ಅಲ್ಟ್ರಾಟೆಕ್ ಐ.ಟಿ.ಎಫ್ ಕಲಬುರಗಿ ಓಪನ್ ಕ್ವಾಲಿಫೈಯರ್‌ನಲ್ಲಿ ಭಾರತೀಯರ ಪೈಕಿ ಪ್ರಜ್ವಲ್ ದೇವ್ ಅಗ್ರ ಶ್ರೇಯಾಂಕಿತರು

ಕಲಬುರಗಿ,ನ.27: ಇತ್ತೀಚೆಗಷ್ಟೇ ಮುಕ್ತಾಯಗೊಂಡ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಅಮೋಘ ಪ್ರದರ್ಶನ ನೀಡಿದ ಕರ್ನಾಟಕದ ಎಸ್‌.ಡಿ.ಪ್ರಜ್ವಲ್ ದೇವ್ ಅವರು ಅಲ್ಟ್ರಾಟೆಕ್ ಐಟಿಎಫ್ ಕಲಬುರಗಿ ಓಪನ್‌-2023ರ ಮುಖ್ಯ ಕ್ರೀಡಾಕೂಟದಲ್ಲಿ ಮೂರನೇ ಶ್ರೇಯಾಂಕ ಗಳಿಸುವ ಮೂಲಕ ಅಗ್ರ ಶ್ರೇಯಾಂಕವನ್ನು ಗಳಿಸಿದ್ದಾರೆ.

ಭಾನುವಾರದಿಂದ ಇಲ್ಲಿನ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ನಡೆದ ಅರ್ಹತಾ ಸುತ್ತಿನ ಪಂದ್ಯಗಳು ಮುಕ್ತಾಯದ ಹಿನ್ನೆಲೆಯಲ್ಲಿ ಸೋಮವಾರ ಮುಖ್ಯ ಪಂದ್ಯಗಳಿಗೆ ಡ್ರಾ ತೆರೆಯಲಾಯಿತು.

ಡ್ರಾ ಸಮಾರಂಭದಲ್ಲಿ ಅಫಜಲಪೂರ ಶಾಸಕ ಎಂ.ವೈ.ಪಾಟೀಲ್, ವಿಧಾನ ಪರಿಷತ್ ಶಾಸಕ ಶಶೀಲ್ ಜಿ. ನಮೋಶಿ, ಪ್ರಾದೇಶಿಕ ಆಯುಕ್ತ ಕೃಷ್ಣ ಭಾಜಪೇಯಿ, ಜಿಲ್ಲಾಧಿಕಾರಿ ಬಿ.ಫೌಜಿಯಾ ತರನುಮ್, ಪಂದ್ಯಾವಳಿಯ ಮೇಲ್ವಿಚಾರಕ ಶ್ರೀಲಂಕಾದ ಧಾರಕ ಎಲ್ಲವಾಲಾ ಹಾಗೂ ಪಂದ್ಯಾವಳಿಯ ನಿರ್ದೇಶಕ ಪೀಟರ್ ವಿಜಯಕುಮಾರ್ ಉಪಸ್ಥಿತರಿದ್ದರು.

ಟೆನುಸ್ ವಿಶ್ವ ಪ್ರಸಿದ್ದಿ ಆಟವಾಗಿದೆ. ಕಲಬುರಗಿಯಲ್ಲಿ ಇಂತಹ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟ ಆಯೋಜಿಸಿರುವುದು ನಿಜಕ್ಕು ಹಬ್ಬದ ಸಂಭ್ರಮ ಮನೆ ಮಾಡಿದೆ. ಸ್ಥಳೀಯ ಯುವಕರು, ಕ್ರಿಡಾಪಟುಗಳು ದೇಶ-ವಿದೇಶದ ಆಟಗಾರರನ್ನು ಓಡುವ ಸೌಭಾಗ್ಯ ದೊರೆತಿದೆ ಎಂದು ಅಭಿಪ್ರಾಯಪಟ್ಟರು.

ಎಂ.ಎಲ್.ಸಿ. ಶಶೀಲ ನಮೋಶಿ ಮಾತನಾಡಿ, ಕಲಬುರಗಿ ನಗರದಲ್ಲಿ ಟೆನಿಸ್ ಕ್ರೀಡಾಕೂಟ ಹಬ್ಬದ ವಾತಾವರಣ ಮೂಡಿಸಿದೆ. ಟೆನಿಸ್ ಪ್ರೇಮಿಗಳು, ಆಸಕ್ತರುಗೆ ಮುಂದಿನ ಒಂದು ವಾರ ಟೆನಿಸ್ ರಸದೌತಣ ಸವಿಯಬಹುದಾಗಿದೆ. ಇಂದಿಲ್ಲಿ ಆಗಮಿಸಿದ ಕ್ರೀಡಾಪಟುಗಳು ಇಲ್ಲಿನ ಟೆನಿಸ್ ಕೋರ್ಟ್, ಆತಿಥ್ಯ, ಮೂಲಸೌಕರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಂತಹ ಒಂದು ಟೂರ್ನಿ ಇಲ್ಲಿ ಆತೋಜನೆಗೆ ಕಾರಣರಾದ ಜಿಲ್ಲಾ ಉಸ್ತುವಾರಿ ಸಚಿವ‌ ಪ್ರಿಯಾಂಕ್ ಖರ್ಗೆ, ಆರ್.ಸಿ. ಕೃಷ್ಣ ಭಾಜಪೇಯಿ, ಡಿ.ಸಿ. ಬಿ.ಫೌಜಿಯಾ ತರನ್ನುಮ್ ಅವರಿಗೆ ಓರ್ಚ ಟೆನಿಸ್ ಆಟಗಾರನಾಗಿಯೂ ಅಭಿನಂದನೆ ಸಲ್ಲಿಸುವೆ ಎಂದರು.

