ಅಲೆಮಾರಿ ಜಿಲ್ಲಾ ಸಲಹಾ  ಸಮಿತಿ ಸದಸ್ಯರಾಗಿ ಪಿ.ತಿಮ್ಮಪ್ಪ ಯಾದವ್ ನೇಮಕ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜು.19: ಜಿಲ್ಲಾ ಹಿಂದುಳಿದ ವರ್ಗಗಳ  ಇಲಾಖೆ ವ್ಯಾಪ್ತಿಯ   ಅಲೆಮಾರಿ/ಅರೆ ಅಲೆಮಾರಿ ಜಿಲ್ಲಾ ಸಲಹಾ ಸಮಿತಿಯ ಸದಸ್ಯರನ್ನಾಗಿ 3 ವರ್ಷ ಅವಧಿಗೆ ಪಿ. ತಿಮಪ್ಪ ಯಾದವ್ ಅವರನ್ನು ಬಳ್ಳಾರಿ ಜಿಲಾಧಿಕಾರಿ  ಪವನಕುಮಾರ ಮಲಪಾಟಿ ನೇಮಕ ಮಾಡಿದ್ದಾರೆ.
ನೇಮಕದ ಆದೇಶದ ಪ್ರತಿಯನ್ನು ಹಿಂದುಳಿದ ವರ್ಗಗಳ  ಇಲಾಖೆಯ ಜಿಲ್ಲಾ ಅಧಿಕಾರಿಗಳಾದ ಸುರೇಶ ಬಾಬು ಪಿ.ತಿಮ್ಮಪ್ಪ ಯಾದವ್ ಅವರಿಗೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ವಕೀಲ ವೆಂಕಟೇಶ್ ಯಾದವ್, ಇನ್ನು ಹಲವರು ಉಪಸ್ಥಿತರಿದ್ದರು.
ಪಿ.ತಿಮ್ಮಪ್ಪ ಯಾದವ್ ಅವರು  ಅಲೆಮಾರಿ/ಅರೆ ಅಲೆಮಾರಿ ಜಿಲ್ಲಾ ಸಲಹಾ ಸಮಿತಿಯ ನಾಮನಿರ್ದೇಶಿತ ಸದಸ್ಯರಾಗಿ ನೇಮಕವಾದುದ್ದನ್ನು ಸ್ವಾಗತಿಸಿ. ಅಲೆಮಾರಿ ಸಮುದಾಯದ 46 ಜಾತಿಯ ಹಿಂದುಳಿದ ವರ್ಗದ ಶೋಷಿತ ಸಮುದಾಯವನ್ನು ಗುರುತಿಸಿ ಮೂಲ ಸೌಲಭ್ಯವನ್ನು ಒದಗಿಸಿಕೊಡಲು ಸಹಕರಿಸಬೇಕೆಂದು ಅಧಿಕಾರಿಗಳು ತಿಳಿಸಿದರು.

Attachments area