ಅಲಿಯಂಬರ್ ಗ್ರಾಪಂನಲ್ಲಿ 63 ಜನರಿಗೆ ಕೋವಿಡ್ ಲಸಿಕೆ

ಬೀದರ ಏ. 04: ಗ್ರಾಮ ಪಂಚಾಯಿತಿಯ ಕಾರ್ಯಪಡೆಯು ಕಾಳಜಿ ವಹಿಸಿ, ಜಿಲ್ಲಾಧಿಕಾರಿಗಳು ಹಾಗು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳ ಆದೇಶದಂತೆ ಅಲಿಯಂಬರ ಗ್ರಾಮದ 63 ಜನರಿಗೆ ಕೋವಿಡ್ ಲಸಿಕೆ ನೀಡಲಾಗಿದೆ.
ಯರನಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ನೇರವಿನಿಂದ ಅಲಿಯಂಬರ ಗ್ರಾಮದಲ್ಲಿ 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ನೀಡಲು ಲಸಿಕಾ ಕೇಂದ್ರ ತೆರೆಯಲಾಗಿದೆ. ಈ ಸಂದರ್ಭದಲ್ಲಿ ಅಲಿಯಂಬರ ಪಿ.ಡಿ.ಓ ಪಿಡಿಓ ವಿಜಯಶೀಲಾ, ಗ್ರಾಮ ಪಂಚಾಯಿತಿ ಕಾರ್ಯಪಡೆಯ ಸದಸ್ಯರಾದ ಡಾ.ಶಾಂತಲಿಂಗ ಪಾಟೀಲ, ರಮೇಶ, ಗ್ರಾ.ಪಂ ಸಿಬ್ಬಂದಿ ನರಸಿಂಗ್, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಗು ಹಿರಿಯ ನಾಗರೀಕರು ಉಪಸ್ಥಿತರಿದ್ದರು.