ಟೂರ್ನಿಯಲ್ಲಿ ಉಕ್ರೇನಿಯಾದ ವ್ಲಾಡಿಸ್ಲಾವ್ ಓರ್ಲೋವ್ ಅಗ್ರ ಶ್ರೇಯಾಂಕ ಕಾಯ್ದುಕೊಂಡಿದ್ದು, ಜಪಾನಿನ ರ‌್ಯೂಕಿ ಮತ್ಸುಡಾ ಎರಡನೇ ಶ್ರೇಯಾಂಕ ಪಡೆದಿದ್ದಾರೆ. ಸಿದ್ಧಾರ್ಥ್ ರಾವತ್ ಮತ್ತು ರಾಮಕುಮಾರ್ ರಾಮನಾಥನ್ ಕ್ರಮವಾಗಿ 4 ಮತ್ತು 5ನೇ ಶ್ರೇಯಾಂಕದಲ್ಲಿದ್ದಾರೆ. US $ 25,000 ಬಹುಮಾನ ಮೊತ್ತದ ಈ ಕ್ರೀಡಾಕೂಟದಲ್ಲಿ ರಿಷಬ್ ಅಗರ್ವಾಲ್, ಆಸ್ಟ್ರಿಯನ್ ಡೇವಿಡ್ ಪಿಚ್ಲರ್ ಮತ್ತು ಕರಣ್ ಸಿಂಗ್ ಅವರು ನಂತರ ಶ್ರೇಯಾಂಕ ತಮ್ಮದಾಗಿಸಿಕೊಂಡಿದ್ದಾರೆ.

ಏತನ್ಮಧ್ಯೆ, ಅರ್ಹತಾ ಸುತ್ತಿನ ಎರಡನೇ ಮತ್ತು ಅಂತಿಮ ಸುತ್ತಿನ ನಂತರ 1-ವ್ಲಾಡಿಸ್ಲಾವ್ ಓರ್ಲೋವ್ (ಯುಕ್ರೇನ್); 2-ರ್ಯುಕಿ ಮತ್ಸುಡಾ (ಜಪಾನ್); 3-ಎಸ್.ಡಿ. ಪ್ರಜ್ವಲ್ ದೇವ್ (ಭಾರತ); 4-ಸಿದ್ಧಾರ್ಥ್ ರಾವತ್ (ಭಾರತ); 5-ರಾಮ್‌ಕುಮಾರ್ ರಾಮನಾಥನ್; 6-ರಿಷಬ್ ಅಗರ್ವಾಲ್; 7-ಡೇವಿಡ್ ಪಿಚ್ಲರ್; 8-ಕರಣ್ ಸಿಂಗ್ ಅವರು ಮುಖ್ಯ ಪಂದ್ಯಾವಳಿಗಳಿಗೆ ಅರ್ಹತೆ ಪಡೆದಿದ್ದಾರೆ.

ಅಂತಿಮ‌ ಸುತ್ತಿನ ಅರ್ಹತಾ ಪಂದ್ಯಗಳ ಫಲಿತಾಂಶ:

1-ಭರತ್ ನಿಶೋಕ್ ಕುಮಾರನ್ ಅವರು ಮದನ್ ತುಷಾರ್ ಅವರನ್ನು 6-3, 6-1;
2-ರಿಷಿ ರೆಡ್ಡಿ ಅವರು ಓಗೆಸ್ ಥೇಜೊ ಜಯಪ್ರಕಾಶ್ ಅವರನ್ನು 6-2, 7-6 (4);
3-ಶಿವಾಂಕ್ ಭಟ್ನಾಗರ್ ಅವರು ಪಾರ್ಥ್ ಅಗರ್ವಾಲ್ ಅವರನ್ನು 7-6 (5), 4-6, 12-10; ಧ್ರುವ್ ಹಿರ್ಪಾರಾ ಅವರು 4-ಯಶ್ ಯಾದವ್ ಅವರನ್ನು 6-0, 3-0 (ನಿವೃತ್ತ); 9-ಆರ್ಯನ್ ಶಾ ಅವರು 5-ಸಂದೇಶ್ ದತ್ತಾತ್ರಾಯ್ ಕುರಾಲೆ ಅವರನ್ನು 6-2, 6-2; 6-ಅಜಯ್ ಮಲಿಕ್ ಅವರು ಅಭಿಷೇಕ್ ಬಸ್ತೋಲಾ (ನೇಪಾಳ) ಅವರನ್ನು 6-4, 6-4; 7-ಹಾ ಮಿನ್ಹ್ ಡಕ್ ವು (ವಿಯೆಟ್ನಾಂ) ಅವರು ಮುನಿ ಅನಂತ್ ಮಣಿ ಅವರನ್ನು 6-1, 6-3 ಹಾಗೂ ಅರ್ಜುನ್ ಮಹಾದೇವನ್ ಅವರು 8-ಯಶ್ ಚೌರಾಸಿಯಾ ಅವರನ್ನು 6-2, 6-2 ರಿಂದ ಜಯ ಸಾಧಿಸಿ ಮುಖ್ಯ ಪಂದ್ಯಗಳಿಗೆ ಅರ್ಹತೆ ಪಡೆದರು.