ಅಲೆಮಾರಿ ಬುಡಕಟ್ಟು:ಶೇಷ ಪ್ಯಾಕೇಜ್ ಘೋಷಣೆ ಒತ್ತಾಯ

ಸಿರವಾರ.ಜೂ೧೧- ಕೋವಿಡ್ ೧೯ ವೈರಸ್ ಹಿನ್ನೆಲೆಯಲ್ಲಿ ದೇಶದಲ್ಲಿ ಏರಿಕೆ ಮಾಡಿರುವ ಲಾಕ್‌ಡೌನ್ ನಿಂದಾಗಿ ಅಲೆಮಾರಿ ಬುಡಕಟ್ಟು ಸಮಾಜದ ಸಮಾಜದವರಿಗೆ ದುಡಿಯಲು ಕೆಲಸವಿಲ್ಲದೆ ಒಂದೊಪ್ಪತಿನ ಊಟಕ್ಕೂ ತೊಂದರೆಯಾಗಿದೆ.
ಆದರಿಂದ ಅಲೆಮಾರಿ ಬುಡಕಟ್ಟು ಸಮಾಜದ ಎಲ್ಲಾ ಒಳಪಂಗಡಗಳಿಗೆ ಮುಖ್ಯಮಂತ್ರಿಗಳು ಪ್ಯಾಕೇಜ್ ಘೋಷಣೆ ಮಾಡುವಂತೆ ಅಲೆಮಾರಿ ಬುಡಕಟ್ಟು ಸಮಾಜದ ಜಿಲ್ಲಾಧ್ಯಕ್ಷ ಡಿ.ಯಮನೂರು ಮುಖ್ಯಮಂತ್ರಿಗಳಿಗೆ ಬರೆದ ಪತ್ರವನ್ನು ತಹಸೀಲ್ದಾರರಿಗೆ ಹಾಗೂ ಪ.ಪಂ ಮುಖ್ಯಾಧಿಕಾರಿಗೆ ನೀಡುವ ಮೂಲಕ ಒತ್ತಾಯಿಸಿದ್ದಾರೆ.
ಈ ಕುರಿತು ಸಂಜೆವಾಣಿ ಯೊಂದಿಗೆ ಮಾತನಾಡಿದ ಅವರು ಅಲೆಮಾರಿ ಬುಡಕಟ್ಟು ಸಮಾಜವು ಪ.ಜಾ/ ವರ್ಗಗಳ ೧೫೧ ಉಪ ಜಾತಿಗಳಲ್ಲಿ ೭೪ ಅಲೆಮಾರಿ ಅಬಾದಿತ ಬುಡಕಟ್ಟು ವಿಬಾದಿತ ಸುಮಾರು ೧೦ ಲಕ್ಷಕ್ಕೂ ಅದಿಕ ಜನಸಂಖ್ಯೆಯನ್ನು ಹೊಂದಿದೆ. ಅಲೆಮಾರಿ ಸಮಾಜದವರು ಒಂದೆ ಕಡೆ ಇರದೆ ಹೆಚ್ಚಾಗಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಅಲೆಯುತಾ ಪಾರಂಪರಿಕ ಕಲೆಯನ್ನೆ ನಂಬಿಕೊಂಡಿದ್ದಾರೆ.ಸಮಾಜದವರಿಗೆ ಅನೇಕರಿಗೆ ಭೂಮಿ ಇಲ್ಲದ ಕಾರಣ ಕೂಲಕಸಬನ್ನೆ ನಂಬಿಕೊಂಡಿದ್ದಾರೆ ದೇಶದಲ್ಲಿ ಏರಿಕೆ ಮಾಡಿರುವ ಲಾಕ್ ಡೌನ್ ನಿಂದಾಗಿ. ಇವರಿಗೆ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿ ಊಟಕ್ಕೂ ತೊಂದರೆಯಾಗಿದೆ. ಈಗಿನ ಪರಸ್ಥಿತಿಯಲ್ಲಿಯೂ ಸಮಾಜಕ್ಕೆ ಆರ್ಥಿಕ ನೇರವಿನ ಅವಶ್ಯಕತೆ ಇದೆ ಸಮಾಜಕ್ಕೆ ವಿಶೇಷ ಪ್ಯಾಕೇಜ್ ನೀಡುವ ಮೂಲಕ ನೇರವಾಗಬೇಕು ಎಂದು ಕೊರಿದ್ದಾರೆ.
ಈ ಸಂದರ್ಭದಲ್ಲಿ ಹನುಮಂತ, ಖಾಸಿಂ ಮೊತ್ತಿ, ಮೌನೇಶ, ಸಿ.ಎಂ.ಬಸವರಾಜ ಭಜಂತ್ರಿ ಸೇರಿದಂತೆ ಇನ್ನಿತರರು ಇದ್ದರು.