ಅಲೆಮಾರಿ ಅಭಿವೃದ್ಧಿ ಅನುಷ್ಟಾನ ಸಮಿತಿ

ಆಯ್ಕೆಯಲ್ಲಿ ಅನ್ಯಾಯ- ಸರಿಪಡಿಸಲು ಒತ್ತಾಯ
ರಾಯಚೂರು.ನ.13- ಅಲೆಮಾರಿ ಅನುಷ್ಠಾನ ಸಮಿತಿ ನಾಮನಿರ್ದೇಶಿತ ಸದಸ್ಯತ್ವ ಆಯ್ಕೆಯಲ್ಲಿ ಅಲೆಮಾರಿ ಮಾಲ ದಾಸರಿ, ಚನ್ನದಾಸರು, ಹೊಲೆಯ ದಾಸರು ಸಮುದಾಯಗಳ ಅಭ್ಯರ್ಥಿಗಳಿಗೆ ಅನ್ಯಾಯವಾಗಿದ್ದು, ಸರಿಪಡಿಸುವಂತೆ ಒತ್ತಾಯಿಸಿ ರಾಯಚೂರು ತಾಲ್ಲೂಕು ಚೆನ್ನದಾಸರ, ಮಾಲದಾಸರಿ, ಹೊಲೆಯ ದಾಸರ ಸಮಾಜ ಸೇವಾ ಸಂಘ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.
ಅಲೆಮಾರಿ ಜನಾಂಗದವರು ಭಿಕ್ಷೆ ಬೇಡುತ್ತಾ ಜೀವನ ನಡೆಸುತ್ತಿದ್ದಾರೆ. ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಮತ್ತು ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಜಿಲ್ಲೆಯ ಅಲೆಮಾರಿ ಸಮುದಾಯಗಳಲ್ಲಿ ಎರಡನೇ ಬಹುಸಂಖ್ಯಾತರಾಗಿದ್ದಾರೆ. ನಮ್ಮನ್ನು ಜಿಲ್ಲಾಮಟ್ಟದ ಅಲೆಮಾರಿ ಅಭಿವೃದ್ಧಿ ಅನುಷ್ಠಾನ ಸಮಿತಿ ನಾಮನಿರ್ದೇಶಿತ ಆಯ್ಕೆಯಲ್ಲಿ ಕೈಬಿಟ್ಟಿರುವುದು ಸಮುದಾಯಕ್ಕೆ ಅನ್ಯಾಯ ಮಾಡಿದಂತಾಗಿದೆ.
ಅಲೆಮಾರಿ ಮಾಲ ದಾಸರಿ, ಚೆನ್ನದಾಸರು ಹೊಲಯ ದಾಸರು ಸಮುದಾಯಗಳ ಅಭ್ಯರ್ಥಿಗಳನ್ನು ಅಲೆಮಾರಿ ಅಭಿವೃದ್ಧಿ ಅನುಷ್ಠಾನ ಸಮಿತಿಗೆ ನಾಮನಿರ್ದೇಶನ ಸದಸ್ಯತ್ವಕ್ಕೆ ಕನಿಷ್ಠ ಒಬ್ಬರನ್ನು ಸದಸ್ಯರನ್ನಾಗಿ ಮತ್ತು ಇನ್ನೊಬ್ಬರನ್ನು ವಿಶೇಷ ಆಹ್ವಾನಿತರನ್ನಾಗಿ ಆಯ್ಕೆ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಅಧ್ಯಕ್ಷ ಹನುಮಂತು, ಉಪಾಧ್ಯಕ್ಷ ವೆಂಕಟೇಶ, ಕಾರ್ಯದರ್ಶಿ ಜಿ.ರಂಗಮುನಿದಾಸ, ಜಂಟಿ ಕಾರ್ಯದರ್ಶಿ ಗುರುನಂದನ್, ಗೋಪಾಲ ತುರುಕನಡೋಣಿ, ಗೋಪಾಲ್, ನರಸಿಂಹ, ನಾಗೇಶ, ದೇವಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.