ಅಲೆಮಾರಿಗಳಿಗೆ ಫುಡ್ ಕಿಟ್ ವಿತರಣೆ

ಜಗಳೂರು.ಮೇ.೨೬; ಇಂಡಿಯನ್ ಡೆವಲಪ್ಮೆಂಟ್ ಆರ್ಗನೈಜೇಷನ್ ಸಂಸ್ಥೆ ವತಿಯಿಂದ 20ಅಲೆಮಾರಿ  ಕುಟುಂಬಗಳಿಗೆ ಫುಡ್ ಕಿಟ್ ವಿತರಣೆ ಮಾಡಲಾಯಿತು.ಕೊರೋನ ವೈರಸ್ ಹಿನ್ನೆಲೆಯಲ್ಲಿ ಲಾಕ್ಡೌನ್ ಘೋಷಣೆಯಾಗಿ ಕೆಲವು ದಿನಗಳು ಕಳೆಯುತ್ತಿದೆ ಜಗಳೂರು ತಾಲೂಕು ಅತ್ಯಂತ ಬಡ ತಾಲೂಕು  ಕೂಲಿ ಕಾರ್ಮಿಕರು ರೈತ ವರ್ಗದ ಜನರೇ ಹೆಚ್ಚು ವಾಸಿಸುತ್ತಿದ್ದು ಕಷ್ಟದಲ್ಲಿದ್ದಾರೆ.ಜಗಳೂರು ಪಟ್ಟಣದ ಅಶ್ವತ್ ರೆಡ್ಡಿ ನಗರದ ಹೊರವಲಯದಲ್ಲಿ ವಾಸಿಸುತ್ತಿರುವ ಅರೆ ಅಲೆಮಾರಿ.ಸುಡುಗಾಡು ಸಿದ್ದರು ಹಕ್ಕಿಪಿಕ್ಕಿ ಜನಾಂಗದ 20ಕ್ಕೂ ಹೆಚ್ಚು ಕುಟುಂಬಗಳಿಗೆಇಂಡಿಯನ್ ಡೆವಲಪ್ಮೆಂಟ್ ಆರ್ಗನೈಜೇಷನ್ ಸಂಸ್ಥೆ ವತಿಯಿಂದ ಮಾಸ್ಕ್ ಮತ್ತು ಫುಡ್ ಕಿಟ್ ಗಳನ್ನು ಪೊಲೀಸ್ ಆರಕ್ಷಕ ಉಪ ನಿರೀಕ್ಷಕರಾದ  ಸಂತೋಷ್ ಬಾಗೋಜಿ  ನೇತೃತ್ವದಲ್ಲಿ ವಿತರಿಸಲಾಯಿತು.ಈ ವೇಳೆ ಸಂಸ್ಥೆಯ ನಿರ್ದೇಶಕರಾದ ಮೋಹನ್ ಕುಮಾರ್.ಜಿ.ಎಸ್ ,ಎ. ಎಸ್.ಐ ಚಂದ್ರಶೇಖರ್,  ಸಂಸ್ಥೆ ಪ್ರಧಾನ ಕಾರ್ಯದರ್ಶಿ ಮಂಜುನಾಥ್.ಖಜಾಂಚಿ ಸಂತೋಷ್, ಸದಸ್ಯರಾದ  ಪ್ರಶಾಂತ್. ನಾಗಭೂಷಣ್ ಮತ್ತು ಪೊಲೀಸ್ ಸಿಬ್ಬಂದಿ ಮಾರುತಿ,ನಾಗರಾಜ್,ವಕೀಲರಾದ ಉಮಾಪತಿ. ಮುಖಂಡರಾದ ಚೌಡಪ್ಪ  ಇದ್ದರು.