ಅಲಾಸ್ಕದಲ್ಲಿಟ್ರಂಪ್‌ಗೆ ಗೆಲುವು

ವಾಷಿಂಗ್ಟನ್, ನ ೧೨- ತೀವ್ರ ಕುತೂಹಲ ಕೆರಳಿಸಿದ್ದ ಈ ಬಾರಿಯ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಈಗಾಗಲೇ ಜೋ ಬೈಡನ್‌ಅಭೂತ ಪೂರ್ವ ಗೆಲುವು ಸಾಧಿಸಿದ್ದಾರೆ. ಈಗ ಅಮೆರಿಕಅಧ್ಯಕ್ಷಡೊನಾಲ್ಡ್‌ಟ್ರಂಪ್‌ಅವರ ಮತಗಳ ಸಂಖ್ಯೆ ೨೧೭ಕ್ಕೆ ಏರಿದೆ.
ಅಲಾಸ್ಕಾದಲ್ಲಿಟ್ರಂಪ್ ಜಯಗಳಿಸಿದ್ದು ಮೂರುಎಲೆಕ್ಟೋರ್ ಮತಗಳನ್ನು ಪಡೆದಿದ್ದಾರೆ. ರಿಪಬ್ಲಿಕನ್ ಪಕ್ಷಇಲ್ಲಿ ಸೆನೆಟ್ ಸ್ಥಾನವನ್ನು ಉಳಿಸಿಕೊಂಡಿದೆ. ಪಕ್ಷದಡಾನ್ ಸುಲೈವನ್‌ಅವರು ಜಯಗಳಿಸಿದ್ದಾರೆ.
ಅಮೆಕರಿದ ಸೆನೆಟ್‌ನಲ್ಲಿಒಟ್ಟು ನೂರು ಸದಸ್ಯರಿದ್ದು, ರಿಪಬ್ಲಿಕನ್ ಪಕ್ಷ ಈಗ ಒಟ್ಟು ೫೦ ಮಂದಿ ಸದಸ್ಯರನ್ನು ಹೊಂದಿದೆ.
ಡೆಮಾಕ್ರೆಟಿಕ್ ಪಕ್ಷಒಟ್ಟು ೪೮ ಸ್ಥಾನಗಳನ್ನು ಹೊಂದಿದ್ದು, ಸೆನೆಟ್‌ನಎರಡು ಸ್ಥಾನಗಳಿಗೆ ಜನವರಿಐದರಂದುಚುನಾವಣೆ ನಡೆಯಲಿದೆ.
ಒಟ್ಟು ೫೩೮ ಎಲೆಕ್ಟೋರಲ್ ಮತಗಳ ಪೈಕಿ ಜೋ ಬೈಡನ್‌ಅವರು ೨೭೯ ಮತಗಳನ್ನು ಪಡೆದಿದ್ದು, ಈಗಾಗಲೇ ಅವರನ್ನು ವಿಜಯಿಎಂದು ಘೋಷಿಸಲಾಗಿದೆ.
ಚುನಾವಣೆಯಲ್ಲಿಅಕ್ರಮ ನಡೆದಿದೆಎಂದು ಆರೋಪಿಸಿ ಟ್ರಂಪ್‌ಎರಡು ಬಾರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಆದರೆಅವರು ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಾಲಯ ವಜಾಗೊಳಿಸಿತ್ತು.