ಅಲೆಮಾರಿ ಜನಾಂಗದವರಿಗೆ ದಿನಸಿ ಕಿಟ್ ವಿತರಣೆ

ಹರಪನಹಳ್ಳಿ.ಜೂ.3; ಮಹಾಮರಿ ಕೊರೊನಾ ವೈರಸ್‌ನಿಂದ ಜನಸಾಮನ್ಯರು ಕಂಗಾಲಾಗಿದ್ದು ಲಾಕ್ ಡೌನಗೆ ಒಳಾಗಾಗಿರುವ ಬಡವರು. ನಿರ್ಗತಿಕರು ಅಲೆಮಾರಿಗಳು.ಸಂಕಷ್ಟಕ್ಕೆ ಒಳಾಗಾಗಿದ್ದು ಇವರ ನಿತ್ಯ ಬದುಕಿಗಾಗಿ ಬವಣೆ ಪಡುವಂತಹ ಪರಸ್ಥಿತಿ ನಿರ್ಮಾಣವಾದ ಹಿನ್ನಲೆ ಪುರಸಭೆ ಅದ್ಯಕ್ಷ ಮಂಜುನಾಥ ಇಜಂತ್‌ಕರ್‌ರವರು ಪಟ್ಟಣದ ಆದಿ ಬಸವೇಶ್ವರ ನಗರದ ಅಸರೆ ಕ್ಯಾಂಪಿನಲ್ಲಿರುವ ಕೈಮಗ್ಗ ಕೂಲಿ ಕಾರ್ಮಿಕರಿಗೆ, ನಿರ್ಗಕತಿಕರಿಗೆ.ಅಲೆಮಾರಿ ಜನಾಂಗದವರಿಗೆ ಧವಸ ಧಾನ್ಯ ಹಾಗೂ ತರಕಾರಿ ಕಿಟ್‌ಗಳನ್ನು ವಿತರಿಸಿದರು ಈ ವೇಳೆ ಮಾತನಾಡಿದ ಅವರು ಸಾಂಕ್ರಾಮಿಕ ರೋಗಕ್ಕೆ ತುತ್ತಾದವರು ಸಮಯಕ್ಕೆ ಸರಿಯಾಗಿ ಔಷದಿಗಳನ್ನು ಸೇವನೆ ಮಾಡಬೇಕು ಮನೆಯ ಸುತ್ತಮುತ್ತ ಸ್ವಚ್ಚತೆ ಕಾಪಾಡಬೇಕು ಕಡ್ಡಾಯವಾಗಿ ಮಾಸ್ಕ ಧರಿಸಿ ಸಮಾಜಿಕ ಅಂತರ ಕಾಪಾಡಬೇಕು ಎಂದು ಸಲಹೆ ನೀಡಿದರು. ಈ ಸಂಧರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಬಿ.ಆರ್. ನಾಗರಾಜನಾಯ್ಕ, ಸಮೂದಾಯ ಸಂಘಟಕ ಸಿ. ಲೋಕ್ಯಾನಾಯ್ಕ ಸೇರಿದಂತೆ ಇತರರು ಇದ್ದರು.