ಅಲಿಯಂಬರ್‍ನಲ್ಲಿ ಡಾ.ಹೆಬ್ಬಾಳೆ ಪರ ಮತಯಾಚನೆ

(ಸಂಜೆವಾಣಿ ವಾರ್ತೆ)
ಬೀದರ: ಎ.19:ತಾಲೂಕಿನ ಅಲಿಯಂಬರ್ ಗ್ರಾಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಕಾಂಕ್ಷಿ ಡಾ.ರಾಜಕುಮಾರ ಹೆಬ್ಬಾಳೆ ಪರವಾಗಿ ಭರ್ಜರಿ ಪ್ರಚಾರ ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ಅಲ್ಲಿಯ ಕಸಾಪ ಅಜೀವ ಸದಸ್ಯರಿಂದ ಸನ್ಮಾನಿತರಾಗಿ ಮಾತನಾಡಿದ ಡಾ.ಹೆಬ್ಬಾಳೆ ಅವರು, ಈಗಾಗಲೇ ಜಾನಪದ ಪರಿಷತ್ತಿನ ಹಾಗೂ ರಾಷ್ಟ್ರೀಯ ಜಾನಪದ ಬುಡಕಟ್ಟು ಹಾಗೂ ಕಲಾ ಪರಿಷತ್ತು ವತಿಯಿಂದ ಜಿಲ್ಲೆಯ ಕಲಾವಿದರನ್ನು ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವ ಕಾರ್ಯ ನಡೆಯುತ್ತಿದೆ. ನೂರಾರು ಕಲಾವಿದರಿಗೆ ಮಾಶಾಸನ ಕೊಡಿಸುವ, ಅವರನ್ನು ರಾಷ್ಟ್ರದ ಇತರೆ ಕಡೆಗಳಲ್ಲಿ ಅವರ ಕಲೆ ಪ್ರದರ್ಶಿಸುವ ಅವಕಾಶ ಕಲ್ಪಿಸಲಾಗಿದೆ. ಈ ವರ್ಷ ಬೀದರ್‍ನಲ್ಲಿ ಅಂತರಾಷ್ಟ್ರೀಯ ಜಾನಪದ ಉತ್ಸವ ಆಯೋಜಿಸುವ ಎಲ್ಲ ತಯ್ಯಾರಿದೆ ಇದ್ದು ಕೋವಿಡ್ ಮಹಾಮಾರಿ ಮುಗಿದಾಕ್ಷಣ ಆ ಕಾರ್ಯ ಜರುಗಲಿದೆ. ತಾವೆಲ್ಲರು ಕಸಾಪ ಚುನಾವಣೆಯಲ್ಲಿ ಆಶಿರ್ವದಿಸಿದರೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತನ್ನು ರಾಷ್ಟ್ರ ಮಟ್ಟದಲ್ಲಿ ಕೊಂಡೊಯ್ಯುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದೆಂದು ಭರವಸೆ ನೀಡಿದರು.
ಹಿರಿಯ ಕಸಾಪ ಸದಸ್ಯರಾದ ರಾಮಕೃಷ್ಣ ಸಾಳೆ, ಶಿವಶರಣಪ್ಪ ಗಣೇಪೂರ, ಪ್ರಕಶ ಕನ್ನಾಳೆ, ಶಿವಕುಮರ ಸ್ವಾಮಿ ಮನ್ನಳಿ, ಬಸವರಾಜ ಹೆಗ್ಗೆ, ಜಿಲಲಲಲಲಾ ಪಚಾಯತ್ ಮಾಜಿಅಧ್ಯಕ್ಷ ಸಂಗಮೇಶ ಪಾಟೀಲ, ಹಾಲಿ ಗ್ರಾಮ್ ಪಂಚಾಯತ್ ಅಧ್ಯಕ್ಷ ರಿತೇಶ ಬಿರ್ನಾಳೆ, ಸ್ಥಳಿಯ ಕಸಾಪ ಸದಸ್ಯರಾದ ಕಲ್ಲಪ್ಪ ಉಪ್ಪೆ, ಶಿವಸ್ವಾಮಿ, ಶಿವಾನಂದ ಮಡಿವಾಳ, ಗುರುನಾಥ ಹಾಲಕೊಡೆ, ಗುರುನಾಥ ಹೂಗಾರ, ಘಾಳೆಪ್ಪ ಬಾಬಶೆಟ್ಟಿ, ಚಂದ್ರಶೇಖರ ಗಾದಗೆ ಸೇರಿದಂತೆ ಇತರರು ಉಪಸ್ಥಿತರಿದ್ದರು. ಮಹಾರುದ್ರ ಡಾಕುಳಗಿ ವಂದಿಸಿದರು.