ಅಲೆಮಾರಿ ಜನಾಂಗದವರಿಗೆ ಹಣ್ಣು, ಮಾಸ್ಕ್ ವಿತರಣೆ

ಬೀದರ.ಮಾ.28: ಜಗದಾದಿ ಜಗದ್ಗುರು ಶ್ರೀ ರೇಣುಕಾಚಾರ್ಯರ ಯುಗಮಾನೋತ್ಸವ ನಿಮಿತ್ಯ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ನೌಬಾದನಲ್ಲಿರುವ ಅಲೆಮಾರಿ ಜನಾಂಗದವರಿಗೆ ಮಾಸ್ಕ್ ಮತ್ತು ಹಣ್ಣು-ಹಂಪಲುಗಳನ್ನು ವಿತರಿಸುವುದರ ಮುಖಾಂತರ ಆಚರಿಸಿದರು.

ಸಾಯಂಕಾಲ 5 ಗಂಟೆಗೆ ಅಲೆಮಾರಿ ಜನಾಂಗದವರ ಹತ್ತಿರ ತೆರಳಿದ ಪ್ರಮುಖರು ಬಡಮಕ್ಕಳಿಗೆ ಅವರ ಸುರಕ್ಷತೆಗಾಗಿ ಮಾಸ್ಕ್ ಮತ್ತು ಹಣ್ಣು-ಹಂಪಲು ನೀಡಿ ಮಾನವೀಯತೆ ಮೆರೆದರು.

ದೇಶಪಾಂಡೆ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷರು ಹಾಗೂ ಖ್ಯಾತ ಹಿರಿಯ ಸಾಹಿತಿ ಡಾ. ಎಂ.ಜಿ. ದೇಶಪಾಂಡೆ ಈ ಸಂದರ್ಭದಲ್ಲಿ ಮಾತನಾಡಿ, “ರೇಣುಕಾಚಾರ್ಯರ ಜೀವನ ಮತ್ತು ವಿಚಾರಧಾರೆಗಳನ್ನು ತಮ್ಮ ಜೀವನದಲ್ಲ ಅಳವಡಿಸಿಕೊಂಡಾಗ ಮಾತ್ರ ಜೀವನದಲ್ಲಿ ಮಾನವೀಯತೆಯಿಂದ ಬದುಕಲು ಸಾಧ್ಯ ಎಂದರು. ರೇಣುಕರ ಜಯಂತಿ ನಿಮಿತ್ಯ ಮಾನವೀಯತೆಯನ್ನು ಮೆರೆದ ಪ್ರಮುಖರು ಬಡಮಕ್ಕಳಿಗೆ ಹಣ್ಣು, ಮಾಸ್ಕ್ ವಿತರಿಸಿದ್ದಕ್ಕಾಗಿ ಅಭಿನಂದನೆ ಸಲ್ಲಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಗೌರವ ಕಾರ್ಯದರ್ಶಿ ಡಾ. ರಾಜಕುಮಾರ ಹೆಬ್ಬಾಳೆ ಮಾತನಾಡಿ, “ರೇಣುಕರ ತತ್ವಾದರ್ಶಗಳನ್ನು ಜನಸಾಮಾನ್ಯರಲ್ಲಿ ಮೂಡಿಸಲು ಮಕ್ಕಳಿಗೆ ಇಂದು ಸಹಾಯ ಹಸ್ತ ಚಾಚಲಾಗಿದೆ. ರೇಣುಕಾಚಾರ್ಯರ ಮುಖ್ಯ ತತ್ವ ಆದರ್ಶಗಳು ಭಾರತೀಯರಿಗೆ ತಿಳಿಸಬೇಕಾಗಿದೆ. ಇದು ಇಂದಿನ ಕಾಲದಲ್ಲಿ ಅತ್ಯವಶ್ಯಕವಾಗಿದೆ ಎಂದು ನುಡಿದರು.

ಕೇಂದ್ರ ಜಾಗೃತಿ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ ಮಾತನಾಡಿ, “ರೇಣುಕಾಚಾರ್ಯರು ಮನುಕುಲದ ಉದ್ಧಾರಕ್ಕಾಗಿ ಜನಿಸಿ ಬಂದಿದ್ದಾರೆ. ಇಡೀ ಜಗತ್ತನ್ನು ಶಿವತತ್ವದ ಮೂಲಕ ಸಂಸ್ಕಾರ ತುಂಬಲು ಜಗದ್ಗುರು ರೇಣುಕರು ಪ್ರಯತ್ನಿಸಿದ್ದಾರೆ. ಪಂಚಾಚಾರ್ಯರ ಆಶೀರ್ವಾದದಿಂದ ಇಂದು ಕೋವಿಡ್ ತೊಲಗಲಿ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಲಾಡಗೇರಿ ಮಠದ ಪೂಜ್ಯ ಷ.ಬ್ರ ಗಂಗಾಧರ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಅರವಿಂದ ಕುಲಕರ್ಣಿ, ಶಿವಶರಣಪ್ಪ ಗಣೇಶಪುರ, ಸಂಜೀವಕುಮಾರ ಸ್ವಾಮಿ, ಸಿದ್ದು ಫುಲಾರಿ, ಅನಂತ ಕುಲಕರ್ಣಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.