಡನೇ ಅವಧಿಗೆ ಸಮೀರ್ ಅವರಿಗೆ ಅವಕಾಶ ದೊರೆಯಲಿದೆ. ಇದು ಕಾಂಗ್ರೆಸ್ ಪಕ್ಷದ ಆಂತರಿಕ ತಾಂತ್ರಿಕ ಹೊಂದಾಣಿಕೆ. ಇಲ್ಲಿ ಅನ್ಯಾಯದ ಪ್ರಶ್ನೆಯೇ ಉದ್ಭವಿಸುವುದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಬಷೀರ್ ಅವರ ರಾಜೀನಾಮೆಗೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು, ಬಷೀರುದ್ದೀನ್ ಅವರು ನಮ್ಮ ಹಿರಿಯ ಸಹೋದರರು. ಕಾಂಗ್ರೆಸ್ ಕುಟುಂಬದ ಹಿರಿಯ ನಾಯಕರಾಗಿದ್ದಾರೆ. ಅವರ ಆಕ್ರೋಶ ಭಾವನಾತ್ಮಕವಾಗಿದೆ. ಅವರು ನಮ್ಮ ಸಮಾಜದ ಮೇಲಿನ ಕಾಳಜಿ ಮತ್ತು ಪ್ರೀತಿಯ ಪ್ರತೀಕವಾಗಿ ಈ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರನ್ನು ನಾವು ನಮ್ಮೊಂದಿಗೆ ಉಳಿಸಿಕೊಳ್ಳುವ ವಿಶ್ವಾಸವೂ ಹೊಂದಿದ್ದೇವೆಂದ ಅವರು, ನಮ್ಮ ಕುಟುಂಬದಲ್ಲಿ ಸಣ್ಣ ಪುಟ್ಟ ವ್ಯತ್ಯಾಸ ನಡೆಯುವ ರೀತಿಯಲ್ಲಿ ನಮ್ಮ ಕಾಂಗ್ರೆಸ್ ಕುಟುಂಬದಲ್ಲೂ ಬಷೀರುದ್ದೀನ್ ಅವರ ಅಸಮಾಧಾನ ಸಮಾಜದ ಹಿತದೃಷ್ಟಿಯಿಂದ ಇರುವುದರಿಂದ ಅದನ್ನು ನಾವು ಸಮಾಧಾನಪಡಿಸಿಕೊಳ್ಳುವ ಮತ್ತು ಅವರನ್ನು ನಮ್ಮೊಂದಿಗೆ ಉಳಿಸಿಕೊಳ್ಳುವ ವಿಶ್ವಾಯ ವ್ಯಕ್ತಪಡಿಸಿದ್ದಾರೆ.