ಅಲೆಯನ್ಲ್ ಕ್ಲಬ್ಸ್ ಇಂಟರ್ ನ್ಯಾಷನಲ್ ಜಿಲ್ಲೆ ಪದಾಧಿಕಾರಿಗಳ ಪದಗ್ರಹಣ

ಸಂಜೆವಾಣಿ ನ್ಯೂಸ್
ಮೈಸೂರು.ಜೂ.03:- ಪ್ರತಿಯೊಬ್ಬರೂ ಗಳಿಕೆಯಲ್ಲಿ ಶೇ.20 ರಷ್ಟನ್ನು ಸಮಾಜ ಸೇವೆಗೆ ಮೀಸಲಿಡಬೇಕು ಎಂದು ಅಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್ ಅಧ್ಯಕ್ಷ ಸಿ. ಬಾಲಚಂದ್ರನ್ ಕರೆ ನೀಡಿದರು.
ನಗರದ ಹುಣಸೂರು ರಸ್ತೆಯ ಹೋಟೆಲ್ ಲೀ ರುಚಿಯಲ್ಲಿ ಭಾನುವಾರ ನಡೆದ ಅಲೆಯನ್ಸ್ ಕ್ಲಬ್ಸ್ ಇಂಟರ್ ನ್ಯಾಷನಲ್ ಜಿಲ್ಲೆ -255 [ಎಸ್] ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಮೂಲಕ ಅಗತ್ಯವಿರುವವರಿಗೆ ಸಹಾಯಹಸ್ತ ಚಾಚಬೇಕು ಎಂದರು.
ಕ್ಲಬ್‍ನಲ್ಲಿ ಆಜೀವ ಸದಸ್ಯರ ಸಂಖ್ಯೆಯನ್ನು ಹೆಚ್ಚು ಮಾಡಬೇಕು. ಇತರೆ ಕ್ಲಬ್ ಗಳಿಗೆ ಹೋಲಿಸಿದಲ್ಲಿ ನಮ್ಮಲ್ಲಿ ತೀರಾ ಕಡಿಮೆ ಅಂದರೆ 7,500 ರು. ಮಾತ್ರ ಇದೆ. ಈ ಹಣವನ್ನು ನಾವು ಠೇವಣಿಯಾಗಿಟ್ಟುಕೊಂಡು, ಪ್ರಕೃತಿ ವಿಕೋಪ ಸಂಭವಿಸಿದ ಸಂದರ್ಭದಲ್ಲಿ ಸಂತ್ರಸ್ತರಿಗೆ ನೆರವಾಗಲು ಬಳಸುತ್ತೇವೆ ಎಂದು ಅವರು ಹೇಳಿದರು. ಭಾರತೀಯರಿಂದಲೇ ಆರಂಭವಾದ ಮೊದಲ ಅಂತಾರಾಷ್ಟ್ರೀಯ ಕ್ಲಬ್ ಇದಾಗಿದ್ದು, ಈಗ ಬೇರೆ ಬೇರೆ ದೇಶಗಳಲ್ಲೂ ಘಟಕಗಳು ಆರಂಭವಾಗಿವೆ ಎಂದರು.
ಪದಾಧಿಕಾರಿಗಳ ಪದಗ್ರಹಣ ನೆರವೇರಿಸಿ ಮಾತನಾಡಿದ ಅಲಯನ್ಸ್ ಕ್ಲಬ್ ಸಂಸ್ಥಾಪಕ ತಿರುಪತಿ ರಾಜು, ಪ್ರತಿ ಕ್ಲಬ್‍ನಲ್ಲಿಯೂ ಮಕ್ಕಳ ಹಾಗೂ ಯುವ ಕ್ಲಬ್‍ಗಳನ್ನು ಆರಂಭಿಸಬೇಕು. ಆ ಮೂಲಕ ಹೊಸ ಹೊಸ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಹೇಳಿದರು.
