ಅಲಬೂರು ಹಾಲು ಉತ್ಪಾದಕರ ಸಂಘಕ್ಕೆ ಬೆಳ್ಳಿ ಹಬ್ಬದ ಸಂಭ್ರಮ

ಸಂಜೆ ವಾಣಿ ವಾರ್ತೆ
ಕೊಟ್ಟೂರು ಅ 04 : ತಾಲೂಕಿನ ಅಲಬೂರು ಗ್ರಾಮದ ಹಾಲು ಉತ್ಪಾದಕರ ಸಂಘದ ಬೆಳ್ಳಿ ಹಬ್ಬದ ಸಂಭ್ರಮ ಆಚರಿಸಿದರು.
 ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕರು ಹಾಗೂ ರಾಬಕೊ ಅಧ್ಯಕ್ಷರಾದ ಶ್ರೀ ಎಸ್.ಭೀಮನಾಯ್ಕ ಉದ್ಘಾಟಿಸಿ ಮಾತನಾಡಿದ ಅವರು ಅಲಬೂರು ಗ್ರಾಮದ ಹಾಲು ಉತ್ಪಾದಕರ ಸಂಘಕ್ಕೆ  ಈಗ ಬೆಳ್ಳಿ ಹಬ್ಬದ ಸಂಭ್ರಮ. ಡೇರಿಯು ಯಶಸ್ವಿಯಾಗಿ 25 ವರ್ಷ ಪೊರೈಸಿದ್ದು, ಇದರ ನೆನಪಿಗಾಗಿ ಸದಸ್ಯರಿಗೆ ಬೆಳ್ಳಿನಾಣ್ಯ, ಸ್ಟೀಲ್ ಕ್ಯಾನ್, ಗಡಿಯಾರ ನೀಡುವುದರ ಮೂಲಕ ಬೆಳ್ಳಿ ಹಬ್ಬದ ಸಂಭ್ರಮ ಅರ್ಥಪೂರ್ಣಗೊಳಿಸಿದ್ದಾರೆ  ಗ್ರಾಮಸ್ಥರು ಹೈನುಗಾರಿಕೆ ಆದ್ಯತೆ ನೀಡುವ ಮೂಲಕ ಆರ್ಥಿಕವಾಗಿ ಸಬಲರಾಗಿದ್ದಾರೆ ಎಂದು ವ್ಯಕ್ತಪಡಿಸಿದರು.
Attachments area