ಅಲೆಮಾರಿಕಾಲೋನಿಯ ಅಭಿವೃದ್ಧಿಗೆ ಒತ್ತು

ಕುರುಗೋಡು. ಜ. 1 ಸಮೀಪದ ಕುಡುತಿನಿ ಪಟ್ಟಣಪಂಚಾಯಿತಿ ವ್ಯಾಪ್ತಿಯ ಅಲೆಮಾರಿಕಾಲೋನಿಯನ್ನು ಮೂಲಭೂತ ಸೌಕರ್ಯಗಳಿಂದ ಅಭಿವೃದ್ದಿಪಡಿಸಿ ಮಾದರಿಕಾಲೋನಿಯನ್ನಾಗಿ ಮಾಡುವ ಗುರಿ ಹೊಂದಲಾಗಿದೆ ಎಂದು ಕುಡುತಿನಿ ಪಟ್ಟಣ ಪಂಚಾಯಿತಿ ಅದ್ಯಕ್ಷ ವಿ.ರಾಜಶೇಖರ್ ಭರವಸೆ ನೀಡಿದರು.
ಅವರು ಶುಕ್ರವಾರ ಸಮೀಪದ ಕುಡುತಿನಿ ಪಟ್ಟಣದ ಅಲೆಮಾರಿ ಕಾಲೋನಿಯಲ್ಲಿ ಹೊಸವರ್ಷದ ನಿಮಿತ್ತ ‘ಶ್ರೀಸಾಯಿಬಾಬಾ’ ದಿನದರ್ಶಿಕೆ-2021 ನ್ನು ಬಿಡುಗಡೆಗೊಳಿಸಿ, ನಂತರ ಅವರಿಗೆ ಉಚಿತವಾಗಿ ವಿತರಿಸಿ ಮಾತನಾಡಿ ಕುಡುತಿನಿ ಪಟ್ಟಣದ ಅಲೆಮಾರಿ ಕುಟುಂಬಗಳು ಸ್ವಾತಂತ್ರಬಂದು ಹಲವಾರು ವರ್ಷಗಳು ಕಳೆದರೂ ಅವರಿಗೆ ಕುಡಿಯುವ ನೀರು, ಚರಂಡಿವ್ಯವಸ್ತೆ, ಬೀದಿದೀಪ ಸೇರಿದಂತೆ ಇತರೆ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಟೆಂಟ್‍ನಲ್ಲೇ ಜೀವನ ಸಾಗಿಸುವ ಅಲೆಮಾರಿ ಕುಟುಂಬಗಳ ಜೀವನ ನಿಜಕ್ಕೂ ಶೋಚನೀಯವಾಗಿದೆ. ಆದ್ದರಿಂದ ಅಲೆಮಾರಿಕುಟುಂಬಗಳ ದುಸ್ಥಿತಿಯನ್ನು ಕಂಡು ಡಿಎಂಎಫ್ ಅನುದಾನದ ರೂ.66ಲಕ್ಷವೆಚ್ಚದಿಂದ ಅಲೆಮಾರಿ ಕುಟುಂಬಗಳಿಗೆ ಉಚಿತ ನಿವೇಶನ, ಮತ್ತು ವಸತಿಯನ್ನು ಶೀಘ್ರವೇ ಮಂಜೂರುಮಾಡಲಾಗುವುದು ಎಂದು ಭರವಸೆ ನೀಡಿದರು.
ಪ್ರಾರಂಭದಲ್ಲಿ ಕುಡುತಿನಿ ಪಟ್ಟಣಪಂಚಾಯಿತಿ ಅದ್ಯಕ್ಷ ವಿ.ರಾಜಶೇಖರ್ ರವರು ಅಲೆಮಾರಿ ಕಾಲೋನಿಗೆ ತೆರಳಿ ಶ್ರೀಸಾಯಿಬಾಬಾ ದಿನದರ್ಶಿಕೆ-2021ನ್ನು ವಿತರಿಸಿ ನಂತರ ಹೊಸವರ್ಷವನ್ನು ಅಲೆಮಾರಿಕುಟುಂಬದೊಂದಿಗೆ ಆಚರಿಸಿಕೊಂಡರು. ಕುಡುತಿನಿ ಪಟ್ಟಣಪಂಚಾಯಿತಿ ಸದಸ್ಯ ಜಿಎಸ್.ವೆಂಕಟರಮಣಬಾಬು, ಕಾಲೋನಿಯ ಮುಖಂಡ ಎಂ.ಗಂಗಾಧರ್, ಕ್ರುಷ್ಣ, ದುರ್ಗ, ಸ್ವಾಮಿ, ಅಣ್ಣಪ್ಪ, ಯಲ್ಲಮ್ಮ, ಜಯಮ್ಮ, ಕುಬೇರ, ರುದ್ರಪ್ಪ, ಸೇರಿದಂತೆ ಇತರೆ ಅಲೆಮಾರಿ ಕುಟುಂಬಸ್ಥರು ಇದ್ದರು.