ಜಿಲ್ಲಾ ಕ್ಲಬ್‍ಗಳು ಪ್ರತಿ ವರ್ಷ ಪ್ರವಾಸ ಏರ್ಪಡಿಸಬೇಕು. ಆ ಮೂಲಕ ಅಲಯನ್ಸ್ ಕುಟುಂಬಗಳ ನಡುವೆ ಬಾಂಧವ್ಯ ಬೆಸೆಯುವಂತೆ ನೋಡಿಕೊಳ್ಳಬೇಕು ಎಂದರು.
ಅಲಯನ್ಸ್ ಎರಡನೇ ಅಂತಾರಾಷ್ಟ್ರೀಯ ಅಧ್ಯಕ್ಷ ಡಾ.ಡಿಬಿಜಿ ಶಾಸ್ತ್ರಿ, ಸೌತ್ ಮಲ್ಟಿಪಲ್ ಕೌನ್ಸಿಲ್ ಚೇರ್ಮನ್ ಎಸ್. ರಾಜೇಂದ್ರನ್, ಅಂತಾರಾಷ್ಟ್ರೀಯ ನಿರ್ದೇಶಕ ರಾಜೇಶ್ವರ ರಾವ್, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿದರು.
ನಾಗರಾಜ ವಿ. ಭೈರಿ ಅವರು ಪ್ರಾಸ್ತಾವಿಕ ಭಾಷಣ ಮಾಡಿ, ಸಿ. ಬಾಲಚಂದ್ರನ್ ಹಾಗೂ ತಿರುಪತಿರಾಜು ಅವರನ್ನು ಪರಿಚಯಿಸಿದರು. ಜಿಲ್ಲಾ ರಾಜ್ಯಪಾಲರನ್ನು ಎ.ಸಿ. ರವಿ ಪರಿಚಯಿಸಿದರು. ಅಲಯನ್ಸ್ ಕ್ಲಬ್ ಜಿಲ್ಲಾ ರಾಜ್ಯಪಾಲ ಬಾಲಕೃಷ್ಣರಾಜು- ಸಿರಿಬಾಲು ತಮ್ಮ ತಂಡವನ್ನು ಸಭೆಗೆ ಪರಿಚಯಿಸಿದರು.
ಹಿಂದಿನ ಅಂತಾರಾಷ್ಟ್ರೀಯ ನಿರ್ದೇಶಕ ಜಿ.ಪಿ. ದಿವಾಕರ್, ಕಮಿಟಿ ಚೇರ್ಮನ್ನರಾದ ಕೆ.ಎಂ. ಮುನಿಯಪ್ಪ, ಅಜಂತ ರಂಗಸ್ವಾಮಿ, ಪ್ರಥಮ ಜಿಲ್ಲಾ ಉಪ ರಾಜ್ಯಪಾಲ ಎಸ್. ವೆಂಕಟೇಶ್, ಎರಡನೇ ಜಿಲ್ಲಾ ಉಪ ರಾಜ್ಯಪಾಲ ಮಹಬಲೇಶ್ವರ ಭೈರಿ, ಮೂರನೇ ಜಿಲ್ಲಾ ಉಪ ರಾಜ್ಯಪಾಲ ಎಂ.ಎಸ್. ಸಂತೋಷ್ ಕುಮಾರ್, ಹಿಂದಿನ ಜಿಲ್ಲಾ ರಾಜ್ಯಪಾಲ ಜಿ.ಎಸ್. ನಂಜುಂಡಸ್ವಾಮಿ, ಪಿಆರ್‍ಒ ಎನ್. ಬೆಟ್ಟೇಗೌಡ ವಿಶೇಷ ಆಹ್ವಾನಿತರಾಗಿದ್ದರು. ಶೋಭಾ ಸಿರಿಬಾಲು ಇದ್ದರು.
