ಅಲ್ಪಮಟ್ಟದ ಬಜೆಟ ನೀಡುವ ಮೂಲಕ ಹಿಂದುಳಿದ ವರ್ಗಗಳಿಗೆ ಅನ್ಯಾಯ: ಡಾ. ಡಿ.ಜಿ.ಸಾಗರ

ವಿಜಯಪುರ, ಏ.4- ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಹೊಟೇಲ ಮಧುವನದಲ್ಲಿ ಪತ್ರಿಕಾ ಗೋಷ್ಠಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ
ಸಮಿತಿ ಸಂಚಾಲಕರಾದ ಡಾ. ಡಿ.ಜಿ.ಸಾಗರ ಮಾತನಾಡಿ ರಾಜ್ಯ ಸರಕಾರ 2021-22 ಸಾಲಿನ ಬಜೆಟ್ ಮಂಡನೆಯಲ್ಲಿ ದಲಿತ, ಹಿಂದುಳಿದ ವರ್ಗಗಳಿಗೆ ಅಲ್ಪಮಟ್ಟದ ಬಜೆಟನ್ನು ಇಡುವುದರ ಮೂಲಕ ಈ ಸಮುದಾಯಗಳಿಗೆ ದೊಡ್ಡ ಅನ್ಯಾಯವನ್ನು ಎಸಗಲಾಗಿದೆ ಎಂದರು.
ದೆಹಲಿಯಲ್ಲಿ ನಡೆಯುತ್ತಿರುವ ರೈತ ಚಳುವಳಿ ಮತ್ತು ರೈತರನ್ನು ಸಮಾಧಿ ಮಾಡಲು ತಂದಿರುವ ರೈತ ವಿರೋಧಿ ಕಾಯ್ದೆಯನ್ನು ರದ್ದುಗೊಳಿಸಬೇಕೆಂದು ರೈತರ ಹೋರಾಟವನ್ನು ನೂರು ದಿನಗಳಾದರೂ ಕೇಂದ್ರ ಸರ್ಕಾರ ತನ್ನ ಬಂಡತನವನ್ನು ಬಿಡಲಿಲ್ಲ. ಇದನ್ನು ನಮ್ಮ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ. ಹಾಗೂ ರೈತರ ಹೋರಾಟಕ್ಕೆ ನಮ್ಮ ಸಂಪೂರ್ಣಪ್ರಕರಣ ರಾಜ್ಯದಲ್ಲಿ ತಲ್ಲನ ಸೃಷ್ಟಿಸಿರುವ ಮಾಜಿ ಸಚಿವ ರಮೇಶ ಜಾರಕಿಹೊಳಿಗೆ ಸೇರಿದೆ ಎನ್ನಲಾದ ರಾಸಲೀಲೆ ಸಿಡಿ ಪ್ರಕರಣ ಹಲವು ದಿನಗಳ ಹೈಡ್ರಾಮಾ ನಂತರ ಸಂತ್ರಸ್ತೆ ಯುವತಿ ನ್ಯಾಯಾಲಯಕ್ಕೆ ಹಾಜರಾಗಿ ಹೇಳಿಕೆ ನೀಡಿದ್ದಾರೆ. ಮಾಜಿ ಸಚಿವರು ಕೆಲಸ ಕೊಡಿಸುವುದಾಗಿ ನಂಬಿಸಿ, ಮೋಸ ಮಾಡಿರುವುದು ಅವರ ದುರ್ನಡತೆ ಎಂದು ವ್ಯಾಖ್ಯಾನಿಸಲಾಗಿದೆ.
ಕೂಡಲೇ ಸಂತ್ರಸ್ತ ಮಹಿಳೆಗೆ ನ್ಯಾಯ ಸಿಗಬೇಕು. ಮತ್ತು ತಪಿಸ್ಥ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಸಮಿತಿಯು ಆಗ್ರಹಿಸುತ್ತದೆ. ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಚಳುವಳಿ, ಪ್ರತಿಭಟನೆ, ಹೋರಾಟ ಖಂಡಿಸಿ, ಜಾಥಾ, ಮೆರವಣಿಗೆ, ಸತ್ಯಾಗ್ರಹ, ಪಿಕೆಟಿಂಗ್, ಬಂದ್… ಮುಂತಾದ ಕಾರ್ಯಕ್ರಮಗಳಿಂದ ತಮ್ಮ ವೈಫಲ್ಯ ಬಯಲಿಗೆ ಬಂದಾಗಲೆಲ್ಲಾ, ಸರಕಾರ ಮತ್ತು ಅಧಿಕಾರ ಶಾಹಿಯು ಕ.ರಾ.ದ.ಸಂ.ಸ. ಹೋರಾಟಗಾರರ ಮೇಲೆ ಸುಳ್ಳು ಕೇಸು ಹಾಕಿ ವಿನಾಕಾರಣ ಹಾಗೂ ಅನ್ಯಾಯವಾಗಿ ಕೋರ್ಟಿನ ಹೊರೆಯನ್ನು ಹೆಚ್ಚಿಸಿದೆ. ವರ್ಷಾನುಗಟ್ಟಲೆ ಕೇಸ್‍ಗಳು ಎಳೆದಾಡಲ್ಪಟ್ಟು ಮೊಕದ್ದಮೆಗಳಲ್ಲಿ ಹುರಳೆ ಇಲ್ಲಾ ಎಂಬುದಾಗಿ ಕೋರ್ಟನಿಂದ ಛೀಮಾರಿಗೂ ಒಳಗಾಗಿವೆ. ದ.ಸಂ.ಸ. ಮುಖಂಡ ವಾಯ್.ಸಿ. ಮಯೂರ ಹೋರಾಟಗಾರನ ಮೇಲೆ ಸುಳ್ಳು ಕೇಸ್‍ಗಳನ್ನು ಹಿಂದಿನ ಇಂಡಿ ಡಿ.ವಾಯ್.ಎಸ್.ಪಿ. ಈಗಿನ ಧಾರವಾಡ ಗ್ರಾಮೀಣ ಡಿ.ವಾಯ್.ಎಸ್.ಪಿ. ಎಂ.ಬಿ. ಸಂಕದ ಸುಳ್ಳು ಕೇಸ್‍ಗಳನ್ನು ಹಾಕಿದ್ದಾರೆ. ಇದನ್ನು ಮಾನ್ಯ ನ್ಯಾಯಾಲಯದಲ್ಲಿ ಮೊಕದ್ದಮೆ ವಿಚಾರಣೆ ನಡೆದು ಎರಡು ಕೇಸ್‍ಗಳನ್ನು ರದ್ದು ಮಾಡಿ, ಪೆÇೀಲಿಸ್ ಇಲಾಖೆಗೆ ಕೋರ್ಟ ಚೀಮಾರಿ ಹಾಕಿದೆ.
