
ಸಂಜೆವಾಣಿ ವಾರ್ತೆ
ಹೂವಿನಹಡಗಲಿ, ಮಾ.07: ಪಟ್ಟಣದ ಕಾಯಕನಗರದಲ್ಲಿ ತಾತ್ಕಾಲಿಕ ಗುಡಿಸಲು ಹಾಕಿಕೊಂಡಿರುವ ನಿರಾಶ್ರಿತ ಅಲೆಮಾರಿ ಕುಟುಂಬಗಳಿಗೆ ವಸತಿ ಯೋಜನೆ ಅಡಿ ನಿವೇಶನ ನೀಡಬೇಕು ಎಂದು ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ ಒತ್ತಾಯಿಸಿದರು.
ಅಲೆಮಾರಿ ಕುಟುಂಬದ ಸದಸ್ಯರೊಂದಿಗೆ ತಾಲೂಕು ಕಚೇರಿಗೆ ತೆರಳಿ ಉಪ ತಹಶೀಲ್ದಾರ್ ಮಲ್ಲಿಕಾರ್ಜುನ ಅವರಿಗೆ ಮನವಿ ಸಲ್ಲಿಸಿದರು.
ಈ ಹಿಂದೆ ಸಂತೆ ಮೈದಾನದಲ್ಲಿ ನೆಲೆಸಿದ್ದ ಅಲೆಮಾರಿ ಕುಟುಂಬಗಳನ್ನು ನೆಮ್ಮದಿ ಊರು ಯೋಜನೆ ಸಲುವಾಗಿ ಒಕ್ಕಲೆಬ್ಬಿಸಲಾಯಿತು. ಅವರೆಲ್ಲರಿಗೂ ಬದಲಿ ನಿವೇಶನ ನೀಡುವ ಭರವಸೆಯೊಂದಿಗೆ ಎಂಟು ವರ್ಷಗಳ ಹಿಂದೆ ಕುಟುಂಬಗಳನ್ನು ಸ್ಥಳಾಂತರಿಸಲಾಗಿತ್ತು. ಈವರೆಗೂ ಜನಪ್ರತಿನಿಧಿಗಳು, ಅಧಿಕಾರಿಗಳು ಅವರಿಗೆ ನಿವೇಶನ ನೀಡಿಲ್ಲ. ಬಹು ದಿನಗಳಿಂದ ಕಾಯಕನಗರದ ಬಯಲಲ್ಲಿ ವಾಸಿಸುವ ಈ ಕುಟುಂಬಗಳಿಗೆ ಶಾಶ್ವತ ನೆಲೆ ಕಲ್ಪಿಸಲು ಮುಂದಾಗಬೇಕು ಎಂದು ಎಂದು ಒತ್ತಾಯಿಸಿದರು.
ಶಿವಕುಮಾರ ಪತ್ರಿಮಠದ, ಮಂಜುನಾಥ ಪಾಟೀಲ್, ಸಂತೋಷ, ರೇಷ್ಮಾ, ಗಂಗಮ್ಮ, ರೇಣುಕಾ, ಸುಜಾತ, ಪುಷ್ಪಾವತಿ, ಇತರರು ಇದ್ದರು.