ಅಲ್ಪಸಂಖ್ಯಾತರ ಓಲೈಕೆ: ಬಿಜೆಪಿಯ ಚುನಾವಣಾ ಗಿಮಿಕ್-ಡಿಕೆಶಿ

ಹುಬ್ಬಳ್ಳಿ, ಜ19: ಚುನಾವಣೆ ಹೊಸ್ತಿಲಲ್ಲಿ ಪ್ರಧಾನಿ ಮೋದಿಯವರಿಗೆ ಏಕಾಏಕಿ ಅಲ್ಪಸಂಖ್ಯಾತರ ಮೇಲೆ ಪ್ರೀತಿ ಬಂದಿದ್ದು ಅಲ್ಪಸಂಖ್ಯಾತರ ಓಲೈಕೆಗೆ ಮುಂದಾಗಿದ್ದಾರೆ. ಇದು ಬಿಜೆಪಿಯವರ ಚುನಾವಣಾ ಗಿಮಿಕ್ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಟೀಕಿಸಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರಿಗೆ ಅಲ್ಪಸಂಖ್ಯಾತರ ಮೇಲೆ ಎಷ್ಟು ಕಾಳಜಿ ಇದೆ ಎಂಬುದು ನಮಗೆ ಗೊತ್ತಿದೆ ಎಂದು ನುಡಿದರು.
ಬಿಜೆಪಿ ಸರ್ಕಾರ ಕೇವಲ ಭರವಸೆಗಳ ಸರ್ಕಾರ, ಚುನಾವಣೆ ಹತ್ತಿರ ಬಂದಂತೆ ಪ್ರಧಾನಿಯವರು ರಾಜ್ಯಕ್ಕೆ ಮೇಲಿಂದ ಮೇಲೆ ಬರುತ್ತಿದ್ದಾರೆ. ಇಂದು ಕಲಬುರ್ಗಿಗೆ ಲಂಬಾಣಿ ಜನರಿಗೆ ಹಕ್ಕುಪತ್ರ ನೀಡಲು ಬಂದಿರುವುದರಲ್ಲಿಯೂ ವಿಶೇಷವೇನೂ ಇಲ್ಲ. ಎಲ್ಲವೂ ಚುನಾವಣಾ ಗಿಮಿಕ್ ಎಂದವರು ಹೇಳಿದರು.
ಯಾವುದೇ ನೇಮಕಾತಿ ಇರಲಿ, ಕಾಮಗಾರಿ ಇರಲಿ, ಪ್ರತಿಯೊಂದು ಇಲಾಖೆಯಿಂದಲೂ ಬಿಜೆಪಿ ಸರ್ಕಾರ ಕಮೀಷನ್ ಪಡೆಯುತ್ತದೆ ಎಂದು ಶಿವಕುಮಾರ್ ಗಂಭೀರವಾಗಿ ಆರೋಪಿಸಿದರು.