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕರಾದ ಎಂ.ಬಿ. ಶ್ರೀನಿವಾಸ ಮಾತನಾಡಿ ವಿಜಯಪೂರ ಜಿಲ್ಲೆಯ ಶಾಖೆಯಿಂದ ವಿಜಯಪೂರ ನಗರದಲ್ಲಿ ದಿನಾಂಕ: 10-03-2021 ರಂದು ಪೆÇೀಲಿಸ್‍ರಿಂದ ನಡೆದ ದಲಿತರ ಮೇಅನ ದೌರ್ಜನ್ಯ ಖಂಡಿಸಿ. ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿ, ಸುಳ್ಳು ಕೇಸ್ ಹಾಕಿ, “ರೌಡಿ ಶೀಟ್”ನಲ್ಲಿಟ್ಟು, ದ.ಸಂ.ಸ. ಮುಖಂಡ ವಾಯ್.ಸಿ., ಮಯೂರರವರನ್ನು ಬಂಧನದಲ್ಲಿಟ್ಟು ಇದಕ್ಕೆಲ್ಲಾ ಕಾರಣರಾದ ಜಾತಿವಾದಿ ಡಿ.ವಾಯ್.ಎಸ್.ಪಿ. ಎಂ.ಬಿ. ಸಂಕದರ ಮತ್ತು ಸಿಂಧಗಿ ಪೋಲಿಸ ಠಾಣೆ ಪಿ.ಎಸ್.ಐ. ಸಂಗಮೇಶ ಹಾಗೂ ಆಲಮೇಲ ಪೋಲಿಸ ಠಾಣೆ ಪಿ.ಎಸ್.ಐ. ನಿಂಗಣ್ಣಾ ಪೂಜಾರಿ ಇವರುಗಳ ಮೇಲೆ ಕಠಿಣ ಕ್ರಮ ತೆಗೆದುಕೊಂಡು ಶಿಕ್ಷಿಸಬೇಕೆಂದು ಮುಖ್ಯ ಮಂತ್ರಿಗಳಿಗೆ ಮನವಿ ಮುಖಾಂತರ ಆಗ್ರಹಿಸಲಾಗಿತ್ತು, ಆದರೆ ಇನ್ನುವರೆಗೆ ಯಾವುದೇ ಕ್ರಮವನ್ನು ಜರುಗಿಸಿರುವುದಿಲ್ಲ. ಇದನ್ನು ತೀವವಾಗಿ ಖಂಡಿಸಿ, ರಾಜ್ಯ ಮಟ್ಟದ ಕಾರ್ಯಕ್ರಮ ಮಾಡಲು ತೀರ್ಮಾನಿಸಲಾಯಿತು.
ಇದೇ ತಿಂಗಳ ಏಪ್ರೀಲ್ 17 ರಂದು ನಡೆಯಲಿರುವ ಬೆಳಗಾವಿ ಲೋಕಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಶ್ರೀ ಸತೀಶ ಜಾರಕಿಹೊಳಿ ರವರವರನ್ನು ಸಮಿತಿಯು ಸಂಪೂರ್ಣವಾಗಿ ಬೆಂಬಲಿಸುತ್ತದೆ.
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರು ವಿನಾಯಕ ಗುಣಸಾಗರ, ಸಮಿತಿ ಸಂಚಾಲಕರು ಸಿದ್ದು ರಾಯಣ್ಣವರ, ರಾಜ್ಯ ಸಂಘಟನಾ ಸಂಚಾಲಕರು ರಮೇಶ ಆಸಂಗಿ, ಜಿಲ್ಲಾ ಸಂ. ಸಂಚಾಲಕರು ಅಶೋಕ ಚಲವಾದಿ ಮುಂತಾದವರು ಉಪಸ್ಥಿತರಿದ್ದರು.