ನಾ. ಗಂಗಾಧರಪ್ಪ, ಆರ್. ಕೃಷ್ಣೋಜಿರಾವ್ ಅವರು ಜಿಲ್ಲಾ ಬ್ಯಾನರ್, ಸಿರಿ ರಾಷ್ಟ್ರೀಯ ಧ್ವಜವನ್ನು ವೇದಿಕೆಗೆ ತಂದರು.ಕಿರಣ್ ಹಾಗೂ ನಂದಿನಿ ವಿಶ್ವ ಶಾಂತಿ ಸಂದೇಶ ಬೋಧಿಸಿದರು. ಅತಿಥೇಯ ಸಮಿತಿ ಚೇರ್ಮನ್ ಶ್ರೀಶೈಲ ಸ್ವಾಗತಿಸಿದರು.
ಶಾಲಿನಿ ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು. ಸಿರಿಮಾ ಬಾಲು ಪ್ರಾರ್ಥನಾ ನೃತ್ಯ ನಡೆಸಿಕೊಟ್ಟರು.
ಸುನೀತಾ ಬಿ. ಗೌಡ, ಉಷಾ ನಂದಿನಿ, ಭಾರ್ಗವಿ, ಸರಸ್ವತಿ, ರಮ್ಯಾ ರವಿ, ಸುನಿಲ್ ಕುಮಾರ್, ಜಿ. ಶ್ರೀನಿವಾಸ್, ವಿ. ವೆಂಕಟೇಶ್, ವೆಂಕಟರಮಣಪ್ಪ, ವೆಂಕಟಸುಬ್ಬರಾವ್, ಲಕ್ಷ್ಮಿದೇವಿ, ಶ್ರೀಕಾಂತ್, ಶಶಿಕುಮಾರ್, ಮರಿಶೆಟ್ಟಿ, ಮಹದೇವಪ್ಪ, ಎಂ.ಎನ್. ಚಂದ್ರಶೇಖರ್, ನಂದೀಶ್, ರವಿ, ಪುಟ್ಟಸ್ವಾಮಿ, ಡಾ.ಚೇತನ, ಡಾ.ಕಿರಣ್ ಕುಮಾರ್, ಗೀತಾ ವೇಣು, ಎಸ್‍ಬಿಎಂ ರಾವ್, ಶಂಕರ್, ಶ್ವೇತಾ ದಿನೇಶ್, ಆಕಾಶ್ ಭೈರಿ, ಪಿ.ಎಸ್. ವಾಲೇಕರ್, ದೇವರತ್ನ, ರೇಖಾ, ನಿರಂಜನ್, ಶಿವಣ್ಣ, ಶೇಖರ್, ಡಾ.ರಾಜು, ಎ.ಸಿ. ರವಿ, ಕಿರಣ್ ಕುಮಾರ್ ಇಂದಿರಾ ವೆಂಕಟೇಶ್, ಡಾ.ಕೃಷ್ಣಪ್ಪ, ಡಾ.ಬಿ.ಎನ್. ರವೀಶ್, ಚೇತನಕುಮಾರ್, ಕಿರಣ್ ಕುಮಾರ್, ಕೇಶ್ರಪಾಲ್, ಲಕ್ಷ್ಮೀರಾಜು ಇದ್ದರು.
ಸಿರಿ ಸಂಭ್ರಮ ಸಾಮಾನ್ಯವಾಗಿ ಕ್ಲಬ್‍ಗಳೆಂದರೆ ಅಲ್ಲಿ ಪಾಶ್ಚಾತ್ಯ ಸಂಗೀತದ ಅಬ್ಬರ. ಆದರೆ ಅಲಯನ್ಸ್ ಕ್ಲಬ್‍ನ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಸಂಭ್ರಮದಲ್ಲಿ ಸಿರಿಬಾಲು, ಎನ್. ಬೆಟ್ಟೇಗೌಡ, ಡಾ.ಪೂರ್ಣಿಮಾ, ಶೀಲತಾ, ಸಿ.ಎಸ್. ವಾಣಿ ಮೊದಲಾದವರು ಕನ್ನಡದ ಗೀತಗಾಯನ ನಡೆಸಿಕೊಟ್ಟು, ಮೆಚ್ಚುಗೆ ಪಾತ್ರರಾದರು.