
ಕೋಲಾರ.ಏ. ೧-ಅಲ್ಪಸಂಖ್ಯಾತ ಸಮುದಾಯಕ್ಕೆ ನೀಡಲಾಗಿದ್ದ, ಮೀಸಲಾತಿ ರದ್ದು ಪಡಿಸಿರುವುದು ಜನ ವಿರೋಧಿ ಹಾಗೂ ಸಂವಿಧಾನ ವಿರೋಧಿಯಾಗಿದೆ ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಕಾರ್ಯದರ್ಶಿ ವಕೀಲ ಶ್ಯಾನಭೋಗನಹಳ್ಳಿ ಎಸ್.ಬಿ.ಸುರೇಶ್ ಖಂಡಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿ, ಕರ್ನಾಟಕದಲ್ಲಿ ಆಡಳಿತ ನಡೆಸಿದ ಬಿಜೆಪಿ ಸರ್ಕಾರ ಹಿಂದುಳಿದ ಸಮಾಜವಾದ ಅಲ್ಪಸಂಖ್ಯಾತರ ಸಮುದಾಯಕ್ಕೆ ಇದ್ದ ಶೇ.ರಷ್ಟು ಮೀಸಲಾತಿ ರದ್ದುಪಡಿಸಿರುವುದನ್ನು ಬಹುಜನ ಸಮಾಜ ಪಕ್ಷ ತೀವ್ರವಾಗಿ ಖಂಡಿಸುತ್ತದೆ. ಒಬ್ಬರ ಸವಲತ್ತನ್ನು ಕಸಿದು ಮತ್ತೊಬ್ಬರಿಗೆ ಕೊಡುವುದರಲ್ಲಿ ಯಾವುದೇ ನ್ಯಾಯವಿಲ್ಲ, ಇದು ಅತ್ಯಂತ ಹೃದಯ ಹೀನ ಜನ ವಿರೋಧಿ, ಸಂವಿಧಾನ ವಿರೋಧಿ ಕ್ರಮವಾಗಿದೆ ಎಂದು ಟೀಕಿಸಿದರು.
ಹಿಂದುಳಿದ ಸಮುದಾಯಗಳಿಗೆ ಹಾಗೂ ಅಲ್ಪಸಂಖ್ಯಾತರ ಸಮುದಾಯಗಳ ಏಳಿಗೆಗಾಗಿ ದಿ||ದೇವರಾಜ್ ಅರಸ್ ರವರ ಅಧಿಕಾರಾವಧಿಯಲ್ಲಿ ನೀಡಲಾಗಿದ್ದ, ಅಲ್ಪಸಂಖ್ಯಾತರ ಹಕ್ಕು ಎಂದೇ ಪರಿಗಣಿಸುವ ಮೀಸಲಾತಿ ಅತ್ಯಂತ ಕುತಂತ್ರದಿಂದ ಸರ್ಕಾರ ಕಿತ್ತು ಕೊಳ್ಳುವ ಪ್ರಯತ್ನಕ್ಕೆ ರಾಜ್ಯ ಬಿಜೆಪಿ ಸರ್ಕಾರ ಮಾಡಿದೆ ಎಂದು ಕಿಡಿಕಾರಿದರು.
ಈ ಹಿನ್ನಲೆಯಲ್ಲಿ ಏ.೧ರಂದು ಬಹುಜನ ಸಮಾಜ ಪಕ್ಷ ರಾಜ್ಯ ಘಟಕದಿಂದ ಬೆಂಗಳೂರಿನ ಪ್ರೀಡಂ ಪಾರ್ಕಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ ಪ್ರತಿಭಟನೆಗೆ ಕೋಲಾರ ಜಿಲ್ಲೆಯಿಂದ ಸುಮಾರು ೫೦೦ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ಅಧ್ಯಕ್ಷ ದಿಂಬಾ ಡಿ.ಈ. ಆನಂದ್, ಜಿಲ್ಲಾ ಉಪಾಧ್ಯಕ್ಷ ಬಂಗಾರಪೇಟೆ ರಮಣ್‌ಕುಮಾರ್, ಮಾಲೂರಿನ ವಡಗನಹಳ್ಳಿ ರಮೇಶ್, ಹುಳಿದೇನಹಳ್ಳಿ ಸುರೇಶ್, ಮಾರ್ಕೆಟ್ ಗೋವಿಂದರಾಜು ಇದ್ದರು.