ಅಲೆಮಾರಿ ಸಮುದಾಯಗಳಿಗೆ ವಿಶೇಷ ಆರ್ಥಿಕ ‌ನೆರವಿಗೆ ಆಗ್ರಹ

ಕಲಬುರಗಿ:ಮೇ.2: ಕೋವಿಡ್ ಎರಡನೇ ಅಲೆ ಅತಿ ವೇಗವಾಗಿ ರಾಜ್ಯದಲ್ಲೆಡೆ ಹರಡುತ್ತಿದ್ದು, ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಸಂಪೂರ್ಣವಾಗಿ ಲಾಕಡೌನ್ ಹೇರಿರುವುದರಂದ ವೈರಸ್ ಹರಡದಂತೆ ತಡೆಗಟ್ಟಬಹುದು ಇದು ಸ್ವಾಗತಾರ್ಹ ಕ್ರಮ. ಆದರೆ ದಿನಗೂಲಿ ಕೆಲಸವನ್ನು ನಂಬಿಕೊಂಡು ಜೀವನ ಸಾಗಿಸುತ್ತಿರುವ ಅನೇಕ ದುಡಿಯುವ ವರ್ಗದ ಜನರಿಗೆ ಮತ್ತು ಊರೂರು ಅಲೆದಾಡುತ್ತಾ ಅಲೆಮಾರಿ ಜೀವನವನ್ನು ಸಾಗಿಸುತ್ತಿರುವ ಅಲೆಮಾರಿ ‌ಮತ್ತು ಅರೆ-ಅಲೆಮಾರಿ ‌ಸಮುದಾಯಗಳು ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿವೆ.

ಲಾಕಡೌನ್ ನಿಂದಾಗಿ ಅವಲಂಬಿತ ಕಸುಬು ಮತ್ತು ದೈನಂದಿನ ಕೆಲಸಗಳನ್ನು ಕಳೆದುಕೊಂಡತಾಗಿದೆ. ಸರಕಾರ ಅಲೆಮಾರಿ, ಅರೆ-ಅಲೆಮಾರಿ ಕುಟುಂಬಗಳಿಗೆ ಇಂತಹ ಸಮಯದಲ್ಲಿ ಸುಲಭವಾಗಿ ಜೀವನ ಸಾಗಿಸಲು ವಿಶೇಷವಾದ ಆರ್ಥಿಕ ನೆರವು ಘೋಷಿಸಬೇಕೆಂದು ಸರಕಾರಕ್ಕೆ ಅಖಿಲ ಕರ್ನಾಟಕ ಹೆಳವ ಸಮಾಜದ ರಾಜ್ಯ‌‌ ನಿರ್ದೇಶಕ ಬಸವರಾಜ ಹೆಳವರ ಯಾಳಗಿ ಆಗ್ರಹಿಸಿದ್ದಾರೆ.